ಗೌರಿ ಲಂಕೇಶ್ ಕೊಲೆ ಮಾಡಿದ್ದ ಆರೋಪಿಗಳಿಗೆ ಸನ್ಮಾನ ಮಾಡಿದ್ದರಿಂದ – ಕೊಲೆಗೆ ಪ್ರಚೋದನೆ ಪ್ರಕರಣ ಕೂಡಲೇ ದಾಖಲಿಸುವಂತೆ ಮನವಿ.
ಬಳ್ಳಾರಿ ಅ.24

ಖ್ಯಾತ ಪತ್ರಕರ್ತೆ ಲೇಖಕಿ ಮಾನವ ಹಕ್ಕು ಹೋರಾಟಗಾರ್ತಿ ಯಾದಂತ ಗೌರಿ ಲಂಕೇಶ್ ಇವರನ್ನು ಕೊಲೆ ಮಾಡಿದಂತ ಆರೋಪಿಗಳಿಗೆ ಸನ್ಮಾನ ಮಾಡಿರುವ ಅವರ ಮೇಲೆ ಕೂಡಲೇ ಪ್ರಚೋದನೆ ಪ್ರಕರಣ ದಾಖಲಿಸ ಬೇಕು ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ವಿರುದ್ಧ ಅಗತ್ಯ ಕ್ರಮ ವಹಿಸಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಪ್ರಕರಣ ದಾಖಲಿಸಲಿಕ್ಕಾಗಿ ಆಗ್ರಹಿಸುತ್ತದೆ. ಅತ್ಯಾಚಾರಿಗಳಿಗೆ ಕೊಲೆಗಾರರಿಗೆ ಸನ್ಮಾನ ಮಾಡುವುದನ್ನು ಗುಜರಾತ್ ಉತ್ತರ ಪ್ರದೇಶಗಳಲ್ಲಿ ಕಂಡಿದ್ದೇವೆ ಆದರೆ ಇದೀಗ ಕರ್ನಾಟಕ ರಾಜ್ಯದಲ್ಲಿ ಕೊಲೆ ಮಾಡಿರುವ ಆರೋಪಿಗಳಿಗೆ ಸನ್ಮಾನ ಮಾಡಿರುವುದು ಈ ನೆಲ ಘೋಷಿಸಿ ಕೊಂಡು ಬಂದಿದ್ದೆ ಮಾನವೀಯ ಮೌಲ್ಯಗಳು ಕಳಂಕವಾಗಿದೆ. ಕೋಮುವಾದಿಯ ಕಾರ್ಪೊರೇಟರ್ ಆಗಿದ್ದಾರೆ. ಇದರಿಂದ ಗೌರಿ ಕೊಲೆ ಪ್ರಕರಣದಲ್ಲಿ ಭಾಗಿಯಾದವರು ಸಂಘ ಪರಿವಾರದ ಬೇರೆ ಬೇರೆಯ ಅಂಗ ಸಂಸ್ಥೆಯವರು ಎಂಬುದು ಇದರಿಂದ ಗೊತ್ತಾಗುತ್ತದೆ.

ಈ ಸನ್ಮಾನ ಮಾಡಿ ಈ ರೀತಿ ಕೊಲೆಗಳ ರೂವಾರಿಗಳು ಎಂಬುದರ ಸೂಚನೆಯಾಗಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ಕರ್ನಾಟಕ ಸೌಹಾರ್ದಕ್ಕೆ ಶಾಂತಿ ನೆಮ್ಮದಿ ಬುದ್ಧ ಬಸವಣ್ಣನ ಕುವೆಂಪು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಡಿಗೆ ಹೆಸರು ವಾಸಿಯಾದಂತ ಈ ರಾಜ್ಯ .ಗೌರಿ ಹಂತವರಿಗೆ ಸನ್ಮಾನಿಸುವ ಮೂಲಕ ರಾಜ್ಯದ ನಾಗರಿಕರಿಗೆ ಅವಮಾನಿಸಿದಂತೆ ಆದುದರಿಂದ ಸನ್ಮಾನ ಮಾಡಿದವರ ವಿರುದ್ಧ ಕೂಡಲೇ ಸೂಕ್ತ ಕ್ರಮ ವಹಿಸಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಬಳ್ಳಾರಿ ಜಿಲ್ಲಾಧಿಕಾರಿಗಳ ಮುಖಾಂತರ ಸನ್ಮಾನ್ಯ ಶ್ರೀ ಡಾ, ಜಿ ಪರಮೇಶ್ವರ್ ಗೃಹ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸುತ್ತಾ ಪತ್ರಿಕಾ ಮಾಧ್ಯಮದ ಮೂಲಕ ಕೋರಿಕೆ ಆಗಿರುತ್ತದೆ. ಕೆ ಶಂಕರ್, ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿ ಹನುಮೇಶ್ ಕಟ್ಟಿಮನಿ,ಜಿಲ್ಲಾ ಕಾರ್ಯಧ್ಯಕ್ಷರು, ಓಬಳೇಶ್ ಚಲವಾದಿ ಇತರರು ಪಾಲ್ಗೊಂಡಿದ್ದರು.