ನಗರದ ಸಾಯಿ ಬಡಾವಣೆಯ ನಾಗರಿಕರಿಂದ ದಸರಾ ಹಬ್ಬದ ವಿಭಿನ್ನ ಆಚರಣೆ.
ಇಲಕಲ್ಲ ಅ 08

ಇಲ್ಲಿನ ವಾರ್ಡ್ ನಂಬರ್ 02 ರ ಸಾಯಿ ಬಡಾವಣೆಯ ಶ್ರೀ ಶ್ರೀ ದುರ್ಗಾ ಪೂಜಾ ಕಾಮಗಾರ ಸಮಿತಿ ವತಿಯಿಂದ ದಸರಾ ಹಬ್ಬ ರಾಜಸ್ಥಾನದ ಮಾದರಿಯಲ್ಲಿ ಕಳೆದ ಮೂರು ವರ್ಷಗಳಿಂದ ಆಚರಿಸುತ್ತಾ ಬಂದಿದ್ದು ರಾಜಸ್ಥಾನದ ಸಂಪ್ರದಾಯದಂತೆಯೇ ದುರ್ಗಾದೇವಿ ಮೂರ್ತಿಯ ಘಟಸ್ಥಾಪನೆ ಮಾಡಿ ಮೂರ್ತಿಯ ಮುಖವನ್ನು ಯಾರಿಗೂ ತೋರಿಸದೆ ಪೂಜೆ ನೆರವೇರಿಸಿ ಕೊನೆಯ ದಿವಸ ತಾಯಿ ದುರ್ಗಾ ಮಾತೆಯ ಮುಖ ತೆರೆಯುವುದರ ಜೊತೆಗೆ ದಸರಾ ಹಬ್ಬವನ್ನು ವಿಭಿನ್ನ ಮತ್ತು ವಿಶೇಷತೆಯಿಂದ ಆಚರಣೆ ಮಾಡುತ್ತಾ ನಾಡಹಬ್ಬ ದಸರಾ ಗತವೈಭವದ ಹಬ್ಬವನ್ನಾಗಿ ಆಚರಣೆ ಮಾಡುತ್ತಿದ್ದಾರೆ.

ಒಂದೊಂದು ದಿವಸ ಒಂದೊಂದು ವಿಶೇಷ ಭಿನ್ನವಾಗಿ ಹಬ್ಬ ಆಚರಣೆ ಮಾಡುತ್ತಾ ಸಾಯಿ ನಗರದ ಬಡಾವಣೆಯ ಎಲ್ಲ ಭಕ್ತರು ಸೇರಿಕೊಂಡು ಭಿನ್ನವಾಗಿ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ ಹಬ್ಬದ ಪ್ರಾರಂಭದಲ್ಲಿ ಮೂರ್ತಿ ಸ್ಥಾಪನೆ ಮತ್ತು ಘಟಸ್ಥಾಪನೆ ಮಾಡಿ ಹಬ್ಬ ಪ್ರಾರಂಭಿಸಿ ದಿನಾಲು ವಿಭಿನ್ನ ಹಾಡುಗಳೊಂದಿಗೆ ನಾಮ ಸ್ಮರಣೆ ಮಾಡುತ್ತಾರೆ ರಾಜಸ್ಥಾನ ಮತ್ತು ಸಾಯಿ ನಗರ ಬಡಾವಣೆ ಎಲ್ಲ ಮಹಿಳೆಯರು ಸೇರಿಕೊಂಡು ಹಬ್ಬ ಆಚರಣೆ ಮಾಡುತ್ತಿದ್ದು ಸಮಾಜದಲ್ಲಿ ಸೇವೆ ಮಾಡುವವರನ್ನು ಗುರುತಿಸಿ ಸನ್ಮಾನಿಸುತ್ತಾರೆ ಇಂದು ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಧಾರಾಣಿ ಮುರುಗೇಶ ಸಂಗಮ. ಮನೋಜ್ ಸುನಿತಾ ಸಯಾನಿ. ಕನ್ನಯ್ಯ ಲಕ್ಷ್ಮಿ ದಂಪತಿಗಳಿಗೆ ಗೌರವಿಸಿ ಸನ್ಮಾನಿಸಿದರು.

ಜಿ ಎಸ್ ಅಡವಿ ಶಿಕ್ಷಕರು ಕಾರ್ಯಕ್ರಮ ನಿರೂಪಣೆ ಮಾಡಿದರು ಟಿ.ವಾಯ್ ಗೊಲ್ಲಾರ ಶಿಕ್ಷಕರು ವಂದಿಸಿದರು ಎಲ್ಲ ತಾಯಂದಿರು ವಿಶೇಷವಾದ ಹಾಡುಗಳೊಂದಿಗೆ ವಿಶೇಷ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತಿಯಲ್ಲಿ ಮುಳುಗಿ ಮಿಂದೆದ್ದರು. ಸಾಯಿ ಬಡಾವಣೆಯ ಮಹಿಳಾ ಬಳಗದವರು ದೇವಿಯ ದರ್ಶನಕ್ಕೆ ಬರುವ ಎಲ್ಲ ಸಹೋದರಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನೇತೃತ್ವವನ್ನು ಸುಜಾತ ಸಾಲಿಮಠ ಪದ್ಮಾವತಿ ಕೊಪ್ಪರದ ವಹಿಸಿದ್ದರು. ನಂತರ ಸಾಯಿ ಬಡಾವಣೆಯ ಮಹಿಳೆಯರು ಪ್ರಸಾದ ಸೇವೆ ಮಾಡಿದ್ದರು ಎಲ್ಲ ಭಕ್ತರು ಪ್ರಸಾದ ಸ್ವೀಕರಿಸಿದರು. ದುರ್ಗಾದೇವಿಯ ಘಟಸ್ಥಾಪನೆಯ ವೈಭವದ ಮೆರುಗು ಮತ್ತು ಲೈಟಿಂಗ್ ನೋಡುಗರ ಕಣ್ಮನ ಸೆಳೆಯುತ್ತಿವೆ.