ಗೋಲಗೇರಿ ಗ್ರಾ.ಪಂ ಅಧ್ಯಕ್ಷರು ಅವಿರೋಧ ಆಯ್ಕೆ.
ಗೋಲಗೇರಿ ಅ.24

ಅಧ್ಯಕ್ಷರು ಸ್ಥಾನಕ್ಕೆ ಇಂದು ಚುನಾಣೆ ನಡೆಯಿತು, ೨೨ ಸದಸ್ಯರು ಇದ್ದಾರೆ, ಅದರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮತಿ ಹಣಮವ್ವ, ನಾಗಪ್ಪ, ಜೈನಾಪುರ ಅವರು ನಾಮಪತ್ರ ಸಲ್ಲಿಸಿದರು ಅವರ ವಿರುದ್ಧ ಯಾವುದೇ ನಾಮಪತ್ರ ಸಲ್ಲಿಕೆ ಆಗದೆ ಇದ್ದ ಕಾರಣ,ಹಣಮವ್ವ ಜೈನಾಪುರ ಅವರನ್ನು ಅವಿರೋದವಾಗಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳಾದ ಅಗ್ನಿ, ಅವರು ತಿಳಿಸಿದರು, ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷರು ಚುನಾವಣೆಯಲ್ಲಿ ಅಧ್ಯಕ್ಷರು ಸ್ಥಾನ ಬಿಜೆಪಿ ತೆಕ್ಕಗೆ ಸಿಕ್ಕಿತು, ಸಂದರ್ಬದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಅವರು ಸಮಗ್ರ ಗ್ರಾಮ ಪಂಚಾಯಿತಿ ವಾಪ್ತಿಯಲ್ಲಿ ಬರುವಂತೆ ಎಲ್ಲಾ ಹಳ್ಳಿಗಳಿಗೆ ಅಬಿವೃದ್ದಿಗೆ ಎಲ್ಲರೂ ಸಹಕಾರ ಕೊಡಬೇಕು ಸ್ವಚ್ಚತೆಗೆ ಹಾಗೂ ನೀರು ವಿದ್ಯುತ್, ಗ್ರಾಮಗಳ ಮೂಲ ಸೌಕರ್ಯವನ್ನು ಆದ್ಯತೆಗೆ ಕೋಡಬೇಕು ಸಮಗ್ರ ಅಭಿವೃದ್ದಿ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರಮಿಸಬೇಕು ಎಂದು ಹೇಳಿದರು. ಈ ಸಂದರ್ಬದಲ್ಲಿ ಸಿದ್ದು ಬುಳ್ಳಾ ಅವರು ಮಾತನಾಡಿ ಪಂಚಾಯತಿ ವಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೆ ಕುಂದು ಕೊರತೆಗಳನ್ನು ಆಗದಂತೆ ಮೂಲ ಸೌಕರ್ಯವನ್ನು ಒದಗಿಸಬೇಕು ಎಂದು ಹೇಳಿದರು, ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ, ಪ್ರಭುಗೌಡ ಪಾಟೀಲ ಶ್ರೀಶೖಲ ಚಳ್ಳಗಿ ಗೌಡಣ್ಣ ಆಲಮೇಲ ಸಂಗನಗೌಡ ಪಾಟೀಲ ಮಹಾಂತೇಶ ಸಾತಿಹಾಳ ಸೖಪೋನಸಾಬ ಕೋರವಾರ ಶಶಿಕಾಂತ ನಾಯ್ಕಲ ಶಿವಣ್ಣ ನಾಗಣಸೂರ ಗೋಲ್ಲಾಳಪ್ಪಗೌಡ ನಾಗಣಸೂರ ಸುನೀಲಗೌಡ ಪಾಟೀಲ ಅಮ್ಮೋಗಿ ಜೖನಾಪುರ ಹಾಗೂ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಹಾಗೂ ಅಧ್ಯಕ್ಷರಿಗೆ ಬೆಂಬಲ ಮಾಡಿದ ಸದಸ್ಯರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಪಂಚಾಯತಿ ಸಿಬ್ಬಂದಿ ಗಳು, ಮತ್ತು ಕಲಕೇರಿ ಪೋಲಿಸ್ ಠಾಣೆಯ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರಹಿಪ್ಪರಗಿ