ಮೊಹಮ್ಮದ್ ಪೈಗಂಬರ್ ಅವರ 28 ರಂದು ಖಾದ್ರಿ ಫಂಕ್ಷನ್ ಹಾಲ್ ನಲ್ಲಿ ಕಾರ್ಯಕ್ರಮ ಜರುಗುವುದು.
ಮಾನ್ವಿ ಸ.27

ಪ್ರವಾದಿ ಮುಹಮ್ಮದ್ ಅವರ ಸಂದೇಶ ತಿಳಿಸುವ ಸಲುವಾಗಿ ಮಾನವ ಕುಲಕ್ಕೆ ಒಳಿತಾಗಲಿ ಎಂಬ ಉದ್ದೇಶದಿಂದ ಸೆಪ್ಟೆಂಬರ್ 28 ರಂದು ಖಾದ್ರಿ ಫಂಕ್ಷನ್ ಹಾಲ್ ನಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಮುಸ್ಲಿಂ ಧರ್ಮದ ಗುರು ಸಜ್ಜಾದ್ ಹುಸೇನ್ ಮತವಾಲೆ ತಿಳಿಸಿದರು.ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಖಾದ್ರಿ ಫಂಕ್ಷನ್ ಹಾಲ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಮೊಹಮ್ಮದ್ ಪೈಗಂಬರ್ ಅವರ ವಿಚಾರ ತಿಳಿಯಲು ನಾವು ಯಾವ ರೀತಿಯಲ್ಲಿ ಇರಬೇಕು ಎಂಬ ಸಂದೇಶ ತಿಳಿಯಲು ಎಲ್ಲಾ ಧರ್ಮದವರು ಹಾಗೂ ಸಂಘಟನಾಕಾರರು ಬರಬೇಕು ಎಂದು ಮನವಿ ಮಾಡಿ ಕೊಂಡರು.ಪೈಗಂಬರ್ ಅವರ ವಿಚಾರ ತಿಳಿಸಲು ನಾನಾ ರಾಜ್ಯದ ಮುಸ್ಲಿಂ ಧರ್ಮದ ಗುರುಗಳು ಬರಲಿದ್ದಾರೆ. ಅಂದು ಗಣ್ಯಾತಿ ಗಣ್ಯರು ಭಾಗವಹಿಸಲಿದ್ದಾರೆ. ಹೀಗಾಗಿ ಮುಸ್ಲಿಂ ಸಮಾಜದವರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ