ಕರ್ನಾಟಕ ಕನ್ನಡ ಸಾಹಿತ್ಯ ಲೋಕ ನೆಲಮಂಗಲ ಚತುರಂಗ ತಜ್ಞ ನಾಡಪ್ರಭು ಕೆಂಪೇಗೌಡರ ಕವನ ಸಂಕಲನ ಬಿಡುಗಡೆ ಹಾಗೂ ದಸರಾ ಕವಿ ಗೋಷ್ಠಿಯಲ್ಲಿ – ಕು, ಜ್ಯೋತಿ ಆನಂದ ಚಂದುಕರ ಇವರಿಗೆ ಸನ್ಮಾನ.
ಬಾಗಲಕೋಟೆ ಅ.01

ಉದಯೋನ್ಮುಖ ಸಾಹಿತಿ ಮತ್ತು ಕವಿಯತ್ರಿಯಾದ ಕು. ಜ್ಯೋತಿ ಆನಂದ ಚಂದುಕರ ಇವರು ತಮ್ಮನ್ನು ತಾವು ಸಾಹಿತ್ಯ ಕ್ಷೇತ್ರದಲ್ಲಿ ಕೂಡಾ ತೊಡಗಿಸಿ ಕೊಂಡಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಹಲವಾರು ಕವಿ ಗೋಷ್ಠಿಯಲ್ಲಿ ಆಯ್ಕೆಯಾಗಿ ಮತ್ತು ಅನೇಕ ಪ್ರಶಸ್ತಿಗಳನ್ನು ಪಡೆದು ಕೊಂಡು ಸಣ್ಣ ವಯಸ್ಸಿನಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡು ಸಾಧನೆಯತ್ತ ಮುಂದೆ ನುಗ್ಗುತ್ತಿರುವ ಬಾಗಲಕೋಟೆಯ ಯುವ ಪ್ರತಿಭೆಯಾದ ಕು. ಜ್ಯೋತಿ ಆನಂದ ಚಂದುಕರ ಇವರ ಕನಸುಗಳು ಆದಷ್ಟು ಬೇಗ ಈಡೇರಲೆಂದು ಮತ್ತು ಮುಂದೊಂದು ದಿನ ಯುವ ಮಕ್ಕಳಿಗೆ ಆದರ್ಶವಾಗಿ ಈ ಸಾಹಿತಿ ನಿಲ್ಲಲೆಂದು ಆಶೀರ್ವದಿಸುತ್ತೇನೆ.ಕನ್ನಡ ಸಾಹಿತ್ಯ ಲೋಕ ನೆಲಮಂಗಲ ಶ್ರೀ ಪವಾಡ ಬಸವಣ್ಣ ದೇವಸ್ಥಾನ ನೆಲಮಂಗಲ ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ದಸರಾ ಕವಿ ಗೋಷ್ಠಿ ಹಾಗೂ ಚತುರಂಗ ತಜ್ಞ ಕೆಂಪೇಗೌಡ ಅವರ ಕವನ ಸಂಕಲನ ಲೋಕಾರ್ಪಣಾ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಾಗಲಕೋಟ ಜಿಲ್ಲೆಯ ಯುವಕವಿ ಕು. ಜ್ಯೋತಿ ಆನಂದ ಚಂದುಕರ ಇವರು ಅತ್ಯಂತ ಸುಂದರವಾಗಿ ಕೆಂಪೇಗೌಡರ ಬಗ್ಗೆ ಕವನ ವಾಚನ ಮಾಡಿದ್ದಕ್ಕಾಗಿ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರಜಾಕವಿ ನಾಗರಾಜ್ ಗುರುಗಳು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕವನ ಸಂಕಲನ ಲೋಕಾರ್ಪಣೆ ಹಾಗೂ ಕವಿ ಗೋಷ್ಠಿಯನ್ನು ಯಶಸ್ವಿ ಗೊಳಿಸಿದರು.