ಬೆಳ್ಳಂ ಬೆಳಿಗ್ಗೆ ನಗರ ಸಭೆಯ ಅಧಿಕಾರಿಗಳು ಧಿಡೀರ್ ದಾಳಿ – 250 ಕೆ.ಜಿ ಗೂ ಹೆಚ್ಚಿನ ಪ್ಲಾಸ್ಟಿಕ್ ಬ್ಯಾಗ್ ವಶ, ದಂಡ ವಸೂಲಿ.

ಹೊಸಪೇಟೆ ಅ.08

ಪೌರಾಯುಕ್ತರ ನಿರ್ದೇಶನ ಮೇರೆಗೆ ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಗಳನ್ನ ಅಕ್ರಮವಾಗಿ ಸಂಗ್ರಹಿಸಿ ಇಟ್ಟು ಕೊಂಡು ಮಾರಾಟ ಮಾಡುತ್ತಿದ್ದವರಿಗೆ ಬೆಳ್ಳಂ ಬೆಳಿಗ್ಗೆ ನಗರ ಸಭೆಯ ಅಧಿಕಾರಿಗಳು ದಾಳಿ ನಡೆಸಿ ಬಿಗ್ ಶಾಕ್ ಕೊಟ್ಟರು.ದಸರಾ ಹಬ್ಬದ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆ ಎಂದು ನಗರಸಭೆ ಪೌರಾಯುಕ್ತರಿಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ . ಕೂಡಲೇ ಕಾರ್ಯ ಪ್ರವೃತ್ತರಾದ ಹೊಸಪೇಟೆ ನಗರಸಭೆ ಪರಿಸರ ಅಧಿಕಾರಿ ಆರತಿ ಮತ್ತು ಅವರ ತಂಡ ಹಲವಾರು ಹೂವಿನ ಅಂಗಡಿಗಳ ಮೇಲೆ ದಾಳಿ, ಕಿರಾಣಿ ಶಾಪ್ ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಪ್ಲಾಸ್ಟಿಕ್ ಚೀಲಗಳನ್ನ ವಶಕ್ಕೆ ಪಡೆದು ಕೊಂಡರು.ಅದೇ ರೀತಿ ಮೂರು ಅಂಗಡಿ ಸರ್ಕಲ್ ಏರಿಯಾದ ಪೂಜಾ ಟ್ರೇಡರ್ಸ್ ನಲ್ಲಿ ಅಂಗಡಿಯಲ್ಲಿ ನೂರಾರು ಕೆಜಿ ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನ ಸಂಗ್ರಹಿಸಿ ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಪೂಜಾ ಟ್ರೇಡರ್ಸ್ ಅಂಗಡಿ ಮೇಲೆ ದಾಳಿ ನಡೆಸಿದ ವೇಳೆ ನೂರಾರು ಕೆಜಿ ಪ್ಲಾಸ್ಟಿಕ್ ಚೀಲಗಳು ಪತ್ತೆ ಆಗಿವೆ. ಕೂಡಲೇ ಅವುಗಳನ್ನ ವಶಕ್ಕೆ ಪಡೆದು ಅಂಗಡಿಯನ್ನ ಸೀಜ್ ಮಾಡಿದರು.

ಇದಕ್ಕೂ ಮೊದಲು ಹತ್ತಾರು ಬಾರಿ ಪೂಜಾ ಟ್ರೇಡರ್ಸ್ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ಮಾರಾಟ ಮುಂದುವರೆಸಿದ್ದರು ಹೀಗಾಗಿ ಅಂಗಡಿ ಸೀಜ್ ಮಾಡಲಾಗಿದೆ ಎಂದು ನಗರ ಸಭೆ ಸಿಬ್ಬಂದಿ ಪರಿಸರ ಅಧಿಕಾರಿ ಆರತಿ ತಿಳಿಸಿದರು.ಹೊಸಪೇಟೆ ಸಾರ್ವಜನಿಕರು ತ್ಯಾಜ್ಯ ಸಂಗ್ರಹಣೆ ಮಾಡುವ ವಾಹನಗಳಲ್ಲಿ ಕಸ ಹಾಕದೇ ಎಲ್ಲೆಂದರಲ್ಲಿ ಬೀಸಾಡುತ್ತಿದ್ದಾರೆ ಅಂತ ನಗರ ಸಭೆಗೆ ದೂರುಗಳು ಬರುತ್ತಿದ್ದವು. ಅದರ ಬಗ್ಗೆ ಎಚ್ಚೆತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರನ್ನ ಖುದ್ದಾಗಿ ಹಿಡಿದು ಸ್ಥಳದಲ್ಲೇ ನೂರು ರೂಪಾಯಿಯಂತೆ ಕೆಲವರಿಗೆ ದಂಡ ವಸೂಲಿ ಮಾಡಲಾಗಿದೆ. ಚಿಕ್ಕಪುಟ್ಟ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟಗಾರರಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರಿಗೆ ಸೇರಿ ಇದುವರೆಗೆ 15,000 ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದರು.

ಬಾಕ್ಸ್:-

ಇದುವರೆಗೂ ಒಟ್ಟು 250 ಕೆ.ಜಿ ಗೂ ಹೆಚ್ಚಿನ ಪ್ಲಾಸ್ಟಿಕ್ ವಸ್ತುಗಳು ವಶ ಪಡಿಸಿಕೊಳ್ಳಲಾಗಿದೆ, 15,000 ಸಾವಿರ ದಂಡ ವಸೂಲಿ ಮಾಡಲಾಗಿದೆ, ನಾಗರಿಕರ ಅರೋಗ್ಯದ ಹಿತ ದೃಷ್ಟಿಯಿಂದ ಇನ್ನೂ ಮುಂದೆ ಈ ದಾಳಿ ನಿರಂತರ ವಾಗಿರುತ್ತದೆ. ಪ್ಲಾಸ್ಟಿಕ್ ನಿಷೇಧಕ್ಕೆ ಮಾಲೀಕರು ಸಹಕರಿಸ ಬೇಕು, ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕೈಜೋಡಿಸ ಬೇಕು – ಚಂದ್ರಪ್ಪ ಪೌರಾಯುಕ್ತರು, ನಗರ ಸಭೆ ಹೊಸಪೇಟೆ.

ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿಗಳಾದ ಹಿರೇಮಠ, ದಾದಾಪೀರ್, ಮೇಸ್ತ್ರಿಗಳಾದ ನಾಗೇಂದ್ರ ವರ್ಮಾ, ರಮೇಶ್ ಮತ್ತು ಪೌರಕಾರ್ಮಿಕ ಸಿಬ್ಬಂದಿ ಸೇರಿ ಇತರರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button