ಪಿ.ಎಂ.ಶ್ರೀ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ.
ಮಾನ್ವಿ ನ.01

ಸಮೀಪದ ಸ.ಹಿ.ಮಾ ಶಾಲೆ (ಪಿ.ಎಮ್.ಶ್ರೀ) ನೀರಮಾನ್ವಿ ಶಾಲೆಯಲ್ಲಿ ವಿಶೇಷವಾಗಿ 70 ಸಸಿ ನಾಟಿ ಮಾಡುವ ಮೂಲಕ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮುಖ್ಯ ಗುರುಗಳಾದ ಸತೀಶ್ ಮಾತನಾಡಿ ನಮ್ಮ ಚೆಲುವ ಕನ್ನಡ ನಾಡು ಗಂಧದ ಬೀಡು ಕವಿಗಳ ತವರೂರು ನಿತ್ಯ ಹರಿದ್ವರ್ಣ ವಾತಾವರಣ ಹೊಂದಿದೆ ಹಾಗೆ ಅಖಂಡ ಕರ್ನಾಟಕ ಹೊಂದಾಣಿಕೆ ಮಾಡಲು ಆಲೂರು ವೆಂಕಟರಾಯರು ಬಹಳ ಶ್ರಮ ಪಟ್ಟಿದ್ದಾರೆ ಅನ್ಯ ಭಾಷೆಗಳನ್ನು ಪ್ರೀತಿಸಿ ಕನ್ನಡವನ್ನು ಉಸಿರಾಗಿಸಿ ಕೊಳ್ಳಿ ಹಾಗೆ ಎಲ್ಲಾ ಭಾಷೆಗಳ ಮೇಲೆ ಪ್ರೀತಿಯ ಇರಬೇಕು ಕನ್ನಡ ಭಾಷೆಯ ಮೇಲೆ ಅಕ್ಕರೆ ಇರಲಿ ಶಿಕ್ಷಕಿ ಸಾವಿತ್ರಮ್ಮ ಮಾತನಾಡಿ ದಿನ ಬಳಕೆಯ ಪದಗಳಾದ ಅಮ್ಮ ಅಪ್ಪ ತಾತ ಮಾಮ ಎನ್ನುವ ಪದಗಳು ರೂಢಿಯಲ್ಲಿರ ಬೇಕು ಯಾವುದೆ ಕಾರಣಕ್ಕೆ ನಾವು ರೂಡಿಯಲ್ಲಿ ಆಂಗ್ಲ ಭಾಷೆಯನ್ನು ಬಳಸ ಬಾರದು ಎಲ್ಲಾದರೂ ಇರು ಎಂತಾದರು ಇರು ನೀ ಎಂದಿಗೂ ಕನ್ನಡವಾಗಿರು ಇಂದಿನ ವಿಶೇಷ ತಾಲೂಕ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶ್ರೀಮತಿ ಲಕ್ಷ್ಮಿ ರವರಿಗೆ ಶಾಲೆಯ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳು ಸನ್ಮಾನ ಮಾಡಿದರು. ಕರ್ನಾಟಕ ರಾಜ್ಯ ಬೇಡರ ಸಮಿತಿ (ರಿ) ಬೆಂಗಳೂರು ನೀರಮಾನ್ವಿ ಘಟಕದ ಪದಾಧಿಕಾರಿಗಳು ಹಾಗೂ ಶ್ರೀ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘ ನೀರಮಾನ್ವಿ ಪದಾಧಿಕಾರಿಗಳು ಸನ್ಮಾನ ಮಾಡಿ ಗೌರವಿಸಿದರು. ನಂತರ ಶಾಲಾ ಮಕ್ಕಳಿಂದ ಕನ್ನಡ ಗೀತೆಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಪಾಲಕರನ್ನು ಕನ್ನಡ ಅಭಿಮಾನಿಗಳನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅತಿಥಿ ಶಿಕ್ಷಕರು ಹಾಗೂ ಗ್ರಾಮದ ಹಳೆಯ ಹಿರಿಯ ವಿದ್ಯಾರ್ಥಿಗಳು ಯುವ ಮುಖಂಡರು ಹಾಜರಿದ್ದು ಕಾರ್ಯಕ್ರಮ ನಿರೂಪಣೆ ಶ್ರೀಮತಿ ಲಕ್ಷ್ಮಿ ನೆರವೇರಿಸಿದರೆ ವಂದನಾರ್ಪಣೆ ರತ್ನಮ್ಮ ನೆರವೇರಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ