ತಾಲೂಕ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ.
ಕೊಟ್ಟೂರು ಅ.29

ತಾಲೂಕ ಸರಕಾರಿ ನೌಕರರ ಸಂಘದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ 2 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶ್ರೀಮತಿ ಪುಷ್ಪಲತಾ ಅವರು ಅವಿರೋಧವಾಗಿ ಆಯ್ಕೆಯಾದರು. ಹಾಗೂ ಹ್ಯಾಳ್ಯಾ ಪಿಡಿಒ ಸಿಎಚ್ ಎಂ ಗಂಗಾಧರ ಅವರು 18 ಮತಗಳಿಂದ ಜಯಗಳಿಸಿದರು.ಆಯ್ಕೆಯಾದ ಶ್ರೀಮತಿ ಪುಷ್ಪಲತಾ ಹಾಗೂ ಪಿಡಿಒ ಸಿಎಚ್ ಎಂ ಗಂಗಾಧರ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಬಿ ಆನಂದ್ ಕುಮಾರ್ ಕಾರ್ಯನಿರ್ವಾಹಕ ಅಧಿಕಾರಿಗಳು ವಿಜಯ್ ಕುಮಾರ್ ನರೇಗಾ ಸಹಾಯಕ ನಿರ್ದೇಶಕರು ಮತ್ತು ಪಿಡಿಒಗಳಾದ ಲತಾಬಾಯಿ ಉಮಾಪತಿ ದೇವೇಶ್ ಒಳ ಗೊಂಡಂತೆ ಆರ್.ಡಿ.ಪಿ.ಆರ್ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಶುಭ ಕೋರಿದ್ದಾರೆ.ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು