ಕನ್ನಡ ನಾಡು ನುಡಿ ಉಳಿವಿಗಾಗಿ ಕನ್ನಡಿಗರನ್ನು ಎಚ್ಚರಿಸಿ – ರಾಜುಗೌಡ ಪಾಟೀಲ.
ತಾಳಿಕೋಟೆ ಅ.02

ಬಾರಿಸು ಕನ್ನಡ ಡಿಂಡಿಂವ ಓ ಕರ್ನಾಟಕ ಹೃದಯ ಶಿವ,ಎಂಬ ನಾಡ ನುಡಿಯಂತೆ ತಾಳಿಕೋಟಿ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕನ್ನಡಾಂಬೆಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕರ್ನಾಟಕ ನಾಡು ನುಡಿ ಉಳಿವಿಗಾಗಿ ಕನ್ನಡಿಗರನ್ನು ಎಚ್ಚರ ಗೊಳಿಸಿ ಕನ್ನಡ ಭಾಷೆ ನಾಡಿನ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸಲು ಶ್ರಮಿಸುವಂತೆ ಮಾಡಲು ಹಾಗೂ ನಮ್ಮ ಭಾಷೆಯ ಮಹತ್ವವನ್ನು ತಿಳಿಸಿ ಕೊಡುವ ಇಂತಹ ಸಮ್ಮೇಳನಗಳನ್ನು ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ಕೆ ನಿಜಕ್ಕೂ ಕೂಡ ಶ್ಲಾಘನೀಯ, ಹಾಗೂ ಪಟ್ಟಣದಲ್ಲಿ ನಡೆದ ಪ್ರಥಮ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ನನ್ನ ಕನ್ನಡದ ಹೃದಯಗಳಿಗೆ ನನ್ನ ಕೋಟಿ ಕೋಟಿ ನಮನಗಳು ಎಂದು ಮಾತಾನಾಡಿದ ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ವಿಶೇಷ ಸನ್ಮಾನಿಸಲಾಯಿತು. ಈ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ, ಗುರುಪಾದ ಘಿವಾರಿ ರವರು ಕಾರ್ಯಗಳನ್ನು ಉದ್ಘಾಟನೆ ಮಾಡಿದರು, ಹಾಗೂ ಮುದ್ದೇಬಿಹಾಳ ಶಾಸಕರಾದ ಸಿ.ಎಸ್ ನಾಡಗೌಡ,ವಿಧಾನ ಪರಿಷತ್ತ ಸದಸ್ಯರಾದ ಹಣಮಂತ ನಿರಾಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಹಾಸಿಂ ಪೀರ ವಾಲಿಕಾರ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಆರ್.ಎಲ್ ಕೊಪದ ಸೇರಿದಂತೆ ಹಾಗೂ ತಾಲ್ಲೂಕಿನ ತಹಶಿಲ್ದಾರರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಮಸ್ತ ಕನ್ನಡ ಸಾಹಿತ್ಯಗಳು ಹಾಗೂ ಕನ್ನಡ ಅಭಿಮಾನಿಗಳು, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ