“ಮೌಲಿಕ ಕಾವ್ಯದ ಹರಿಕಾರ ಮಹರ್ಷಿ ವಾಲ್ಮೀಕಿ”…..

ಭಾರತೀಯ ಸಂಸ್ಕೃತಿಯಲ್ಲಿ ಮೌಲಿಕ ಕಾವ್ಯಗಳು ಎಂದು ಗುರುತಿಸಿ ಕೊಂಡಿರುವ ಶ್ರೇಷ್ಠ ಉತ್ಕೃಷ್ಟ ಕಾವ್ಯಗಳೆಂದರೆ ರಾಮಾಯಣ ಮತ್ತು ಮಹಾಭಾರತ. ಒಬ್ಬ ವ್ಯಕ್ತಿ ಸಾಧನೆಗೈಯಲು ವೃತ್ತಿ ಮುಖ್ಯವಲ್ಲ ಮನಸ್ಸು ಮುಖ್ಯ, ಮನಸ್ಸಿದ್ದರೆ ಮಾರ್ಗ ಎಂಬಂತೆ ಒಬ್ಬ ಬೇಟೆಗಾರ ರಾಮಾಯಣವೆಂಬ ಮಹಾಕಾವ್ಯ ರಚಿಸಿ ಭಾರತೀಯ ಸಂಸ್ಕೃತಿಯನ್ನು ಯಾವ ಕಾಲಕ್ಕೂ ಮರೆಯದ ಹಾಗೆ ಮಾಡಿದ್ದಾರೆ. ರಾಮಾಯಣ ಕಾವ್ಯವು ಒಬ್ಬ ವ್ಯಕ್ತಿ ಸಮಾಜದಲ್ಲಿ ಬದುಕನ್ನು ಹೇಗೆ ಬದುಕಬೇಕು ಎಂಬುದನ್ನು ತಿಳಿಸಿದರೆ, ಮಹಾಭಾರತ ಹೇಗೆ ಬದುಕಬಾರದು ಎಂಬ ಸಂದೇಶವನ್ನು ತಿಳಿಸುತ್ತದೆ. ಮೂಲ ಮಹಾಕಾವ್ಯ ರಾಮಾಯಣವು ವೈದಿಕ ಧರ್ಮದಿಂದ ಸಾದರವಾಗಿದ್ದು, ಕಾವ್ಯದ ಕರ್ತೃ ವಾಲ್ಮೀಕಿ ಮಹರ್ಷಿ, ಇನ್ನು ಹತ್ತನೇ ಶತಮಾನದಲ್ಲಿ ರಾಮಾಯಣವು ಜೈನ ಕವಿ ನಾಗಚಂದ್ರನಿಂದ ಚಂಪು ಸಾಹಿತ್ಯದಲ್ಲಿ ರಚಿಸಲ್ಪಟ್ಟದ್ದು ಮೂಲ ರಾಮಾಯಣಕ್ಕೂ ಜೈನ ರಾಮಾಯಣಕ್ಕೂ ಸಾಕಷ್ಟು ಸಾಮ್ಯತೆಗಳೊಂದಿಗೆ ಕೆಲವು ವ್ಯತ್ಯಾಸಗಳನ್ನು ಕಾಣುತ್ತೇವೆ. ಪ್ರಸ್ತುತವಾಗಿ ಇಲ್ಲಿ ಒಂದು ಸ್ಪಷ್ಟಿಕರಿ ಸುವುದಾದರೆ ವೈದಿಕ ಧರ್ಮದ ರಾಮಾಯಣದಲ್ಲಿ ದುಷ್ಟರನ್ನ ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವುದು. ಅಂದರೆ (ಒಂದೇ ಹೊಡೆತ ಎರಡು ತುಂಡು) ಅನ್ನೋ ಹಾಗೆ ಆದರೆ ಈ ಜೈನ ಧರ್ಮದ ರಾಮಾಯಣದಲ್ಲಿ ಪಶ್ಚಾತಾಪವೇ ಪ್ರಾಯಶ್ಚಿತ್ತ. ‘ಉದಾಹರಣೆಗೆ ಮೂಲ ರಾಮಾಯಣದಲ್ಲಿ ರಾಮ ರಾವಣನನ್ನು ಕೊಲ್ಲುತ್ತಾನೆ. ಆದರೆ ಜೈನಕವಿ ನಮ್ಮ ನಾಗಚಂದ್ರನ ಕಾವ್ಯದಲ್ಲಿ ರಾಮ ರಾವಣನನ್ನು ಕೊಲ್ಲುವುದಿಲ್ಲ. ಪ್ರತಿಯಾಗಿ ಲಕ್ಷ್ಮಣ ಕೊಲ್ಲುತ್ತಾನೆ. ಈ ಒಂದು ವ್ಯತ್ಯಾಸವನ್ನು ನಾವು ಕಾಣಬಹುದು. ಆದಾಗ್ಯೂ ಯಾವಕುಲ ಎಂಬಂತಹ ಮೌಡ್ಯ ಪ್ರಶ್ನೆಗೆ. ದೇವನೊಲಿದ ಕುಲವೇ ಶ್ರೇಷ್ಠ ಎಂಬುದು ಮರೆಯಬಾರದು . ಕಾರಣ ಆದಿಕವಿ ಪಂಪ ಹೇಳಿರುವ ಹಾಗೆ ಮಾನವ ಕುಲ ತಾನೊಂದೇ ವಲಂ ಎಂಬುದು ಅಕ್ಷರಶಃ ಸತ್ಯ. ರಸ ಋಷಿ ಹೇಳಿದ್ದು ಹಾಗೇನೆ. ಇಡೀ ವಿಶ್ವವೇ ಒಂದು ಕುಟುಂಬವಿದ್ದಂತೆ. ವಸುದೈವ ಕುಟುಂಬಕಂ. ಇಲ್ಲಿ ಜ್ಞಾನ ಮುಖ್ಯ ಕಾರಣ ನಹಿ ಜ್ಞಾನೇನ ಸಾ ದೃಶ್ಯಂ. ಜ್ಞಾಊನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಎಂಬುದನ್ನು ಇವತ್ತಿನ ದಿನ ವಾಲ್ಮೀಕಿ ಋಷಿ 21ನೇ ಶತಮಾನದ ಕಾಲಘಟ್ಟಕ್ಕೆ ಮತ್ತೆ ಮತ್ತೆ ನೆನಪಿಸಿ ಸಾಬೀತು ಮಾಡುತ್ತಿರುವುದು ಸಮಾಜಮುಖಿ ವ್ಯಕ್ತಿ ಮತ್ತು ಕಾವ್ಯ ಎಂಬುದು ಹೆಗ್ಗಳಿಕೆಯ ವಿಚಾರ. ಅಷ್ಟೇ ಅಲ್ಲ ವ್ಯಕ್ತಿ ಮುಖ್ಯವಲ್ಲ ಇಲ್ಲಿ ವ್ಯಕ್ತಿತ್ವ ಮುಖ್ಯ. ಎಲ್ಲಾ ಕಾಲಘಟ್ಟಕ್ಕೆ ಅಂದರೆ ಭೂತ ವರ್ತಮಾನ ಭವಿಷ್ಯತ್ನಲ್ಲಿ ಅನುಸರಿಸುವ ಯಾವುದಾದರೂ ಒಂದು ಇದೆ ಎನ್ನುವುದಾದರೆ ಅದುವೇ ಶ್ರೀ ರಾಮಾಯಣ ಮಹಾ ಕಾವ್ಯ. ಮೂಲ ರಾಮಾಯಣದ ಕರ್ತೃ ವಾಲ್ಮೀಕಿ ಋಷಿಯು ಕ್ರಿಸ್ತಪೂರ್ವ 500 ಆಶ್ವಿಜ ಮಾಸದ ಶರತ್ ಪೂರ್ಣಿಮೆ ಯ0ದು ಗಂಗಾ ನದಿ ತಟದಲ್ಲಿ ಜನ್ಮ ಪಡೆಯುವರು. ಇವರ ಪೂಜ್ಯ ಜನ್ಮದಾತ ಪ್ರಚೇತ, ಸಮಾಲಿ, ವರಣ್, ಆದಿತ್ಯ ಹೀಗೆ ಒಬ್ಬಾತನಿಗಿದ್ದ ಹಲವು ಹೆಸರುಗಳು ಅಥವಾ ಬೇರೆ ಬೇರೆ ವ್ಯಕ್ತಿಗಳು ಎಂಬುದು ನಿಖರವಾಗಿ ಎಲ್ಲಿಯೂ ಗೊತ್ತಿಲ್ಲದ ಕಾರಣ, ಅನೇಕ ಪುರಾಣ ಕಥೆಗಳ ಹಿನ್ನೆಲೆಯಲ್ಲಿ ಓದಿಗರಿಗೆ ಈ ಇಷ್ಟು ಹೆಸರುಗಳನ್ನ ದಾಖಲಿಸಿರುವೆ. ಇನ್ನು ತಾಯಿ ಚಾರ್ಶಿ ಎಂಬುವರು ಅಜ್ಜ ಕಶ್ಯಪ ಅಜ್ಜಿ ಆದಿತಿ ತುಂಬು ಕುಟುಂಬದ ಜೊತೆಗೆ ಕಾಲ ಕಳೆಯುವಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಒಂದು ದಿನ ಕಾಡಿನಲ್ಲಿ ಕಳೆದು ಹೋಗುವವರು. ಆಗ ಬೇಟೆಗಾರನ ಕೈಗೆ ದೊರೆತಾಗ ಆ ಬೇಟೆಗಾರ ಈ ರತ್ನಾಕರನನ್ನ ಬೆಳೆಸುತ್ತಾನೆ. ವಾಲ್ಮೀಕಿಯನ್ನು ಅನೇಕ ಹೆಸರುಗಳಿಂದ ಅಂದರೆ ಅಗ್ನಿ ಶರ್ಮ, ಆದಿಕವಿ, ಡಕಾಯಿತ ರತ್ನಾಕರ, ಎಂದು ಕರೆಯಲಾಗುತ್ತದೆ. ಹೀಗೆ ಬೇಟೆಗಾರ ವೃತ್ತಿಯಲ್ಲಿ ತನ್ನ ಕುಟುಂಬ ನಿರ್ವಹಣೆ ಮಾಡುತ್ತಿದ್ದ ವೇಳೆ ಮಹರ್ಷಿ ನಾರದರ ಆಕಸ್ಮಿಕ ಬೇಟೆಯಿಂದ ರತ್ನಾಕರನ ಬದುಕಿನ ದಿಕ್ಕೆ ಬದಲಾಯಿತ್ತು. ಎಂಬುದು ಪ್ರತೀತಿ, ಅದಕ್ಕೆ ಹೇಳುವುದು ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಗುರಿ ಮುಟ್ಟುವ ಛಲ ನಮ್ಮದಾಗಿರಬೇಕು. ಎಂಬಂತೆ ರತ್ನಾಕರ ವಾಲ್ಮೀಕಿ ಮಹರ್ಷಿಯಾಗಿ ಒಂದು ಮಹಾನ್ ಗ್ರಂಥ ರಚಿಸಿ ಚರಾಚರಗಳಿಗೆ ಜೈವಿಕ ಕಳೆ ತುಂಬಿ ಬೂತ ವರ್ತಮಾನ ಭವಿಷ್ಯತ್ತಿನಲ್ಲಿ ಹೇಗೆ ಸುಂದರ ಬದುಕನ್ನು ಕಟ್ಟಿ ಕೊಳ್ಳಬಹುದು, ಮತ್ತು ಹೇಗೆ ಸಮಾಜದೊಂದಿಗೆ ಬೆರೆಯಬೇಕು, ಎಂಬುದನ್ನು ಶ್ರೇಷ್ಠ ಕಾವ್ಯ ರಾಮಾಯಣದ ಮೂಲಕ ವಾಸ್ತವ ಬದಕನ್ನ ಸವಿಯಿರಿ, ಸವಿಸಬೇಡಿ ಎಂಬ ಸಂದೇಶವನ್ನು ನೀಡಿದ ಮಹಾನ್ ಚೇತನಕ್ಕೆ ನಮೋ ನಮಃ.

ಕೆ.ಜೆ ಪೂರ್ಣಿಮಾ ಉಪನ್ಯಾಸಕಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button