ಕೆರುಟಗಿ ತಾಂಡಕ್ಕೆ ಕುಡಿಯುವ ನೀರು ಕೊಡಿ – ಜಯ ಕರ್ನಾಟಕ ಸಂಘಟನೆ ಯಿಂದ ಆಗ್ರಹ.
ಕೆರುಟಗಿ ಸ.27

ದೇವರ ಹಿಪ್ಪರಗಿ ತಾಲೂಕಿನ ಕೆರುಟಗಿ ಗ್ರಾಮ ಪಂಚಾಯತಿ ಸಿಬ್ಬಂದಿಯಾದ ಕಾಂತು ರಾಠೋಡ, ಇವರಿಗೆ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಯಿತು, ಈ ಹೋರಾಟದ ನೇತೃತ್ವವನ್ನು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರರು, ಹಾಗೂ ಸಿಂದಗಿ ತಾಲೂಕಾ ಉಸ್ತುವಾರಿಗಳು ಚನ್ನಪ್ಪಗೌಡ ಎಸ್, ಬಿರಾದಾರ, ಇವರು ಕೆರುಟಗಿ ತಾಂಡಾದಲ್ಲಿ ಕುಡಿಯುವ ನೀರು ಸಾಕಷ್ಟು ಇದ್ದು ಅದನ್ನು ಸರಿಯಾಗಿ ಪೂರೈಸುತ್ತಿಲ್ಲ ವಾಟರ್ ಮ್ಯಾನ್ ಹಲವಾರು ತಿಂಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಯಾಗುತ್ತಿದೆ ಮೇಲ್ಲಾಧಿಕಾರಿಗಳು ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿದರು, ಹಾಗೂ ದೇವರ ಹಿಪ್ಪರಗಿ ತಾಲೂಕಾಧ್ಯಕ್ಷರಾದ ಸಿದ್ರಾಮಪ್ಪ ಎಸ್, ಅವಟಿ, ಕೆರುಟಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಮತ್ತು ಕಾರ್ಯದರ್ಶಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂದು ಹೇಳಿದರು, ಈ ಸಮಸ್ಯಗಳಿಗೆ ಮೇಲ್ಲಾಧಿಕಾರಿಗಳು ಒಂದು ವಾರದಲ್ಲಿ ಸ್ಪಂದಿಸದ್ದಿದ್ದರೆ ಗ್ರಾಮ ಕಾರ್ಯಲಯದ ಮುಂದೆ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಉಗ್ರವಾದ ಹೋರಾಟವನ್ನು ಕೈಕೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಸಿದರು. ಮತ್ತು ಸಿಂದಗಿ ತಾಲೂಕಾಧ್ಯಕ್ಷರು, ಸಂತೋಷ ಮನಗೂಳಿ, ಹಾಗೂ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳಾದ ರಮೇಶ ರಾಠೋಡ, ಬಸವರಾಜ ಇಂಗಳಗಿ, ಸಂತೋಷ ಅಂಗಡಿ, ಮತ್ತು ಗ್ರಾಮ ಘಟಕದ ಪದಾಧಿಕಾರಿಗಳು ಸುಭಾಸ ಚಟ್ಟರಕಿ, ಶಿವಕಾಂತ ರಾಠೋಡ, ಬಾಬು ಚವ್ಹಾಣ, ಅಪ್ಪು ಚಟ್ಟರಕಿ, ನಿಂಗರಾಜ ಚವ್ಹಾಣ,ಬಾಬು ರಾಠೋಡ, ದೇವಸಿಂಗ್ ರಾಠೋಡ, ಮೋಹನ ಚವ್ಹಾಣ,ಮಲ್ಲನಗೌಡ ಬಿರಾದಾರ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ