ವಿಜಯನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಕೂಡ್ಲಿಗಿ ಅ.21

ವಿಜಯನಗರ ಜಿಲ್ಲೆ ಸಾಹಿತ್ಯಕ್ಕೆ, ಕಲೆ, ಸಂಸ್ಕೃತಿ ಇತಿಹಾಸ ಪರಂಪರೆ, ಕನ್ನಡ ಸಾಹಿತ್ಯಕ್ಕೆ ವಿಜಯನಗರ ಜಿಲ್ಲಾ ಸಾಹಿತಿಗಳ ಕೊಡುಗೆ ಅಪಾರ, ಆದಿಕವಿ ಪಂಪ ರನ್ನರ ನಂಟು, ಹರಿಹರ ರಾಘವಾಂಕರು ಹಂಪಿಯಲ್ಲಿ ನೆಲೆ ನಿಂತು ಕಾವ್ಯಗಳನ್ನು ರಚಿಸಿದ್ದರು ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಮತ್ತು ಆಧುನಿಕ ಕಾಲಘಟ್ಟದ ಸಾಹಿತಿಗಳಾದ ಅಭಿನವ ಸರ್ವಜ್ಞರಿಂದ ಹೆಸರಾದ ರೇವರೆಂಡ್ ಉತ್ತಂಗಿ ಚನ್ನಪ್ಪನವರು, ಕರ್ನಾಟಕ ಏಕೀಕರಣದ ಹೋರಾಟಗಾರರ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಯವರು, ಕೋ ಚನ್ನಬಸಪ್ಪನವರು, ಬಳ್ಳಾರಿಯ ರಾಘವರು, ಹಾಸ್ಯಕವಿ ಬೀಚಿ, ಖ್ಯಾತ ಪತ್ರಕರ್ತರಾದ ರವಿ ಬೆಳಗೆರೆ, ಸೇರಿದಂತೆ ಅನೇಕ ಸಾಹಿತಿಗಳನ್ನು ಇದೇ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮ್ಮೇಳನ ಅಧ್ಯಕ್ಷರಾದ ಎನ್.ಎಂ ರವಿಕುಮಾರ್ ಸ್ಮರಿಸಿದರು. ಕಾರ್ಯಕ್ರಮದ ಉದ್ಘಾಟಿಸಿ ಡಾ, ಕೆ ರವೀಂದ್ರನಾಥ ಮಾತನಾಡಿ ವಿಜಯನಗರ ಸಾಮ್ರಾಜ್ಯದಲ್ಲಿ ಆಸ್ಥಾನದ ಕವಿಗಳು ಪ್ರಾಚೀನ ಸಾಹಿತ್ಯ ಮಾತ್ರ ಬರೆಯಲಿಲ್ಲ ಬದಲಾಗಿ ಇತಿಹಾಸ ಕಟ್ಟಿ ಕೊಳ್ಳುವ ಪ್ರಯತ್ನ ಮಾಡಿ ಕಾವ್ಯ ಅಧ್ಯಯನ ಮೂಲಕ ತಿಳಿಸಬಹುದು ಎಂದರು. ಲೇಖಕ ಭೀಮಣ್ಣ ಗಜಪುರ ಮಾತನಾಡಿ ಸಮ್ಮೇಳನ ಅಧ್ಯಕ್ಷರ ಕುರಿತು ಅಧ್ಯಕ್ಷರ ಸುದೀರ್ಘ ಜೀವನ ಅನುಭವವನ್ನು ತಿಳಿಸಿದರು. ಷ.ಬ್ರ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಡೊಣ್ಣೂರು ಚಾನು ಕೋಟಿ ಮಠ ಕೊಟ್ಟೂರು, ದಾ.ಮ. ಐಮಡಿ ಶರಣಾರ್ಯರು, ಸಾನಿಧ್ಯ ವಹಿಸಿದ್ದರು. ಚೇತನ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಡಾ, ಚಂದ್ರಶೇಖರ ಮಾಡಲಗೇರಿ, ಹಿರಿಯ ಕವಿಗಳಾದಯು ಜಗನ್ನಾಥ್, ಸುವರ್ಣ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಡಾ, ಜಿ ಶಿವಣ್ಣ, ಪ್ರೇಮ ಭಜಂತ್ರಿ, ಪುಷ್ಪ, ಕೂಡ್ಲಿಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೀರೇಶ್ ಅಂಗಡಿ, ಜಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಜಾತ, ಹಾಗೂ ದತ್ತಿ ದಾನಿಗಳಾದ ಸುಭಾಷ್ ಚಂದ್ರ ಇದ್ದರು. ನಂತರ ಶ್ರೀಮತಿ ಕೆ. ವೀರಮ್ಮ ಶ್ರೀ ಕಾಮ ಶೆಟ್ಟಿ, ದೇವೇಂದ್ರಪ್ಪ ದತ್ತಿ ಉಪನ್ಯಾಸ ಮತ್ತು ಕವಿ ಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಸುರೇಶ್ ಕೋರೆಕೊಪ್ಪ ಮಾತನಾಡಿ ಕನ್ನಡ ಉಳಿಸು ಬೆಳೆಸುವಂತಹ ಕೆಲಸ ನಾವು ನೀವೆಲ್ಲರೂ ಕಂಕಣ ಬದ್ಧರಾಗಿ ನಿಲ್ಲಬೇಕು.

ಯುವ ಸಾಹಿತಿಗಳು ಕನ್ನಡ ನಾಡಿಗೆ ತನ್ನದೇ ರೂಪದಲ್ಲಿ ಹೊಸ ಲೇಖನಿಗಳನ್ನು ಕಾದಂಬರಿಗಳನ್ನು ಕವನ ಸಂಕಲನಗಳನ್ನು ಹೊರ ತರುವುದರ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡ ಬೇಕೆಂದು ಕವಿಗಳಿಗೆ ಕಿವಿಮಾತು ತಿಳಿಸಿದರು. ದಿವ್ಯ ಸಾನಿಧ್ಯವನ್ನು ಷ,ಬ್ರ, ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ಇಂತಹ ಸಮ್ಮೇಳನಗಳು ಈ ನಾಡಿನಾದ್ಯಂತ ನಡೆಯಲಿ ಜೊತೆಗೆ ಈ ಕನ್ನಡ ನಾಡಿನ ಸಾಹಿತಿಗಳನ್ನು ಸ್ಮರಿಸಬೇಕು. ಯುವ ಶಕ್ತಿಯಲ್ಲಿ ಸಾಹಿತ್ಯದ ಬಗ್ಗೆ ನಾಡು ನುಡಿ ಜಲ ಭಾಷೆಯ ಬಗ್ಗೆ ಸವಿವರವಾಗಿ ತಿಳಿಸಿದರು. ಅಂಜಲಿ ಬೆಳಗಲ್ ಮತ್ತು ಎ.ಕರಿಬಸಪ್ಪ ವಿಶೇಷ ಉಪನ್ಯಾಸ ನೀಡಿದರು ಇದೇ ಸಂದರ್ಭದಲ್ಲಿ ಚೇತನ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾ, ಚಂದ್ರಶೇಖರ್ ಮಡಲಗೇರಿ, ಸುರೇಶ್ ಕೋರೆಕೊಪ್ಪ, ಡಾ, ಜಿ.ಶಿವಣ್ಣ, ಲೇಖಕಿ ಅಂಜಲಿ ಬೆಳಗಲ್, ಡಾ, ಎ.ಕರಿಬಸಪ್ಪ, ಕೂಡ್ಲಿಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಅಂಗಡಿ ವೀರೇಶ್, ನಿವೃತ್ತ ಬಿ,ಡಿ,ಓ ಕೊಟ್ರಯ್ಯ ಕೂಡ್ಲಿಗಿ ತಾಲೂಕು ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಸ್.ಎಮ್ ಗುರುಪ್ರಸಾದ್, ಹೋಬಳಿ ಘಟಕದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಎನ್.ಎಸ್, ನಿವೃತ್ತಿ ಶಿಕ್ಷಕರಾದ ಚಂದ್ರಪ್ಪ, ದೇವಿರಮ್ಮ, ಸಣ್ಣ ವೀರಣ್ಣ, ರೈತ ಹೋರಾಟಗಾರ ಎನ್ ಬಸವರಾಜ್, ಡಾ, ಟಿ ಓಂಕಾರಪ್ಪ , ಪಿಎಂ ಸಿದ್ದಲಿಂಗ ಮೂರ್ತಿ ಪೂಜಾರಹಳ್ಳಿ, ಹನುಮಂತರಾಜು, ಸೇರಿದಂತೆ ರಾಜ್ಯ ಮಟ್ಟದ ಶ್ರೀ ಕೃಷ್ಣದೇವರಾಯ ಸೇವರತ್ನ ಪ್ರಶಸ್ತಿ ಪುರಸ್ಕೃತರು, ಕರುನಾಡ ಚೇತನ ಪ್ರಶಸ್ತಿ ಪುರಸ್ಕೃತರು, ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ತಾಲೂಕು ಘಟಕದ ಪದಾಧಿಕಾರಿಗಳು, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ರೈತ ಮುಖಂಡರು, ಕನ್ನಡ ನಾಡು ನುಡಿ ಚಿಂತಕರು, ಬರಹಗಾರರು, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ