ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಸರ್ಕಾರ ಅವಕಾಶ ಕೊಟ್ಟಿರುವುದಕ್ಕೆ – ಧನ್ಯವಾದಗಳು ತಿಳಿಸಿದ ಡಾ, ಎನ್.ಟಿ. ಶ್ರೀ ನಿವಾಸ್ ಶಾಸಕರು.
ಕೂಡ್ಲಿಗಿ ಅ.03

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಮಹಾತ್ಮ ಗಾಂಧೀಜಿ ಚಿತಾಭಸ್ಮದ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಗಾಂಧೀಜಿ ಜಯಂತಿ ದಿನದಂದು ಗಾಂಧೀಜಿ ಚಿತಾಭಸ್ಮಕ್ಕೆ ಗೌರವ ಪೂರಕ ಪುಷ್ಪ ನಮನ ಸಲ್ಲಿಸಿ ಈ ಸಂದರ್ಭದಲ್ಲಿ ಕೂಡ್ಲಿಗಿಯ ತಾಲೂಕಿನ ಪ್ರಮುಖ ಗ್ರಾಮೀಣ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಮಳೆಯನ್ನೇ ಅವಲಂಬಿಸಿ ನಂಬಿ ಬಿತ್ತನೆ ಮಾಡಿ ಬದುಕುವುದರಿಂದ ಡಾ, ಶ್ರೀನಿವಾಸ್. ಎನ್.ಟಿ ಅವರು ನಿರಂತರ ಶತಯಗತಾಯ ಪ್ರಯತ್ನದಿಂದ ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ಕೂಡ್ಲಿಗಿ ಪಟ್ಟಣದ ಪಕ್ಕದಲ್ಲಿ ಬರುವ ಗುಂಡಿನ ಹೊಳೆ ಪ್ರದೇಶದಲ್ಲಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಅವಕಾಶ ಸಿಕ್ಕಿದೆ. ಕೂಡ್ಲಿಗಿ ತಾಲೂಕು ಮಟ್ಟದಲ್ಲಿ ಇಂತಹ ಮಹತ್ವದ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಅವಕಾಶಕ್ಕಾಗಿ ಶ್ರಮಿಸಿ ಸಹಕಾರ ನೀಡಿ ಪ್ರೋತ್ಸಾಹಿಸಿದ ಕರ್ನಾಟಕ ಸರ್ಕಾರದ ಸನ್ಮಾನ್ಯ ಶ್ರೀ ಸಿ.ಎಂ. ಸಿದ್ದರಾಮಯ್ಯನವರು,

ಸನ್ಮಾನ ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಅವರು, ಮಾನ್ಯ ಕೃಷಿ ಸಚಿವರಾದ ಚಲುವರಾಯ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆ.ಡ್. ಜಮೀರ್ ಅಹಮ್ಮದ್ ಖಾನ್, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್, ಅಖಂಡ ಬಳ್ಳಾರಿ ಜಿಲ್ಲೆಯ ಸಂಸದರಾದ ಈ. ತುಕಾರಾಮ್, ಕೆ.ಎಂ.ಎಫ್. ಅಧ್ಯಕ್ಷಾದ ಭೀಮನಾಯಕ್, ಕೃಷಿ ಇಲಾಖೆ ಕಾರ್ಯದರ್ಶಿಗಳಾದ ಅನುಬ್ ಕುಮಾರ್, ಆಯುಕ್ತರಾದ ವೈ. ಎಸ್. ಪಾಟೀಲ್, ವಿಜಯನಗರ ಜಿಲ್ಲಾಧಿಕಾರಿಗಳಾದ ಎಂ.ಎಸ್. ದಿವಾಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶರಣಪ್ಪ ಮುದಗಲ್ ಇವರುಗಳಿಗೆ ನಮ್ಮ ಕೂಡ್ಲಿಗಿ ಸಮಸ್ತ ಜನತೆಯ ಪರವಾಗಿ ಇಂದು ರಾಷ್ಟ್ರಪಿತ ಗಾಂಧಿ ಚಿತಾಭಸ್ಮದಲ್ಲಿ ನೆರವೇರಿದ ಗಾಂಧಿ ಜಯಂತಿಯ ಕಾರ್ಯಕ್ರಮದ ಸಂದರ್ಭದಲ್ಲಿ ಶಾಸಕರಾದ ಡಾ, ಶ್ರೀನಿವಾಸ್.ಎನ್.ಟಿ ಅವರು ಸಮಸ್ತರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಪ್ರಮುಖ ಮುಖಂಡರುಗಳಾದ ಗುರುತಿನಗೌಡ್ರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾವಲಿ ಶಿವಪ್ಪ ನಾಯಕ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಸಿ ಉಮೇಶ್ ಕಾಂಗ್ರೆಸ್ ಮುಖಂಡರು, ಇನ್ನೂ ಅನೇಕ ಪ್ರಮುಖ ಮುಖಂಡರುಗಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ವಿಜಯನಗರ