ಶ್ರೀ ಭವಾನಿ ದೇವಸ್ಥಾನದಲ್ಲಿ ಧರ್ಮಸಭೆ ಕಾರ್ಯಕ್ರಮ ನೆರವೇರಿತು.
ಕಲಕೇರಿ ಅ.14

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶ್ರೀ ಭವಾನಿ ದೇವಸ್ಥಾನದಲ್ಲಿ ಧರ್ಮಸಭೆ ಕಾರ್ಯಕ್ರಮ ನೆರವೇರಿತು.ಈ ಭವಾನಿಯ ದೇವಸ್ಥಾನದಲ್ಲಿ ಶನಿವಾರ ದಂದು ಅಂಬಾ ಭವಾನಿಯ ಪ್ರಾಣ ಮಂಗಲ ಮತ್ತು ಸಾಯಂಕಾಲ 5 ಗಂಟೆಗೆ ಆ ದೇವಿಯ ರಥೋತ್ಸವ ಕಾರ್ಯಕ್ರಮ ನೆರವೇರಿಸಿ. ರವಿವಾರ ದಂದು ಸಾಯಂಕಾಲ 8 ಗಂಟೆ ಯಿಂದ ಧರ್ಮಸಭೆ ಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮದಲ್ಲಿ ಪಾವನ ಸನ್ನಿಧಾನ. ಪರಮ ಪೂಜ್ಯ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ, ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ವಾದಂಗಳವರು ಶ್ರೀಶೈಲ ಪೀಠ ಗುರುಗಳಿಂದ ಭಕ್ತರಿಗೆ ಆಶೀರ್ವಚನ ನವರಾತ್ರಿಯ ಹಬ್ಬದ 9 ದಿನಗಳ ಕಾಲ ದೇವಿಯ ಆರಾಧಕರಾದ ಮೋತಿಲಾಲ್ ಕುಲಕರ್ಣಿ ಇವರು ಆ ದೇವಿಗೆ ಉಪವಾಸ ಇದ್ದು ಪೂಜೆಯನ್ನು ಸಲ್ಲಿಸುತ್ತಾ ಬಂದಂತ ಭಕ್ತರಿಗೆ ಒಳ್ಳೆಯ ದಾರಿ ತೋರಿಸುವಂತಹ ಪುಣ್ಯವನ್ನೇ ಮಾಡಿದಂತ ಮೋತಿಲಾಲ್ ಕುಲಕರ್ಣಿ ಇವರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಇವರು ಆ ದೇವಿಯನ್ನು ಅನೇಕ ಪೂಜೆಗಳನ್ನು ಮಾಡಿ ರಥಗಳನ್ನು ಮಾಡಿ ನಿಷ್ಠೆಯಿಂದ ಪೂಜೆಯನ್ನು ಸಲ್ಲಿಸಿದಂತ ದೇವಿಯ ಆರಾಧಕರಾದ ಮೋತಿಲಾಲ್ ಕುಲಕರ್ಣಿ ಇವರು ಎಂದು ಈ ಸಂದರ್ಭದಲ್ಲಿ ಪರಮ ಪೂಜ್ಯರು ವಿಜಯಪುರ ಜಿಲ್ಲೆಯಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದು ಎಲ್ಲಿ ಅಂದ್ರೆ ಅತಿ ಹೆಚ್ಚು ಕಲಕೇರಿ ಗ್ರಾಮದಲ್ಲಿ ನಡೆಯೋದು ಇಲ್ಲಿ ಭಕ್ತರು ಯಾವುದೇ ಕಾರ್ಯಕ್ರಮಗಳು ಮಾಡಿದರೆ ಬಾಳ ಭಕ್ತಿಯಿಂದ ಕಾರ್ಯಕ್ರಮಗಳನ್ನು ಮಾಡುತ್ತಾರೆ ಎಂದು ಈ ಸಂದರ್ಭದಲ್ಲಿ ಪರಮ ಪೂಜ್ಯರು ಆಶೀರ್ವಚನ ನೀಡಿದರು.ಪರಮಪೂಜ್ಯ ಶ್ರೀ ಷ. ಬ್ರ.ಡಾ. ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಮಾಗಣಗೇರಿ. ಪರಮ ಪೂಜ್ಯ ಶ್ರೀ ಷ. ಬ್ರ . ಜಯಸಿದ್ದೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಹಿರೇಮಠ್ ಹಿರೂರು. ಪರಮ ಪೂಜ್ಯ ಶ್ರೀ ಷ .ಬ್ರ ವಿಶ್ವ ಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ಊರಿನ ಹೊರಗಿನ ಮಠ ಕೊಣ್ಣೂರ್. ಪರಮ ಪೂಜ್ಯ ಶ್ರೀ ಷ .ಬ್ರ ಮಡಿವಾಳೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಪಂಚರಂಗ ಸಂಸ್ಥಾನ ಗದ್ದಗಿ ಮಠ ಕಲಕೇರಿ. ಜೀ ಕನ್ನಡ ಕಾಮಿಡಿ ಕಿಲಾಡಿ ಉಲ್ಲಾಸ್ ಗುರುಮಠ. ಶರಣ ಕುಮಾರ್ ಭಂಡಾರಿ ಮಠ. ಬಿ.ಡಿ ಬಾಣಕಾರ ನಿವೃತ್ತಿ ಶಿಕ್ಷಕರು ಗೌರವ ಸನ್ಮಾನ. ಎನ್.ಎಮ್ ಬಡೇಮ್ಮಗೋಳ ನಿವೃತ್ತಿ ಗೌರವ ಸನ್ಮಾನ. ಅನೇಕ ಸಾಧಕರಿಗೆ ಪರಮ ಪೂಜ್ಯರಿಂದ ಸನ್ಮಾನ ನೆರವೇರಿತು. ಕುಮಾರ್ ಜಾಲಹಳ್ಳಿ ಮಠ. ಸದಾಶಿವ ಹಿರೇಮಠ್. ಕುಮಾರ್ ಮಠಪತಿ. ದೇವೇಂದ್ರ ಜಂಬಿಗಿ.ಬಿಂಜಲುಬಾವಿ ಗ್ರಾಮದ ಭಕ್ತರು ತಿಳಗೂಳ ಗ್ರಾಮದ ಭಕ್ತರು ಕಲಕೇರಿ ಗ್ರಾಮದ ಭಕ್ತರು ಅನೇಕ ರಾಜಕಾರಣಿಗಳು ಊರಿನ ಹಿರಿಯರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ