“ಜಯದ ಕಹಳೆ ವಿಜಯ ದಶಮಿ”…..

ಹೊಸ ಮಂತರ ಶತ್ರುನಾಶಕ
ಶಮೀವೃಕ್ಷ ಶಕ್ತಿಮಾತೆ ಪೂಜಿತ
ವಿಜಯದಿ ಪೂಜೆ ಶಮೀ ಶಮಯತೇ
ಪಾಪಂ ಶಮೀ ಶತ್ರುವಿನಾಶನಿ
ನವ ರೂಪ ಅವತಾರಿ ಶೈಲಪುತ್ರಿದೇವಿ
ಆನಂದದ ಬೆಳಕು
ಬ್ರಹ್ಮಚಾರಿಣಿ ದೇವಿ ಸರ್ವಜನಹಿತ ಹಸಿರು
ಚಂದ್ರಘಂಟಾ ದೇವತೆ ಸ್ಥಿರತೆ ಸಾಮರಸ್ಯ
ಕೂಷ್ಮಾಂಡಾ ದೇವಿ ಹರುಷ ಉತ್ಸಾಹ ಸ್ಥಿರ ಶಕ್ತಿ
ಸ್ಕಂದಾಮಾತಾ ದೇವಿ ಶಾಂತಿ ಶುದ್ಧತೆ
ಕಾತ್ಯಾಯನಿ ದೇವಿ ಶಕ್ತಿ ಉತ್ಸಾಹ
ಕಾಳರಾತ್ರಿದೇವಿ ಶಕ್ತಿ ಉತ್ಸಾಹ
ಮಹಾಗೌರಿ ದೇವಿ ಸಹಾನುಭೂತಿ ಸಾಮರಸ್ಯ
ಪ್ರೀತಿ
ಸಿದ್ದಿದಾತ್ರಿ ದೇವಿ ಆಧ್ಯಾತ್ಮಿಕ ಪ್ರಕೃತಿ ಸಮೃದ್ಧಿ
ಭಕ್ತಿಭಾವದಿ ನಲಿಯುವವರಿಗೆ
ನವ ಶ್ರೀದುರ್ಗಾ ಮಾತಾ ವರಪ್ರದಾಯನಿ
ದುಷ್ಟತನ ನಾಶ ಶಿಷ್ಟತನ ರಕ್ಷಣಾದಿನ
ಅಹಂ ಜಾಡಿಸಿ ಓಡಿಸುವ ಘಳಿಗೆ
ಮನದ ಅಂಧಕಾರ ಕಳೆವ ಧೈರ್ಯ
ಸಮೃದ್ಧಿಗಾಗಿ
ಶ್ರೀ ಚಾಮುಂಡಿ ನೆನವ ಮಕ್ಕಳ ಅಕ್ಷರಾಭ್ಯಾಸ
ಶುಭ ಅಮೃತಮಯ ಮನದ ಸುಭಾವ
ಆತ್ಮ ಜಾಗೃತ ಸುದಿನ ಕೆಟ್ಟ ದುಷ್ಟತನ ವಿರುದ್ಧ
ಉತ್ತಮತನದಿ ಮೆರವ ಕ್ಷಣ ವಿಶ್ವ ದೇಶ ನಾಡು
ಶಾಂತಿ
ಸೌಹಾರ್ದತೆಯ ಶತ್ರುತ್ವ ನಾಶಕ್ಕಾಗಿ ಸಿಹಿ
ಸುಂಗಂಧ ಹರಡುವ ವಿಜಮ ದಶಮಿ
ಸರ್ವ ಮನುಕುಲ ವಿಜಯದ ಸಂಕೇತ ನಾಡ
ದೇವಿಯ ಮಡಿಲಲಿ
ರೈತಾಪಿ ಶ್ರಮಿಕರ ಸುಗ್ಗಿಯ ಹಿಗ್ಗು ಸುಸ್ವಾಗತ
ನವರಾತ್ರಿ ವಿಜಯ ದಸರಾ ವೃತ ಉಪವಾಸ
ಓಲೈಸುವ ಮಹಾ ದಿನ ವಿಜಯ ದಶಮಿ ಶುಭ
ಘಳಿಗೆ ಹರುಷ ತರಲಿ ಸರ್ವರ ಬಾಳಿನಲಿ

ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತರು
ಬಾಗಲಕೋಟ