“ಗೌರವಿಸುವ ಮನದವರಿಗೆ ನಮಸ್ಕಾರದಿ ಪುರಸ್ಕರಿಸು”…..

ತನು ಮನ ಧನ ಸಹಾಯದಿ ಬಳಸುವ ನಿಜ
ಸಿರಿ
ಕಾಮ ಕ್ರೋಧ ಲೋಭ ಮೋಹ ಮದ
ಮಾತ್ಸರ್ಯ ಆರು ಶತ್ರು ನಾಶ ಮಾಡು
ಸುಭಾವದಿ ನಗು ಮೌನ ವಿನಯ ಬಳಸುವ
ಸಾಮರ್ಥ್ಯ ಇರಲಿ
ಕೀಳು ಅವಮಾನ ಕುಲದ ಜಾತಕ ಬಳಸದಿರು
ಸ್ನೇಹಿತರ ಸಹೋದರ ಸಂಬಂಧ ಸ್ವಾರ್ಥತೆಗೆ
ಬಳಸದಿರು
ತಂದೆ ತಾಯಿ ಗುರು ಹಿರಿಯರ
ಅವಮಾನಿಸದಿರು
ಮನೋವಿಕಲ ವಿಕಲ ಚೇತನರಿಗೆ ಸಹಾಯ
ಹಸ್ತ ಚಾಚು
ನಂಬಿಕೆಯ ಮುಗ್ಧರಿಗೆ ದ್ರೋಹ ಬಗೆಯದಿರು
ಸಿರಿ ಹಣ ಗಳಿಕೆಗೆ ನಯವಂಚಕ
ಹೊಂಚುತನಬೇಡ
ಕಷ್ಟ ನಷ್ಟದಿ ಹೆದರಿ ನಿಷ್ಠೆ ಪ್ರಾಮಾಣಿಕತೆ
ಬಿಡದಿರು
ಶ್ರಮ ವಿರದ ಉಚಿತತೆಯ ಸೌಲಭ್ಯ
ತಿರಸ್ಕರಿಸು
ಗೌರವಿಸುವ ಮನದವರಿಗೆ ನಮಸ್ಕಾರದಿ
ಪುರಸ್ಕರಿಸು
ಸಮಯಕ್ಕಾದವರನ್ನು ಕೃತಜ್ಞನಾಗಿರು
ಗಂಡ /ಹೆಂಡತಿ ಬೇರೆಯವರ ಮುಂದೆ
ಅವಮಾನಿಸದಿರು
ಮಕ್ಕಳ ಏದಿರು ತಂದೆ ತಾಯಿ ಗುರುವಿನ ತಪ್ಪು
ಹೇಳದಿರು
ಶ್ರೀ ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟೆ