ಅಮೋಘ ಸಿದ್ದೇಶ್ವರ ಕುರಿ ಸಂಗೋಪನಾ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತ ದಿಂದ – ರೈತರಿಗೆ ಮೋಸ.
ಮಾನ್ವಿ ಅ.14

ಅಮಾಯಕ ರೈತರಿಗೆ ಮೋಸ ಮಾಡಿದರೆ ನಮ್ಮನ್ನ ಯಾರು ಕೇಳುತ್ತಾರೆಂದು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮೋಘ ಸಿದ್ಧೇಶ್ವರ ಕುರಿ ಸಂಗೋಪನಾ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತದ ಮಾಲಕರು ನಕಲಿ ರಾಸಾಯನಿಕ ನೀಡಿರುವುದು ಬೆಳಕಿಗೆ ಬಂದಿದೆ.

ಮಸ್ಕಿ ತಾಲೂಕಿನ ಮಲ್ಲದಗುಡ್ಡ ಗ್ರಾಮದ ಯಲ್ಲಪ್ಪ ಎಂಬ ವ್ಯಕ್ತಿ ಮಲ್ಲದಗುಡ್ಡ ಕ್ಯಾಂಪ್ ನಲ್ಲಿರುವ ಅಮೋಘ ಸಿದ್ಧೇಶ್ವರ ಕುರಿ ಸಂಗೋಪನಾ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತದಲ್ಲಿ ಭತ್ತಕ್ಕೆ ದ್ವಾಮೆಗಳ ಕಾಟ ತಪ್ಪಿಸುವ ಸಲುವಾಗಿ ರಾಸಾಯನಿಕ ತೆಗೆದು ಕೊಂಡಿದ್ದಾರೆ, ಆದರೆ ಮಾಲಕರಾದ ಮಲ್ಲಯ್ಯ ಗೋರ್ಕಲ್ ಎಂಬುವವರು ನಕಲಿ ರಾಸಾಯನಿಕ ನೀಡಿದ್ದರಿಂದ ಭತ್ತ ಸುಟ್ಟು ಕರಕಲಾಗಿದೆ ಎಂದು ಯಲ್ಲಪ್ಪ ಆರೋಪಿಸಿದ್ದಾರೆ.

ಕೃಷಿ ಅಧಿಕಾರಿ ಮಾರುತಿ ನಾಯಕ ಅವರು ಸ್ಥಳದಲ್ಲಿದ್ದರು ರೈತರು ಹಿಗ್ಗಾ ಮುಗ್ಗ ತರಾಟೆಗೆ ತೆಗೆದು ಕೊಂಡರು ಸಹ ಅಮಾಯಕ ರೈತರು ಮಾತ್ರ ಬಲಿ ಯಾಗುತ್ತಿರುವುದು ಪಕ್ಕಾ ಎಂದು ಕರ್ನಾಟಕ ರಾಜ್ಯ ಬೇಡರ ಸಮಿತಿ ರಾಜ್ಯಾಧ್ಯಕ್ಷ ಅಂಬಣ್ಣ ನಾಯಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ