ಆಂಗ್ಲ ಭಾಷೆ ವ್ಯಾಮೋಹ ಬಿಟ್ಟು ಕನ್ನಡ ಉಸಿರಾಗಿಸಿ – ಡಾ, ಕೆ.ಜೆ ಕಾಂತರಾಜ್.
ತರೀಕೆರೆ ನ.02

ಅಖಿಲ ಭಾರತ 87 ನೇ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ರಥಯಾತ್ರೆ ಮಾಡುತಿದೆ ಎಂದು ಉಪ ವಿಭಾಗ ಅಧಿಕಾರಿ ಡಾ, ಕೆ.ಜೆ ಕಾಂತರಾಜ್ ಹೇಳಿದರು. ಅವರು ಇಂದು ಅಜ್ಜಂಪುರ ದಿಂದ ತರೀಕೆರೆಗೆ ಆಗಮಿಸಿದ ಕನ್ನಡ ರಥಕ್ಕೆ ಸ್ವಾಗತ ಕೋರಿ ಮಾತನಾಡಿದರು. ಸಾಧು ಸಂತರು ಕನ್ನಡ ನಾಡು ನುಡಿಗಾಗಿ ಹೋರಾಟಗಳನ್ನು ಮಾಡಿದ್ದಾರೆ. ಆಂಗ್ಲ ಭಾಷೆ ವ್ಯಾಮೋಹ ಬಿಟ್ಟು ಕನ್ನಡ ಬಳಸಿ, ಉಳಿಸಿ, ಉಸಿರಾಗಿಸಿರಿ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಮಾತನಾಡಿ ಕನ್ನಡ ನಾಡು ನುಡಿಯ ಉಳಿವಿಗಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸ ಬೇಕು, ಭವನಗಿರಿಯ ಭುವನೇಶ್ವರಿ ದೇವಾಲಯ ದಿಂದ ತಾಯಿ ಭುವನೇಶ್ವರಿಯ ಕನ್ನಡ ರಥ ಯಾತ್ರೆ ಪ್ರಾರಂಭವಾಗಿದೆ ಚಿಕ್ಕಮಗಳೂರು ಜಿಲ್ಲೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಗೆ ಸಾಗಲಿದೆ, ಜಾತಿ ಪಂಥ ಎಲ್ಲವನ್ನು ಪಕ್ಕಕ್ಕೆ ಇಟ್ಟು ನಮ್ಮ ಜ್ಯೋತಿ, ನಮ್ಮ ರಥ, ನಮ್ಮ ಭುವನೇಶ್ವರಿ ಎಂದು ಸಾಮರಸ್ಯ ದಿಂದ ಕನ್ನಡ ಅಸ್ಮಿತೆ ಸಾರೋಣ ಎಂದು ಹೇಳಿದರು. ಮಾಜಿ ಪುರಸಭಾ ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ ಕನ್ನಡ ಭಾಷೆ ಉಳಿಸಲು ಕನ್ನಡವು ನಮ್ಮ ಬದುಕಿನ ಭಾಷೆಯಾಗ ಬೇಕು. ರಥ ಯಾತ್ರೆ ಮೂಲಕ ಜನಜಾಗೃತಿ ಮೂಡಿಸುತ್ತಿದೆ ಕನ್ನಡ ತಾಯಿಗೆ, ನುಡಿ ನಮನ ಸಲ್ಲಿಸೋಣ ಎಂದು ಹೇಳಿದರು. ಬಿ.ಎಸ್ ಭಗವಾನ್ ನಾಡಗೀತೆ ಹಾಡಿದರು, ರವಿ ದಳವಾಯಿ ಸ್ವಾಗತಿಸಿ ಇಮ್ರಾನ್ ಖಾನ್ ನಿರೂಪಿಸಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು