ಬೇವೂರು ಕಾಲೇಜಿಗೆ ಉತ್ತಮ ಫಲಿತಾಂಶ.
ಬೇವೂರ ಅ.17

ಆದರ್ಶ ವಿದ್ಯಾವರ್ಧಕ ಸಂಘದ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಬಿ.ಎ ಆರನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಾಲೇಜಿನ ಫಲಿತಾಂಶ ಸರಾಸರಿ ೯೪.೫೯% ಆಗಿದೆ. ೭೪ ವಿದ್ಯಾರ್ಥಿಗಳಲ್ಲಿ ೩೨ ವಿದ್ಯಾರ್ಥಿಗಳು ಶ್ರೇಷ್ಠ ದರ್ಜೆ (ಡಿಸ್ಟಿಂಕ್ಷನ್), ೧೬ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ, ೨೧ ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ, ೧ ವಿದ್ಯಾರ್ಥಿ ತೃತೀಯ ಸ್ಥಾನದಲ್ಲಿ ಕಲಾ ವಿಭಾಗದ ಪರೀಕ್ಷೆಯಲ್ಲಿ ಉತೀರ್ಣರಾಗಿರುತ್ತಾರೆ.

ಒಟ್ಟು ೬೫೦ ಅಂಕಗಳಿಗೆ, ೯೪.೧೫ % ( ೬೧೨) ಅಂಕಗಳನ್ನು ಪಡೆದು ಕುಮಾರಿ. ಪ್ರತಿಭಾ ಅಶೋಕ ಹೆಳವರ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರಿ ಸಂಗನಬಸವ್ವ ಚಂದಪ್ಪ ಕರಿಗಾರ ೯೩.೦೭% ( ೬೦೫) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು, ಕುಮಾರಿ ಭಾಗ್ಯಶ್ರೀ ಅಪ್ಪಣ್ಣ ಗೌಡರ ೮೮.೭೬% (೫೭೭) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಉತ್ತಮ ಫಲಿತಾಂಶಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಿ.ಜಿ ಮಾಗನೂರ ವಕೀಲರು ಹಾಗೂ ಸದಸ್ಯರು ಸೇರಿದಂತೆ ಕಾಲೇಜಿನ ಪ್ರಾಚಾರ್ಯರಾದ ಡಾ, ಜಗದೀಶ.ಗು ಭೈರಮಟ್ಟಿ ಹಾಗೂ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ : ಅಮರೇಶ. ಗೊರಚಿಕನವರ