ಮನೆ ಮನೆ ಬಾಗಿಲಿಗೆ ಖಾತಾ ನಕಲು ವಿತರಣೆ.
ಕೊಟ್ಟೂರು ಅ.14

ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಪ.ಪಂ ಮುಖ್ಯ ಅಧಿಕಾರಿ ನಸರುಲ್ಲಾ ಮತ್ತು ಪ.ಪಂ ಅಧ್ಯಕ್ಷೆ ಬದ್ದಿ ರೇಖಾ ರಮೇಶ್ ರವರ ನೇತೃತ್ವದಲ್ಲಿ ಸೋಮವಾರ ಮನೆ ಮನೆ ಬಾಗಿಲಿಗೆ ತೆರಳಿ ಖಾತಾ ನಕಲನ್ನು ನೀಡುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.ಪಟ್ಟಣದಲ್ಲಿ ಸುಮಾರು 08 ವಾರ್ಡ್ ಗಳಿಗೆ ಭೇಟಿ ನೀಡಿ ಖಾತಾ ನಕಲನ್ನು ವಿತರಿಸುವ ಸಂದರ್ಭದಲ್ಲಿ ಅಲ್ಲಿನ ಸಾರ್ವಜನಿಕರ ಮೂಲಭೂತ ಸಮಸ್ಯೆಯನ್ನು ಆಲಿಸಿದರು ನಂತರ ಅವುಗಳಿಗೆ ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿ ಕ್ರಿಯಿಸಿದ ಸಾರ್ವಜನಿಕರು ಖಾತಾ ನಕಲು ಪಡೆಯಲು ಹಲವಾರು ಗೊಂದಲಗಳು ನಿರ್ಮಾಣವಾಗುತ್ತಿದ್ದವು. ಇವುಗಳನ್ನು ತಪ್ಪಿಸಲು ಸರ್ಕಾರ ಮತ್ತು ಜಿಲ್ಲಾಧಿಕಾರಿಯವರು ಉತ್ತಮ ಯೋಜನೆಯನ್ನು ಮಾಡಲಾಗಿದೆ. ಈ ಯೋಜನೆಯನ್ನು ಸ್ಥಳೀಯ ಅಧ್ಯಕ್ಷರು ಹಾಗೂ ಮುಖ್ಯ ಅಧಿಕಾರಿಯವರು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಫಲಾನುಭವಿಗಳಿಗೆ ತುಂಬಾನೇ ಅನುಕೂಲವಾಗುತ್ತದೆ ಎಂದು ಪತ್ರಿಕೆಯೊಂದಿಗೆ ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರು, ಹಾಗೂ ತೋಟದ ರಾಮಣ್ಣ ಜಗದೀಶ್ ಕೆಂಗರಾಜ್ ಹಾಗೂ ಸರ್ವ ಸದಸ್ಯರು, ಮುಖಂಡ ಬದ್ದಿ ಮರಿಸ್ವಾಮಿ, ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರು ಇದ್ದರು. ಕೋಟ್:- ಪಟ್ಟಣದ ಒಟ್ಟು 20 ವಾರ್ಡ್ಗಳ ಪೈಕಿ 16410 ಖಾತಾ ನಕಲು ನೀಡಲು ಕೋರಿ ಅರ್ಜಿಗಳು ಬಂದಿರುತ್ತವೆ ಇದರಲ್ಲಿ 10410 ಖಾತಾ ನಕಲು ನೀಡಲಾಗಿದೆ. ಉಳಿದ 6000 ಫಾರಂ 3 ದಾಖಲೆಯನ್ನು ಪರಿಶೀಲಿಸಿ ಕ್ರಮೇಣವಾಗಿ ವಿತರಿಸಲಾಗುವುದು. ಎ.ನಸುರುಲ್ಲಾ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು