ಶಾಸಕ ಹಂಪಯ್ಯ ನಾಯಕ ವಿರುದ್ಧ ವಾಲ್ಮೀಕಿ ಸಮಾಜದ – ಮುಖಂಡರ ಆಕ್ರೋಶ.
ಮಾನ್ವಿ ಅ.09

ವಿಧಾನ ಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾದರು ಸಹ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ ಇಲ್ಲ, ಆದರೆ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಶಾಸಕರ ಕೊಡುಗೆ ಏನಿಲ್ಲ ಎಂದು ವಾಲ್ಮೀಕಿ ಸಮಾಜದ ಮುಖಂಡರು ಕಿಡಿ ಕಾರಿದರು.

ಸರಕಾರದ ಅನುದಾನ ಯಾರ ಪಾಲಾಗುತ್ತಿದೆ, ಬರಿ ವಾಲ್ಮೀಕಿ ಜಯಂತಿ ಸಭೆ ನಡೆಸಿದರು ಯಾವುದೇ ಪ್ರಯೋಜನ ಇಲ್ಲ. ಸುಮಾರು ಇಪ್ಪತ್ತು ವರ್ಷಗಳಿಂದ ಮೀಸಲು ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ವಾಲ್ಮೀಕಿ ಸಮಾಜದ ಮುಖಂಡರು ಮಾನ್ವಿಯಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಹಂಪಯ್ಯನಾಯಕ ಅವರು ಅಂಬೇಡ್ಕರ್ ಭವನ ಹಾಗೂ ವಾಲ್ಮೀಕಿ ಭವನ ಮತ್ತು ಬಾಬು ಜಗಜೀವನ ರಾಮ್ ಭವನ ನಿರ್ಮಾಣವಾಗದ ಕಾರಣ ಜಯಂತಿಗಳನ್ನು ಬಾಡಿಗೆ ರೂಪದಲ್ಲಿರುವ ಭವನದಲ್ಲಿ ಜಯಂತಿ ಮಾಡುತ್ತಿರುವುದು ನಾಚಿಕೆಗೇಡು ಎಂದು ಹೋರಾಟಗಾರರು ಗುಡುಗಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ