ಮಂಗಾಪುರ ಗ್ರಾಮಕ್ಕೆ ಎರಡನೇ ಡಾಕ್ಟರೇಟ್ ಪದವಿ ಲಭಿಸಿದೆ.
ಮಂಗಾಪುರ ಸ.26

ಉಜ್ಜಿನಿ ಸಮೀಪದ ಮಂಗಾಪುರ ಗ್ರಾಮದ ಎಸ್ ವೀರಣ್ಣ ನಿ. ಪೊಲೀಸ್ ಇವರ ಮಗ ಎಸ್. ರುದ್ರೇಶ್ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸೆಪ್ಟಂಬರ್ 24 ಮಂಗಳವಾರ 74 ನೇ. ಘಟಿಕೋತ್ಸವದಲ್ಲಿ. ಲಿಂಗ ದೃಷ್ಟಿಕೋನ ದೊಂದಿಗೆ ಶಿಕ್ಷಣ ಮತ್ತು ಅಭಿವೃದ್ಧಿ ಅಧ್ಯಯನದ ನಡುವಿನ ಪರಸ್ಪರ ಸಂಬಂಧಗಳು ಎಂಬ ವಿಷಯ ಕುರಿತು ಪಿ.ಎಚ್.ಡಿ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಯಿತು.

ಇದರೊಂದಿಗೆ ಮಂಗಾಪುರ ಗ್ರಾಮಕ್ಕೆ 58 ವರ್ಷಗಳ ನಂತರ ಮತ್ತೆ ಪಿ.ಎಚ್.ಡಿ ಪದವಿ ದೊರೆತಿರುವುದು ಗ್ರಾಮದಲ್ಲಿ ಸಂಭ್ರಮಾಚರಣೆ ವಾತಾವರಣ ಇದೆ 1966 ರಲ್ಲಿ ನಮ್ಮ ಗ್ರಾಮದವರಾದ. ಡಾ, ಮಠದ ಶಿವಮೂರ್ತಿ ಸ್ವಾಮಿಯವರಿಗೆ. ಆಸ್ಟ್ರೇಲಿಯಾ ದೇಶದ ಕ್ಯಾನ್ ಬೇರಾದಲ್ಲಿ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ ಪದವಿಗೆ ಭಾಜನರಾದದ್ದನ್ನು ಇಲ್ಲಿ ಸ್ಮರಿಸಬಹುದು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ