ಕೋಗಳಿ ಗ್ರಾಮದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ.
ಕೋಗಳಿ ಅ.01

ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದ ಶ್ರೀ ವಿನಾಯಕ ಹಿರಿಯ ನಾಗರಿಕರ ಸಂಘದಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ. ಸಂಘದ ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ನೇತ್ರ ಸಂಜೀವಿನಿ ಕಣ್ಣಿಗೆ ಅಮೃತ ಬಿಂದು ಬಿಡುವ ಕಾರ್ಯಕ್ರಮ.ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಇಂದು ವಿನಾಯಕ ಹಿರಿಯ ನಾಗರೀಕ ಸಂಘದ ವತಿಯಿಂದ 5 ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು,

ಶ್ರೀ ಪಂಚಾಕ್ಷರಿ ಚರಂತರ್ಯ ಸ್ವಾಮಿಗಳು ಗದ್ದಿಕೇರಿ ಮಠ ಇವರು ದಿವ್ಯ ಸಾನಿಧ್ಯ ವಹಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದ್ದರು. ಕಾರ್ಯಕ್ರಮದಲ್ಲಿ ಕಣ್ಣಿನ ಸಮಸ್ಯೆ ಇರುವವರಿಗೆ ಉಚಿತ ನೇತ್ರ ಸಂಜೀವಿನಿ ಅಮೃತ ಬಿಂದು ಬಿಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಣ್ಣಿಗೆ ಅಮೃತ ಬಿಡುವ ಕಾರ್ಯಕ್ರಮವನ್ನು ಡಾ, ಮಹೇಶ್ ಮತ್ತು ತಂಡದವರು ನೆರವೇರಿಸಿದರು. ಗ್ರಾಮದ ಸುಮಾರು 150 ಕ್ಕೂ ಹೆಚ್ಚು ಜನ ಇದರ ಸದುಪಯೋಗ ಪಡೆದು ಕೊಂಡರು.

ಸಂಘದ ಹಿರಿಯ ಸದಸ್ಯರಾದ ಬಿ ಉಮಾಪತಿ ಮತ್ತು ಜಿ ಸಂಗೊಡೆಪ್ಪ ಇವರಿಗೆ ಸ್ವಾಮೀಜಿಗಳು ಸನ್ಮಾನ್ಯ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಕ್ರಸಾಲಿ ದೊಡ್ಡವೀರಪ್ಪ ವಹಿಸಿ ಕೊಂಡಿದ್ದರು. ಹಿರಿಯ ನಾಗರೀಕ ಸಂಘದ ಅಧ್ಯಕ್ಷರಾದ ಹೆಚ್. ವೀರಭದ್ರಪ್ಪ,ಉಪಾಧ್ಯಕ್ಷರಾದ ಬಿ.ಉಮಾಪತಿ,ಕಾರ್ಯದರ್ಶಿ ಮತ್ತೂರು ಬಸವರಪ್ಪ , ಖಜಾಂಚಿ ಗಚ್ಚಿನ ಕೊಟ್ರೇಶಪ್ಪ, ಸದಸ್ಯರಾದ ವಿ ಎಂ ಚಂದ್ರಶೇಖರಯ್ಯ,ಎನ್ ವಿಶ್ವಾನಾಥ್ ಗೌಡ, ಹೊಂಬಾಳಿ ಕೊಟ್ರೇಶಪ್ಪ,ಮತ್ತೂರು ಮಹೇಶಪ್ಪ,ಎನ್ ಗುರು ಬಸವನಗೌಡ,ಹೆಚ್ ಎಂ ಅಶೋಕಯ್ಯ, ನವ್ವಪ್ಪ ಎಂ ಶೇಖರಪ್ಪ, ಮೇಘರಾಜ ಮುಂತಾದವರು ಉಪಸ್ಥಿತರಿದ್ದರು.ಪಂಚಾಕ್ಷರಿ ಸಂಗೀತ ಪಾಠಶಾಲಾ ಮಕ್ಕಳು ಪ್ರಾಥನೆ ಗೀತೆ ಹಾಡಿದರು. ಹೆಚ್ ಎಂ ಶಂಕ್ರಯ್ಯ ನವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು