ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ತ್ರಿಮೂರ್ತಿಗಳಿಗೆ ಕನ್ನಡ ರಾಜ್ಯೋತ್ಸವ – ಪ್ರಶಸ್ತಿ ಪ್ರಧಾನ.
ಚಿತ್ರದುರ್ಗ ನ.02

ಚಿತ್ರದುರ್ಗ ಜಿಲ್ಲೆಯ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯು ಸುಮಾರು ಮೂವತ್ತು ವರ್ಷಗಳಿಂದ ಎಲ್ಲ ತಾಲ್ಲೂಕುಗಳು ಹಾಗೂ ಜಿಲ್ಲೆಯಲ್ಲಿ ಈ ವೇದಿಕೆಯ ಸಂಸ್ಥಾಪಕರಾದ ಶ್ರೀಮತಿ ದಯಾ ಪೊತ್ತೋರ್ಕರ್ ರವರ ಮಾರ್ಗ ದರ್ಶನದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಒಂದಲ್ಲ ಒಂದು ಸಾಹಿತ್ಯಕ, ಸಾಂಸ್ಕೃತಿಕ , ಕವಿಗೋಷ್ಠಿ, ಪ್ರಾವಸ ಗೋಷ್ಠಿ, ವಿಚಾರ ಗೋಷ್ಠಿಗಳನ್ನು ನಡೆಸುತ್ತಾ ಹಾಗೂ ಎಲೆ ಮರೆ ಕಾಯಿಗಳ ರೀತಿಯಲ್ಲಿ ಇರುವ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ, ಅನೇಕ ಉದಯೋನ್ಮುಖ ಬರಹಗಾರರಿಗೆ, ಪುಸ್ತಕ ಬರೆಯುವ ಕವಿಗಳಿಗೆ ಸಾಹಿತಿಗಳಿಗೆ ಪ್ರೋತ್ಸಾಹ ಹಾಗೂ ಅನೇಕ ಸಾಧಕರಿಗೆ ಸನ್ಮಾನ ಮಾಡಲಾಗಿದೆ, ಅಲ್ಲದೆ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ೧೪, ೧೫ ನೇ ತಾರೀಖು ರಾಜ್ಯ ಮಟ್ಟದ ಒಂದು ಉತ್ತಮ ಸಾಹಿತ್ಯಕ ಕಾರ್ಯಗಾರ ಹಾಗೂ ಕಥಾ ಕಮ್ಮಟ ಹಮ್ಮಿಕೊಂಡಿರುವುದು ಸ್ವಾಗತಾರ್ಹ, ಈ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತನ್ನದೇ ಆದ ಛಾಪು ಮೂಡಿಸಿದೆ.

ಹಿರಿಯೂರು ತಾಲೂಕು ಆಡಳಿತ ವ್ಯವಸ್ಥೆಯಿಂದ ನಗರದ ನೆಹರು ಮೈದಾನದಲ್ಲಿ ನಡೆದ 69 ನೇ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಲವು ಸಾಧಕರಿಗೆ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಹೊತ್ತಲ್ಲೆ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಅಧ್ಯಕ್ಷರು ಆದ ಸಾಹಿತಿ ಎಸ್.ಎಚ್ ಶಫಿಉಲ್ಲ ಇವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಫಿಉಲ್ಲ ರವರು ಈಗಾಗಲೇ ಸಂಧ್ಯಾರಗಳೆ ಮತ್ತು ಇತರ ಕತೆಗಳು, ಕಣ್ಮರೆ ಎಂಬ ಕೃತಿಗಳನ್ನು ಹೊರ ತಂದಿದ್ದು. ಹಲವು ಲೇಖನ, ಕವನ ಇನ್ನಿತರ ಬರಹಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟಣೆ ಗೊಂಡಿವೆ.
ಕುಟೀಶ ಕಾವ್ಯನಾಮದಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ಶಫಿಉಲ್ಲರವರು ಪ್ರತಿ ಮುಂಜಾನೆ ಬೆಳಗುಭಾವ ಎಂಬ ಶೀರ್ಷಿಕೆ ಯಡಿಯಲ್ಲಿ ಚುಟುಕು ಕವನ ಬರೆಯುವ ಮೂಲಕ ಬೆಳಗು ಸಂದೇಶವನ್ನು ಸಹೃದಯರಿಗೆ ನೀಡುತ್ತಿದ್ದಾರೆ. ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಇವರು ಹಲವು ಸಾಹಿತ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ನಾಡು ನುಡಿಯ ಸೇವೆ ಮಾಡುತ್ತಿದ್ದಾರೆ, ರಾಜ್ಯಾದ್ಯಂತ ಹಲವು ಗೋಷ್ಠಿಗಳಲ್ಲಿಯೂ ಭಾಗವಹಿಸಿ ಹೆಸರಾಗಿದ್ದಾರೆ.

ಮತ್ತೋರ್ವ ಸಾಧಕರಾದ ಶ್ರೀಯುತ ಡಾ, ನವೀನ್ ಸಜ್ಜನ್ ರವರು ನಿತ್ಯ ಕಾಯಕದಲ್ಲಿ ವೈದ್ಯ ವೃತ್ತಿಯನ್ನು ಮಾಡುತ್ತಾ ಅನೇಕ ರೀತಿಯ ಸಾಹಿತ್ಯ ಸಂಗೀತ ಕಲೆ ಮತ್ತು ಸಂಸ್ಕೃತಿಗೆ ರೋಟರಿ ಕ್ಲಬ್ ಹಾಗೂ ರೆಡ್ ಕ್ರಾಸ್ ಸೊಸೈಟಿಯಲ್ಲಿ ಸೇವೆ, ಅನೇಕ ಲೇಖನಗಳು, ಉಚಿತ ಮೆಡಿಕಲ್ ಕ್ಯಾಂಪ್ ಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇವರಿಗೆ ಚಿತ್ರದುರ್ಗ ಜಿಲ್ಲಾಡಳಿತ ದಿಂದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಮತ್ತೋರ್ವ ಸಾಧಕರಾದ “ರಂಗೋಲಿ ರಾಣಿ ” “ಕಲಾ ರಾಣಿ ” “ಅಭಿನಂದನೆ ಪತ್ರ” ಗಳ ಉಷಾರಾಣಿ ಎಂದೇ ಗುರುತಿಸಿ ಕೊಂಡಿರುವ ಇವರು ಕೋರೋನ ಕಾಲದಲ್ಲಿ ವಿವಿಧ ರೀತಿಯ ರಂಗೋಲಿಯನ್ನು ಮುಖ ಪುಟ (ಪೇಸ್ಟ್ ಬುಕ್ಕು) ಕ್ಕೆ ಹಾಕಿದಾಗ ದೊರತ ಪ್ರಶಂಸೆಗಳು, ಪ್ರೋತ್ಸಾಹಗಳು ಅಪಾರ. ಎಲೆಗಳಿಂದ, ಹೂವಿನಿಂದ, ಧಾನ್ಯಗಳಿಂದ, ಕುಂದನ್ ಹೀಗೇ ನಾನಾ ರೀತಿಯ ರಂಗೋಲಿಗಳನ್ನು ಏಕಲವ್ಯನಂತೆ ತಾನೇ ಅಭ್ಯಾಸ ಮಾಡಿದೆ. ಜಾಲತಾಣದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿರುತ್ತೇನೆ. ಅನೇಕ ಸಂಘ ಸಂಸ್ಥೆಗಳಿಂದ ಮೈಸೂರಿನ ಅರಮನೆಯಲ್ಲಿ ಕಲಾ ಪ್ರಂಪಚ (ರಿ) ಚಿತ್ರದುರ್ಗದ ಮಾಹಾ ಗಣಪತಿ, ಕೆ.ಎಮ್ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ (ರಿ) ಹೀಗೆ ನಾನಾ ತರಹದ ಬಹುಮಾನ ಬಂದಿದೆ.

ಇದಲ್ಲದೆ ನಾನು ರಾಜ್ಯ ಮಟ್ಟದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಬಂದಿದೆ. ರಂಗೋಲಿ ಜೊತೆಗೆ ಕರಕುಶಲಗಾರಿಕೆ, ಗಾಯನ, ಚಿತ್ರ ಕಲೆ, ಕಸೂತಿ, ಹಣಿಗೆ, ಕೈತೋಟ, ಪೋಟೋಗ್ರಾಪಿ, ಕಥೆ ಕವನ ಲೇಖನ ಬರೆಯುವುದು, ಪುಸ್ತಕ ಓದುವುದು ನನ್ನ ಹವ್ಯಾಸ. ಚಿತ್ರದುರ್ಗದ ಆಕಾಶವಾಣಿಯಲ್ಲಿ ಸಂದರ್ಶನ, ಚಿತ್ರದುರ್ಗದ “ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ “ಯಿಂದ “ಚಿನ್ಮೂಲಾದ್ರಿ ಸಿರಿ”ಎಂಬ, ಮೈಸೂರಿನ ರಾಜ್ಯ ಮಟ್ಟದ “ರಾಜ್ಯ ಮಟ್ಟದ ವಿಶ್ವಮಾನ್ಯ ಕನ್ನಡಿಗ” ನನ್ನ ಮುಡಿಯೇರಿದೆ. ಸಾಹಿತ್ಯ ಲೋಕದಲ್ಲಿ “ಇಂಚರ ಚುಟುಕು ರತ್ನ” ,ಇಂಚರ ಸಾಹಿತ್ಯ ರತ್ನ, “ಇಂಚರ ಸಾಹಿತ್ಯ ಕಣಜ” ,ಇಂಚರ ಸಾಹಿತ್ಯ ಸುಧೆ, ಇಂಚರ ಸಾಹಿತ್ಯ ಪ್ರಭೆ, ಇಂಚರ ವಚನ ರತ್ನ, ಇಂಚರ ಕಾವ್ಯ ಪ್ರಭೆ, ಇಂಚರ ವಚನ ದೊರೆ, ಆಸ್ತಿಕ ಶ್ರೀ ರತ್ನ, ಗಾನ ಶ್ರೀ,ಕಲಾಜಯಂತಿ, ಕಲಾಪಲ್ಲವ, ಕಾವ್ಯ ಶ್ರೀ,ಕಥಾ ಚೇತನ, ದೇವಗಾನ, ಬೆಂಗಳೂರಿನ ಶಾರದಾ ಕಲಾ ವೇದಿಕೆ “ಕಲಾಸಿರಿ” ಇನ್ನೂ ಆನೇಕ ಪ್ರಶಸ್ತಿ ಮೂಡಿಗೆರಿದೆ. ನನ್ನ ರಂಗೋಲಿ ಪ್ರಸಿದ್ಧ ಪತ್ರಿಕೆಯಲ್ಲಿ “ಮುಳ್ಳಿನ ಗುಲಾಬಿ ” “ಹೊಸ ದಿಗಂತ”,ಕನ್ನಡ ಪ್ರಭ, ಸಂಜೆ ಸಮಯ, “ಕರ್ಮವೀರ ಶ್ರೀ ಗಂಧ ಪತ್ರಿಕೆಯಲ್ಲಿ ಕಥೆ ಪ್ರಕಟವಾಗಿದೆ. ನನ್ನ ಈ ಕಲೆಗಳಿಗೆ ಪತಿ ಶ್ರೀನಿವಾಸ್, ಮಗ ಅನಿಲ್ ಕುಮಾರ್, ನನ್ನ ಸೊಸೆ ಮೇಘನಾ ಮತ್ತು ನನ್ನ ಬಾಲ್ಯ ಗೆಳತಿಯರೇ ಸಹಕಾರ ಮತ್ತು ಪ್ರೋತ್ಸಾಹವೇ ನನ್ನ ಸಾಧನೆಗೆ ಕಾರಣ ಎಂದು ತಿಳಿಸಿದ್ದಾರೆ.ಮತ್ತಷ್ಟು ವಿವಿಧ ರೀತಿಯ ಪ್ರಶಸ್ತಿಗಳು ನಮ್ಮ ಚಿನ್ಮುಲಾದ್ರಿ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳಿಗೆ ದೊರೆಯಲಿ ಹಾಗೆಈ ವೇದಿಕೆಯ ಕೀರ್ತಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಖ್ಯಾತಿಗಳಿಸಲಿ ಎಂಬುದೇ ನಮ್ಮ ಆಶಯ.
ವರದಿ : ಶಿವಮೂರ್ತಿ.ಟಿ.ಕೋಡಿಹಳ್ಳಿ
ವಿಶೇಷ ಪತ್ರಿಕಾ ಪ್ರತಿನಿಧಿ, ಚಿತ್ರದುರ್ಗ