ಹೆಚ್.ಮರಿಯಪ್ಪ. ನವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಂದ – ಗೌರವ ಸನ್ಮಾನ ಕಾರ್ಯಕ್ರಮ.
ಕಂಪ್ಲಿ ಸ.30

ಭಾನುವಾರ ದಂದು ನಡೆದ ಎಸ್.ಗೊಂಗಡ ಶೆಟ್ಟಿ ಕಲ್ಯಾಣ ಮಂಟಪ ಇಲಕಲ್ಲನಲ್ಲಿ ಗಣ್ಯರ ಸಮ್ಮುಖದಲ್ಲಿ.ವಿಷ್ಣು ಸೇನಾ ಸಂಘಟಣೆ V.S.S (ರ) ಓಂಕಾರ ಫಿಲಂಸ್ ಗೆಳೆಯರ ಬಳಗ ಇಲಕಲ್ಲ. ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನದಲ್ಲಿ. ಕಂಪ್ಲಿ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕ ಹೆಚ್ ಮರಿಯಪ್ಪ ನವರ ಶಿಕ್ಷಣ ಸೇವೆಯನ್ನು ಗುರುತಿಸಿ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಮರಿಯಪ್ಪ ಹೆಚ್ ತಂದೆ ಕಜ್ಜಿ ತಿಮ್ಮಪ್ಪ ಹೊಸ ನೆಲ್ಲೂಡಿ ಗ್ರಾಮ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕು ಪಿನ್/ಕೋಡ್ 583113, 7676867638, 7892580993, 9620275872 ಶಿಕ್ಷಣ:- ಪ್ರಾಥಮಿಕ ಶಿಕ್ಷಣವನ್ನು ಹೊಸ ನೆಲ್ಲೂಡಿಯ ಸ್ವ ಗ್ರಾಮದಲ್ಲಿ ಮುಗಿಸಿ. 2006-07 ಸಾಲಿನಲ್ಲಿ ಎಮ್ಮಿಗನೂರಿನ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ ಶಿಕ್ಷಣವನ್ನು ಪಡೆದು, 2009-10 ನೇ ಸಾಲಿನಲ್ಲಿ ಎಮ್ಮಿಗನೂರನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಶಿಕ್ಷಣವನ್ನು ಮಾಡಿ. 2011-12 ಶ್ರೀಮತಿ ಸರಳಾ ದೇವಿ ಕಾಲೇಜು ಬಳ್ಳಾರಿಯಲ್ಲಿ ಬಿ.ಎ ಪದವಿಯನ್ನು ಪಡೆದು.2012-13 ನೇ ಸಾಲಿನಲ್ಲಿ ರಾಯಲ್ ಬಿ.ಎಡ್ ಕಾಲೇಜು ಬಳ್ಳಾರಿಯಲ್ಲಿ ಬಿ.ಇಡಿ. ತರಬೇತಿ ಮುಗಿಸಿದರು. 2015-16 ನೇ ಸಾಲಿನಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಂಪಿ, ಎಂ.ಎ. ಸಾಮಾಜ ಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಪ್ಯಾರಾಮೇಡಿಕಲ್ ನಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ತರಬೇತಿ ಕೂಡ ಮುಗಿಸಿದ್ದಾರೆ. 2024-25 ನೇ ಸಾಲಿನಲ್ಲಿ ಕೊಪ್ಪಳ ಕಾಲೇಜು ನಲ್ಲಿ ಎಲ್.ಎಲ್.ಬಿ. ಶಿಕ್ಷಣಕ್ಕೆ ದಾಖಲೆ ಮಾಡಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಸೇವೆ:- 2015-16 ಮೊದಲ ಶ್ರೀ ರಾಜರಾಜೇಶ್ವರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಗುರುಗಳು ಹಾಗೂ ಕನ್ನಡ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು. ನಂತರ 2017-18 ನೇ ಸಾಲಿನಲ್ಲಿ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆ, ಕಂಪ್ಲಿಯಲ್ಲಿ ಕನ್ನಡ ಶಿಕ್ಷಕ ಹಾಗೂ ಮುಖ್ಯ ಗುರುಗಳಾಗಿ ಸೇವೆ ಮಾಡುತ್ತಾ,ಸತತ ಹತ್ತು ವರ್ಷಗಳ ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಶ್ರೀ ಮಾತಾ ಮೊಂಟಸರಿ ವಿದ್ಯೆ ಸಂಸ್ಥೆ (ರಿ) ಅಡಿಯಲ್ಲಿ ನಡೆಯುತ್ತಿರುವ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳು ಹಾಗೂ ಸಂಸ್ಥೆಯ ಅಧ್ಯಕ್ಷರಾಗಿ ಶಾಲೆಯನ್ನು ಎತ್ತರ ಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾರೆ. ಸಾಮಾಜಿಕ ಸೇವೆ:- ಕರ್ನಾಟಕ ಪದವೀಧರ ವೇದಿಕೆ ಕಂಪ್ಲಿ ತಾಲೂಕಿನ ಖಾಜಾಂಚಿ ಕರ್ನಾಟಕ ಪ್ರೆಸ್ ಕೌನ್ಸಿಲ್ ಕ್ಲಬ್ ಕಂಪ್ಲಿ ತಾಲೂಕಿನ ಅಧ್ಯಕ್ಷರು. ಶ್ರೀ ಮಾದಾರ ಚೆನ್ನಯ್ಯ ಸಂಘದ ಕಂಪ್ಲಿ ಘಟಕದ ಉಪಾಧ್ಯಕ್ಷರು. ಅಖಿಲ ಕರ್ನಾಟಕ ಅಯ್ಯಪ್ಪ ಸ್ವಾಮಿ ಸೇವಾ ಸೈನಾ ರಕ್ತದಾನಿಗಳ ಬಳಗದ ಆಪ್ತ ಸಹಾಯಕರು. ಪತ್ರಿಕೆ ರಂಗದಲ್ಲಿ:- ವಿಜಯನಗರ ವಾಣಿ ದಿನ ಪತ್ರಿಕೆ ಕಂಪ್ಲಿ ತಾಲೂಕಿನ ವರದಿಗಾರರು. ಈ ಲೋಕ ದಿನ ಪತ್ರಿಕೆ ವರದಿಗಾರರು. ಬಳ್ಳಾರಿ ದ್ವನಿ ಮಾಸ ಪತ್ರಿಕೆಯ ಉಪ ಸಂಪಾದಕರು. ಪ್ರಸ್ತುತ ಕಂಪ್ಲಿ ನಗರದ ಸಿದ್ಧಿ ಟಿ.ವಿ ವಾಹಿಯ ಆಪ್ತ ಸಹಾಯಕರು ಮತ್ತು ಉಪ ಸಂಪಾದಕರು.ಸಾಧನೆ:- ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸತತ 7 ವರ್ಷಗಳ ಕಾಲ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ತಂದು ಕೊಟ್ಟವರು. ವಿಶೇಷವಾಗಿ 2023-24 ನೇ ಸಾಲಿನಲ್ಲಿಎಸ್.ಎಸ್.ಎಲ್.ಸಿ ಪರೀಕ್ಷೆಯ ವೇಬ್ ಕ್ಯಾಮೆರಾದ ಟಫ್ ರೋಲ್ಸ್ ನಲ್ಲಿ ಕಂಪ್ಲಿ ಮತ್ತು ಕುರುಗೋಡು ಹಾಗೂ ವಿಜಯನಗರ ತಾಲೂಕಿನಲ್ಲಿ 100% ಫಲಿತಾಂಶ ತಂದು ಕೊಟ್ಟ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆ ಶಾಲೆಯ ಏಕೈಕ ಮುಖ್ಯ ಗುರುಗಳು. ಎಂದು ಅಖಂಡ ಬಳ್ಳಾರಿ ಜಿಲ್ಲೆಗೆ ಚಿರ ಪರಿಚಿತರಾದ ಇವರು ನಮ್ಮ ಪಾಲಿನ ಬರದ ಭೂಮಿಯ “ಭಗೀರಥ” ಇಂಥ ಗುರುಗಳನ್ನು ಪಡೆದ ನಮ್ಮ ಜಿಲ್ಲೆ ಎಂದು ಹೆಮ್ಮೆಯಿಂದ ಹೇಳೋಣ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ.ಎಚ್.ಎಂ ರಾಜಕುಮಾರ್.ಕಂಪ್ಲಿ.ಬಳ್ಳಾರಿ