ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ವಿರುದ್ಧ ಪ್ರತಿಭಟನೆ.
ಮಾನ್ವಿ ಸ.27

ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಮಾನ್ವಿಯಲ್ಲಿ ಮುಸ್ಲಿಂ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.ಟಿಪ್ಪು ಸುಲ್ತಾನ್ ಒಬ್ಬ ಮಹಾವೀರ ಅವರ ಇತಿಹಾಸ ತಿಳಿಯದೆ ಶಾಸಕ ಯತ್ನಾಳ್ ಅವರು ಪ್ರತಿ ಭಾರಿಯು ಮುಸ್ಲಿಂ ಸಮಾಜದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತದಲ್ಲಿ ಬ್ರಿಟೀಷರು ಆಕ್ರಮಣ ಮಾಡಿದಾಗ ಹುಲಿ ಎಂದೇ ಹೆಸರು ವಾಸಿಯಾದ ಟಿಪ್ಪು ಸುಲ್ತಾನ್ ಅವರು ಸಿಂಹ ಸ್ವಪ್ನವಾಗಿದ್ದರು. ಆದರೆ ಯತ್ನಾಳ್ ಅವರು ಇಂತಹ ಹೇಳಿಕೆ ನೀಡಿ ಸಮಾಜವನ್ನು ಹದಗೆಡಿಸುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ