ಶೋಷಿತ ಸಮಾಜ ಮುಖ್ಯ ವಾಹಿನಿಗೆ ಬರಬೇಕು – ಎಂ.ವಿ ಭವಾನಿ.
ಶೃಂಗೇರಿ ಅ.29

ಸಂಘಟನೆ ಮುಖಾಂತರ ಸರ್ಕಾರದ ಸವಲತ್ತುಗಳನ್ನು ಪಡೆದು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿಯಾದ ಎಂ.ವಿ ಭವಾನಿ ರವರು ಹೇಳಿದರು. ಅವರು ಇಂದು ಶೃಂಗೇರಿ ತಾಲೂಕು ಕಲ್ಲುಕಟ್ಟೆ ಗ್ರಾಮದಲ್ಲಿ ಏರ್ಪಡಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ರಿ,ನಂ, 386 / 2020-21 ಸಂಘಟನೆ ನೂತನ ಗ್ರಾಮ ಶಾಖೆ ರಚನಾ ಸಭೆಯಲ್ಲಿ ಮಾತನಾಡಿದರು. ಶೋಷಿತರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಸ್ವಾಭಿಮಾನದ ಜೀವನ ನಡೆಸಬೇಕು ಅದಕ್ಕೆ ಪೂರಕವಾಗಿ ಸಂಘಟನೆ ಸಹಕಾರ ಮಾರ್ಗದರ್ಶನ ನೀಡುತ್ತದೆ ಎಲ್ಲರೂ ಸಂಘಟಿತರಾಗ ಬೇಕು ಎಂದು ಕರೆ ಕೊಟ್ಟರು,

ಇದೇ ಸಂದರ್ಭದಲ್ಲಿ ಕಲ್ಲುಕಟ್ಟೆ ಗ್ರಾಮ ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಗ್ರಾಮ ಶಾಖೆ ಸಂಚಾಲಕರಾಗಿ ಶಾಂತೇಶ್ (ನಾಗೇಶ್) ಸಂಘಟನಾ ಸಂಚಾಲಕರಾಗಿ ನವೀನ್ ವಿ, ಅಣ್ಣಪ್ಪ ಜೆ, ಖಜಾಂಚಿಯಾಗಿ ಪ್ರಕಾಶ್ ರವರನ್ನು ಆಯ್ಕೆ ಮಾಡಿ ನಂತರ ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ಗ್ರಾಮ ಶಾಖೆ ಸಂಚಾಲಕಿಯಾಗಿ ರತ್ನಮ್ಮ ಸಂಘಟನಾ ಸಂಚಾಲಕರಾಗಿ ಲಕ್ಷ್ಮಿ ದೇವಿ, ಉಷಾ, ರೀತ ಹಾಗೂ ಖಜಾಂಚಿಯಾಗಿ ಧನಲಕ್ಷ್ಮಿ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು