ಸ್ನೇಹ ಬಳಗದ ಗುರು ವಂದನಾ ಸಮ್ಮೇಳನ ಸಾರ್ಥಕತೆಗೆ ಸಾಕ್ಷೀಕರಿಸಿದ ಮಧುರ ಕ್ಷಣಗಳು.
ದೇವರ ಹಿಪ್ಪರಗಿ ಅ.27

ಸವಿ ಸವಿ ನೆನಪು ಸ್ನೇಹ ಬಳಗದ ಅಪರೂಪದ ಸಮಾಗಮ, ಡಿ.ಎಚ್ ಪದವಿ ಪೂರ್ವ ಮಹಾ ವಿದ್ಯಾಲಯ್ಯ ದೇವರ ಹಿಪ್ಪರಗಿಯ 1988-89 ಸಾಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗುರು ವಂದನಾ ಸ್ನೇಹ ಸಮ್ಮೇಳನವು ಶ್ರೀ 1008 ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ದಿವ್ಯ ಸಾನಿಧ್ಯವನ್ನು ಶ್ರೀ ಷ. ಬ್ರ ವೀರಗಂಗಾಧರ ಮಹಾ ಸ್ವಾಮಿಗಳು ವಹಿಸಿದ್ದರು. ನಿವೃತ್ತ ಶಿಕ್ಷಕ ಪಿ.ಎಸ್ ಮಿಂಚನಾಳ ವಹಿಸಿದ್ದರು. ಪ್ರಾಚಾರ್ಯ ವಿ.ಎಸ್ ಪಾಟೀಲ್ ವಿಶ್ರಾಂತ ಗುರುಗಳಾದ ಬಿ.ಜಿ ಅರಳಿಮಟ್ಟಿ ಸಿ.ಬಿ ಹಿರೇಮಠ ಜೆ.ಆರ್ ಬಿರಾದಾರ ಬಟವಾಲ ಶಿಕ್ಷಕರಾದ ಗಿರೀಶ ಕುಲಕರ್ಣಿ ಮುಖ್ಯ ಶಿಕ್ಷಕ ಪಿ.ಸಿ ತಳಕೇರಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಶೋಭಾ ಗಡೇದ ಪ್ರಾರ್ಥನೆಯೊಂದಿಗೆ ಸಿದ್ದು ಮೇಲಿನಮನಿ ಮೇಲೋಡಿ ತಂಡ ದವರಿಂದ ನಾಡ ಗೀತೆಯ ಮೂಲಕ ಜರುಗಿತು.

ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಷ. ಬ್ರ ವೀರಗಂಗಾಧರ ಮಹಾ ಸ್ವಾಮಿಗಳು ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾ ಸ್ವಾಮಿಗಳು, 37 ವರ್ಷಗಳ ನಂತರ ಸ್ನೇಹ ಬಳಗ ಅಭೂತ ಪೂರ್ವ ಕಾರ್ಯ ಮೆಚ್ಚುವಂತದ್ದು ಬಾಲ್ಯದ ಸ್ನೇಹ ಬದುಕಿನ ನೆನಪು ಸದಾ ಹಸಿರು ಗುರು ವಿಶ್ವದ ಅತೀ ದೊಡ್ಡ ಶಕ್ತಿ ಗುರುವಿನ ಅನುಗ್ರಹ ದಿಂದ ಜೀವನ ಪಾವನ. ಸ್ನೇಹ ಬಳಗದ ಗುರು ವಂದನಾ ಸಮ್ಮೇಳನ ಸಾರ್ಥಕತೆಗೆ ಸಾಕ್ಷೀಕರಿಸಿದ ಮಧುರ ಕ್ಷಣಗಳು. ಎಲ್ಲರಿಗೂ ಶುಭವಾಗಲಿ ಎಂದು ಆಶೀರ್ವಚನ ಮೂಲಕ ಹಾರೈಸಿದರು. ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರಿಗೆ ಗೌರವದ ಗುರು ವಂದನಾ ನೆನಪಿನ ಕಾಣಿಕೆ ಮುಖಾಂತರ ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ಶ್ರೀಮತಿ ಮಂಗಲಾದೇವಿ ಪಾಟೀಲ್ ಕಲಿಸಿದ ಗುರು ವೃಂದವರ ಪರಿಚಯ ಕಾರ್ಯಕ್ರಮ ಮಹತ್ವ ಸ್ನೇಹ ಬಳಗದ ಕಾರ್ಯ ಐತಿಹಾಸಿಕ ನೆನಪು ಉಳಿಯುವಂತದ್ದು ಎಂದರು. ಸರ್ವ ಸ್ನೇಹ ಬಳಗದವರಿಗೆ ಗ್ರೂಪ್ ಫೋಟು ನೆನಪಿನ ಕಾಣಿಕೆ ಸವಿ ಸವಿ ನೆನಪು ಸ್ನೇಹ ಬಳಗದ ಆಕರ್ಷಿಣಿಯವಾಗಿತ್ತು. ಸ್ನೇಹ ಬಳಗ ಗುರು ವಂದನಾ ಸಮ್ಮೇಳ ರೂವಾರಿ ಶ್ರೀ ಸುಧೀರ ಈಳಗೇರ ಸ್ನೇಹ ಬಳಗ ಆತ್ಮೀಯ ಗೌರವದಿ ಸನ್ಮಾನಿಸಿದರು. ಶ್ರೀಮತಿ ನೀತಾ ಜೋಶಿ ವಂದಿಸಿದರು. ಆರೊಗ್ಯ ನಿರೀಕ್ಷಣಾಧಿಕಾರಿ ಸುರೇಶ ಅಂಗಡಿ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರೂಪಿಸಿದರು.