ದಸರಾ ಅಮಾವಾಸ್ಯೆಗೆ ಸೇರಿದ ಭಕ್ತ ಸಾಗರ.
ಕೊಟ್ಟೂರು ಅ.03

ಪಟ್ಟಣದ ಆರಾಧ್ಯ ದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ದಸರಾ ಅಮಾವಾಸ್ಯೆ ಪ್ರಯುಕ್ತ ದಿ. 2 ಅಕ್ಟೋಬರ್ 2024 ರಂದು ನಾಡಿನಾದ್ಯಂತ ಬಹುಸಂಖ್ಯಾತ ಭಕ್ತರು ಸರತಿ ಸಾಲಿನಲ್ಲಿ ಶ್ರೀಕ್ಷೇತ್ರ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದರು.ಮಹಾಲಯ ಅಥವಾ ದಸರಾ ಅಮಾವಾಸ್ಯೆ ಕೇವಲ ಶ್ರಾದ್ಧ ಮತ್ತು ತರ್ಪಣ ಆಚರಣೆಗೆ ಮಾತ್ರ ಮಹತ್ವದ್ದಲ, ಹಿಂದೂಗಳಿಗೆ ಅಮಾವಾಸ್ಯೆ ಮತ್ತು ಹುಣ್ಣಿಮೆ ಅತ್ಯಂತ ಶ್ರೇಷ್ಠ, ವಿಶಿಷ್ಟವಾದ ಪೂಜಾ ದಿನಗಳಾಗಿವೆ.

ದುರ್ಗೆ ಮಹಿಷಾಸುರನೆಂಬ ರಕ್ಕಸನನ್ನು ಸಂಹರಿಸಿದ ದಿನ, ಇದೆ ಅಮಾವಾಸ್ಯೆ ದಿನವಾಗಿದೆ. ಅಮವಾಸ್ಯೆ ನಂತರ 9 ದಿನಗಳನ್ನು ನವರಾತ್ರಿ ದಿನಗಳೆಂದು ನಾವು ಕರೆಯುವುದುಂಟು. ಅಮಾವಾಸ್ಯೆ ನಂತರ ಪಾರ್ವತಿ ನವದುರ್ಗೆಯಾಗಿ 9 ದಿನಗಳ ಕಾಲ ಭೂಲೋಕಕ್ಕೆ ಬರುತ್ತಾಳೆ ಎಂಬ ಅಪಾರ ನಂಬಿಕೆ ಇದೆ. ಈ ಒಂಬತ್ತು ದಿನಗಳಕಾಲ ನಿರಂತರವಾಗಿ ಮಹಿಳೆಯರು ಬನ್ನಿ ಮರವನ್ನು ಪೂಜಿಸಿವುದು ಮತ್ತೊಂದು ವಿಶೇಷವಾಗಿದೆ. ಈ 9 ದಿನಗಳು ದಸರಾ ಹಬ್ಬ ಅಥವಾ ದುರ್ಗಾಪೂಜೆ ಆರಂಭವಾಗುತ್ತದೆ.ಮರಿ ಕೊಟ್ಟೂರೇಶ್ವರ ದೇವಸ್ಥಾನದ ಬಳಿ ಟ್ರಾಕ್ಸಿ ಡ್ರೈವರ್ ಗಳ ಸಂಘ ಭಕ್ತಾದಿಗಳಿಗೆ ಉದುಕ ಮುದ್ದೆ ಪ್ರಸಾದ ವಿತರಣೆ ಮಾಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು