ಅಂಗನವಾಡಿ ಕಾರ್ಯಕರ್ತೆಯರ ನೇಮಕ ಅಕ್ರಮ – ರದ್ದತಿಗೆ ಬಿ.ಎಸ್.ಪಿ ಯಿಂದ ಆಗ್ರಹ.
ಕೋರಹಳ್ಳಿ ಅ.15

ಆಲಮೇಲ ತಾಲ್ಲೂಕಿನ ಕೋರಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ಎರಡರಲ್ಲಿ ಕಾರ್ಯಕರ್ತೆ ಹುದ್ದೆ ಖಾಲಿ ಇದ್ದ ಕಾರಣ ಸರ್ಕಾರ ಆದೇಶದ ೨೦೨೨ ರ ನಿಯಮಾವಳಿಯ ಪ್ರಕಾರ ಗ್ರಾಮದವರಿಗೆ ನೇಮಕ ಮಾಡಬೇಕು, ಆದರೆ ಸಿಂದಗಿ ತಾಲ್ಲೂಕಿನ ಶಿಶು ಅಭಿವೃದ್ಧಿ ಅಧಿಕಾರಿಗಳು, ಸರ್ಕಾರದ ನಿಯಮಾವಳಿಯನ್ನು ಗಾಳಿಗೆ ತೂರಿರುತ್ತಾರೆ, ಬೇರೆ ಹಳ್ಳಿಯ ಕಾರ್ಯಕರ್ತೆಯನ್ನು, ಈ ಹುದ್ದೆಗೆ ನೇಮಕ ಮಾಡಿ, ಅಕ್ಟೋಬರ್, ೧೦ ರಂದು ಹಾಜರಾಗಿದ್ದರು. ಆದರೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿವ ಸಲುವಾಗಿ ಹಾಜರಾತಿ ಪುಸ್ತಕದಲ್ಲಿ ಅಕ್ಟೋಬರ್ ತಿಂಗಳ ಒಂದು ಪ್ರತಿಯನ್ನು ಹರಿದು ಹಾಕಿ ಅಕ್ಟೋಬರ್ ೧ ರಂದು ೧೦ ವರೆಗೆ ಅನಧಿಕೃತ ಹಾಜರಾತಿಗೆ ಸಹಿ ಮಾಡಿಸಿದ್ದಾರೆ. ಈ ಅಕ್ರಮದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿಗಳು ಸಿಂದಗಿ ಹಾಗೂ ಮೇಲ್ವಿಚಾರಕರು ಸಂಪೂರ್ಣವಾಗಿ ಅಕ್ರಮದಲ್ಲಿ ತೊಡಗಿ ಕೊಂಡಿರುತ್ತಾರೆ,

ಕೂಡಲೇ ಭ್ರಷ್ಟಾಧಿಕಾರಿಗಳನ್ನು ಅಮಾನತು ಮಾಡಬೇಕು, ಈ ಅಕ್ರಮ ನೇಮಕವನ್ನು ರದ್ದು ಗೊಳಿಸಬೇಕು ಹಾಗೂ ಈ ಹುದ್ದೆಯನ್ನು ಪುನಃ ನೇಮಕ ಅರ್ಜಿಯನ್ನು ಕರೆಯಬೇಕು ಎಂದು ತಾಲ್ಲೂಕು ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು, ಒಂದು ವೇಳೆ ಈ ಬೇಡಿಕೆ ಈಡೇರಿಸದೆ ಹೋದರೆ ತಹಶಿಲ್ದಾರ ಕಛೇರಿ ಆವರಣದಲ್ಲಿ ಧರಣೆ ಸತ್ಯಾಗ್ರಹ ಕೈಗೊಳ್ಳುತ್ತವೆ, ಎಂದು ಬಹುಜನ ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ, ಈ ಹೋರಾಟವನ್ನು ಬಹುಜನ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯಧ್ಯಕ್ಷರಾದ ಶ್ರೀಶೈಲ ಜಾಲವಾದ, ಹಾಗೂ ತಾಲ್ಲೂಕು ಬಹುಜನ ದಲಿತ ಸಂಘರ್ಷ ಸಮಿತಿ ಸಿಂದಗಿ ಶಾಖೆಯ ನೇತೃತ್ವದಲ್ಲಿ ನಡೆಯಿತು, ಈ ಹೋರಾಟದಲ್ಲಿ ದಲಿತ ಮುಖಂಡರಾದ ಪರಸುರಾಮ ಕಾಂಬಳೆ, ಧರ್ಮಣ್ಷ ಎಂಟಮಾನ, ಶ್ರೀನಿವಾಸ ಓಲೇಕಾರ, ಪ್ರಕಾಶ ತಳಕೇರಿ, ಸುನಿಲ ಕನಮಡಿ ದಾದಾ ತಾಂಬೊಳಿ ರಾಜು ಹೊಸಮನಿ ಅಮರ ಅಳ್ಳಗಿ ಹಾಗೂ ಕನ್ನಡ ಪರ ಸಂಘಟನೆಗಳು ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ