ಪಟ್ಟಣದ ಶಾಸಕರ ಭವನದ ಮುಂದೆ ಕಂದಾಯ ನೌಕರರ ಮೇಲೆ ಒತ್ತಡ – ಕೈ ಬಿಡುವಂತೆ ಆಗ್ರಹಿಸಿ ಪ್ರತಿಭಟನೆ.
ಮಾನ್ವಿ ಸ.26

ರಾಜ್ಯದಲ್ಲಿ ಕಂದಾಯ ನೌಕರರಿಗೆ ನಾನಾ ಯೋಜನೆಗಳ ಅಭಿವೃದ್ಧಿಗೆ ಸರಕಾರ ಒತ್ತಡ ಹೇರುವ ಕೆಲಸ ಹಚ್ಚಿದ್ದರಿಂದ ಸಮಸ್ಯೆಯಾಗಿದ್ದು, ಸರಕಾರ ಕೂಡಲೇ ಕೈಬಿಡಬೇಕು ಎಂದು ಕಂದಾಯ ನೌಕರರು ಮಾನ್ವಿ ಪಟ್ಟಣದಲ್ಲಿ ಪ್ರತಿಭಟಿಸಿದರು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಶಾಸಕರ ಭವನದಲ್ಲಿ ಕಂದಾಯ ನೌಕರರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿ, ಎಲ್ಲಾ ಕೆಲಸ ಕಾರ್ಯಕ್ಕೆ ನೌಕರರನ್ನು ಬಳಸಿ ಕೊಳ್ಳುತ್ತಿರುವುದರಿಂದ ಮಾನಸಿಕ ಹಿಂಸೆಯಾಗಿದೆ ಎಂದು ಕಿಡಿಕಾರಿದರು.

ಸರಕಾರ ನಮ್ಮ ಸಮಸ್ಯೆಗಳನ್ನು ಅರಿತು ಎಲ್ಲಾ ಯೋಜನೆಗಳಿಗೆ ಬಳಕೆ ಮಾಡಿ ಕೊಳ್ಳುತ್ತಿರುವುದನ್ನು ಕೈ ಬಿಡಬೇಕು. ಹಾಗೆಯೇ ಮಾನ್ವಿ ಕಂದಾಯ ಕಚೇರಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ಕನಕ್ಕುಂದ.ಮಾನ್ವಿ