ವಿಶ್ವಕರ್ಮ ಸಮಾಜದವರು ಸರ್ಕಾರದ ಸೌಲತ್ತುಗಳು ಪಡೆಯಬೇಕು ಎಂದ ಶಾಸಕರು.
ರಾಂಪುರ ಸ.30

ಇಂದು ರಾಂಪುರದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮತ್ತು ವಿಶ್ವಕರ್ಮ ಸಮಾಜದ ನಾಗರಿಕರಿಗೆ ಸರ್ಕಾರದ ಯೋಜನೆಗಳನ್ನು ನೀವು ಪಡೆಯಬೇಕು ನಿಮ್ಮ ಸಮುದಾಯ ಸ್ವಂತ ಉದ್ಯೋಗದಿಂದ ಬದುಕುತ್ತಿದ್ದೀರಿ ಬಡಿಗಿ ಕೆಲಸ ಇನ್ನು ಹಲವಾರು ಕೈ ಕಸುಬು ಕೆಲಸಗಳಲ್ಲಿ ಪಾಲ್ಗೊಂಡು ಜೀವನ ನಡೆಸುತ್ತಿದ್ದೀರಿ ನಿಮ್ಮ ಮಕ್ಕಳ ಶಿಕ್ಷಣದಲ್ಲಿ ಮುಂದಾಗಿರಿ ಸರ್ಕಾರದ ಹಲವಾರು ಯೋಜನೆಗಳು ನಿಮ್ಮ ಸಮುದಾಯದವರಿಗೆ ಬರುತ್ತವೆ ಕೌಶಲ್ಯ ಅಭಿವೃದ್ಧಿಯಲ್ಲಿ ಮಹಿಳೆಯರು ಮತ್ತು ನಿಮ್ಮ ಮನೆಯಲ್ಲಿ ಓದುವ ಮಕ್ಕಳು ಸಮವಸ್ತ್ರ ಶಾಲೆಗಳಲ್ಲಿ ಸರ್ಕಾರದ ಅನುದಾನವನ್ನು ನೀವು ಪಡೆಯಬೇಕು ಈಗ ಐದು ಪಂಚ ಗ್ಯಾರಂಟಿ ಭಾಗ್ಯಗಳನ್ನು ನೀವು ಪಡೆದಿದ್ದೀರಿ ಅದು ನಮ್ಮ ಕಾಂಗ್ರೆಸ್ ಸರ್ಕಾರದಿಂದ ಶಿಕ್ಷಣ ಆರೋಗ್ಯ ಮೂಲಭೂತ ಸೌಕರ್ಯಗಳು ಹಲವಾರು ಯೋಜನೆಗಳು ಬರುತ್ತವೆ ಇವನ್ನೆಲ್ಲ ನಿಮ್ಮ ಸಮುದಾಯದವರು ಪಡೆಯಬೇಕು ಎಂದು ಶಾಸಕರು ತಿಳಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು