ಮಾಚೇನಹಳ್ಳಿ ಕೆರೆಗೆ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ 1008. ಶ್ರೀ ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಶುಕ್ರವಾರ ಬಾಗಿನ ಅರ್ಪಿಸಿದರು.
ಉಜ್ಜಿನಿ ಅ.27

ನಿರಂತರ ಮಳೆಯಿಂದ ಹಲವು ವರ್ಷಗಳ ನಂತರ ತುಂಬಿ ಕೋಡಿ ಬಿದ್ದ ಕೆರೆಗೆ ಶ್ರೀ ಉಜ್ಜಯಿನಿ ಜಗದ್ಗುರು ಮಹಾ ಸನ್ನಿಧಿಯವರ ಪಾದ ಪೂಜೆ, ಗಂಗಾಪೂಜೆ ಹಾಗೂ ಮಹಾ ಸನ್ನಿಧಿಯವರ ಅಮೃತ ಹಸ್ತದಿಂದ ಬಾಗಿನ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಜಗದ್ಗುರುಗಳು ಮಾತನಾಡಿ, ಎಲ್ಲೆಡೆ ಈ ವರ್ಷ ಉತ್ತಮ ಮಳೆಯಾಗಿದ್ದು, ಬಹುತೇಕ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ತಪ್ಪಲಿದೆ. ಪ್ರತಿ ವರ್ಷವೂ ಇದೇ ರೀತಿ ಮಳೆ ಬಿದ್ದು, ಸಮೃದ್ಧ ಫಸಲು ಬರಲಿ. ಆ ಮೂಲಕ ರೈತರ ಬದುಕು ಅಸನಾಗಲಿ ಎಂದು ಅಶಿಸಿದರು. ಉಜ್ಜಯಿನಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಂಗಮ್ಮ, ಉಪಾಧ್ಯಕ್ಷೆ ಪುಷ್ಪವತಿ ರೇವಣಸಿದ್ದಪ್ಪ, ಸದಸ್ಯರಾದ ಬಂಗಾರಿ ಶಿವಣ್ಣ, ಕುರುಗೋಡು ಸಿದ್ದೇಶ್, ಗ್ರಾಮದ ಮುಂಖಡರಾದ ಡಾಕ್ಟರ್ ವೆಂಕಟೇಶ್, ಕಮ್ಮಾರ ಎರೆಸ್ವಾಮಿ, ಸುರೇಶ ಒಡೆಯರ್, ಸಣ್ಣ ರಂಗಪ್ಪ, ಸುಣಗಾರ್ ನಾಗಣ್ಣ, ಚನ್ನವೀರ ಸ್ವಾಮಿ, ಎರಿಸ್ವಾಮಿ ಮರಳ ಸಿದ್ದಪ್ಪ , ಜಂಬಣ್ಣ , ಸುಣ್ಣಗಾರ ಶಿವಣ್ಣ, ಮಡಿವಾಳರ ಮಳ್ಳಜ್ಜ , ನಡುಮಾವಿನಳ್ಳಿ ನಾಗೇಂದ್ರಪ್ಪ , ಕೊಟ್ರೇಶ್, ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
ಬಾಕ್ಸ್:-
ಉಜ್ಜಯನಿ ಗ್ರಾಮದ ಮಾಚೇನಹಳ್ಳಿ ಕೆರೆಗೆ ಶುಕ್ರವಾರ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ 1008 ಶ್ರೀ ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಶುಕ್ರವಾರ ಭಾಗಿನ ಅರ್ಪಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ