ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರವಿಕುಮಾರ ಪಟ್ಟದಕಲ್ಲ ಆಯ್ಕೆ.
ಅಮೀನಗಡ ಅ.31

ಪ್ರತಿ ವರ್ಷ ಸರಕಾರ ದಿಂದ ಕೊಡ ಮಾಡುವ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ತಾಲೂಕಾ ಮಟ್ಟದ ಪ್ರಶಸ್ತಿಗೆ ಅಮೀನಗಡ ನಗರದ ನ್ಯಾಯವಾದಿ ಶ್ರೀ ರವಿಕುಮಾರ ಪಟ್ಟದಕಲ್ಲ ಅವರನ್ನು ಆಯ್ಕೆ ಮಾಡಲಾಗಿದೆ. 1999 ರಿಂದ ನಗರದಲ್ಲಿ ಸಾಮಾಜಿ ಸೇವೆ ಹಾಗೂ ವಿವಿಧ ಸಂಘಟನೆ ಮೂಲಕ ನಗರ ಹಿತ ರಕ್ಷಣ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮೂಲಕ ಹಲವಾರು ಸಾಮಾಜಿಕ ಮೂಲಭೂತ ಹಕ್ಕು ಹಾಗೂ ವಿವಿಧ ನಗರದ ಸಮಸ್ಯಗಳ ವಿರುದ್ದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅನ್ಯಾಯದ ವಿರುದ್ದ ಹೋರಾಡಿ ನೊಂದ ಅನೇಕರಿಗೆ ಉಚಿತ ನ್ಯಾಯ ಕೊಡಿಸುವ ಮೂಲಕ ಸಾಮಾಜಿಕ ರಂಗದಲ್ಲಿ ತಮ್ಮನು ತಾವು ಗುರುತಿಸಿ ಕೊಂಡ ಸಮಾಜ ಸೇವಕರು. ಇಂದು ಹುನಗುಂದ ನ್ಯಾಯಾಲಯದಲ್ಲಿ ಇಂದಿಗೂ ತಮ್ಮ ಸೇವೆಯನ್ನು ಮಾಡುತ್ತಾ ನಗರದಲ್ಲಿ ಶಿಕ್ಷಣ ಸಂಸ್ಥೆ ಈಗ ಸ್ಥಾಪನೆ ಮಾಡಿದ್ದು ಬಡ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಕಡೆಗೆ ಗಮನ ಹರಿಸಿದ್ದಾರೆ. ಇಂತಹ ಸರಳ ಸಜ್ಜನಿಕೆಯ ವ್ಯಕ್ತಿ ರವಿಕುಮಾರ ಪಟ್ಟದಕಲ್ಲ ಎಂದರೆ ತಪ್ಪಾಗಲಾರದು. ಇವರ ಈ ಸಾಮಾಜಿ ಕಳಕಳಿಗೆ ಮೆಚ್ಚಿ ಹುನಗುಂದ ಮತ ಕ್ಷೇತ್ರದ ಜನಪ್ರಿಯ ಶಾಸಕ ಡಾ, ವಿಜಯಾನಂದ ಎಸ್ ಕಾಶಪ್ಪನವರ ಹಾಗೂ ಹುನಗುಂದ ತಹಶಿಲ್ದಾರ ನಿಂಗಪ್ಪ ಬಿರಾದರ ಹಾಗೂ ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಿಗೆ ಹೃದಯ ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು. ನಾಳೆ ಅಧಿಕೃತವಾಗಿ ಹುನಗುಂದ ತಾಲೂಕಿನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ, ಎಂದು ತಿಳಿದು ಬಂದಿರುತ್ತದೆ.