ದಸರಾ ಮಹೋತ್ಸವ ನಿಮಿತ್ತ ಅಂಬಾರಿ ಮೆರವಣಿಗೆಯಲ್ಲಿ – ಮಕ್ಕಳು, ಮಹಿಳೆಯರಿಂದ ಕುಂಭ ಮೆರವಣಿಗೆ.
ಮಾನ್ವಿ ಅ.15

ಮೈಸೂರಿನಲ್ಲಿ ದಸರಾ ಅಂಭಾರಿ ನೋಡುವುದೆ ಚೆಂದ. ಅದೆ ರೀತಿಯಲ್ಲಿ ಮೈಸೂರು ದಸರಾ ಮಹೋತ್ಸವದ ನಿಮಿತ್ತ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಕಳೆದ 45 ವರ್ಷದಿಂದ ಬೃಹನ್ಮಠ ಕಲ್ಮಠ ಮಠದಿಂದ ಅಂಭಾರಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಪುಠಾಣಿ ಮಕ್ಕಳು ಹಾಗೂ ಮಹಿಳೆಯರಿಂದ ಸಾವಿರಾರು ಸಂಖ್ಯೆಯಲ್ಲಿ ಕಳಸ ಮೆರವಣಿಗೆ ನಡೆದರೆ, ಡೊಳ್ಳು ಕುಣಿತ, ತಾಷಾ ಹಾಗು ಡಿಜೆ ಸೌಂಡ್ ಗೆ ಪುಠಾಣಿಗಳು ಕುಣಿದು ಕುಪ್ಪಳಿಸಿದರು.

ಮೆರವಣಿಗೆಯಲ್ಲಿ ರಾಜಕಾರಣಿಗಳು ಹಾಗೂ ಸ್ವಾಮೀಜಿಗಳು ಭಾಗಿಯಾಗಿದ್ದರೆ, ಭಕ್ತರಿಗೆ ಕಲ್ಮಠ ಮಠದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ