ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ನಿಕೃಷ್ಟ ಮನಸ್ಥಿತಿಯ – ಮನುವಾದಿಗಳಿಗೆ ಧಿಕ್ಕಾರವಿರಲಿ.
ಚಬನೂರ ಫೆ.03

ವಿಜಯಪೂರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಚಬನೂರ ಗ್ರಾಮದ ಸರಕಾರಿ ಶಾಲೆಯ ಗೋಡೆಯ ಮೇಲೆ ಬರೆಯಲಾಗಿದ್ದ ಡಾ, ಬಿ.ಆರ್ ಅಂಬೇಡ್ಕರ್ ಮತ್ತು ಟಿಪ್ಪುಸುಲ್ತಾನ ಅವರ ಭಾವ ಚಿತ್ರಕ್ಕೆ ಕೆಸರು ಬಡಿದು ಅವಮಾನ ಮಾಡಿದ್ದಲ್ಲದೆ ಭಾವ ಚಿತ್ರದ ಕೆಳಗೆ ಜೈಶ್ರೀರಾಮ ಎಂದು ಬರೆದು ಕೋಮು ಸೌಹಾರ್ಧತೆಗೆ ಧಕ್ಕೆ ತಂದಿದ್ದು ಕಂಡು ಬಂದಿದೆ. ಈ ತರಹದ ನಿಕೃಷ್ಟ ಮನಸ್ಥಿತಿಯ ಮನುವಾದಿಗಳು ಪ್ರತಿ ಗ್ರಾಮದಲ್ಲಿ ಕಂಡು ಬರುತ್ತಾರೆ.
ಈ ಕೃತ್ಯ ಮಾಡಿದವರು ಯಾರೆ ಆಗಿದ್ದರು ಅಂತಹ ಕಿಡಿಗೇಡಿಗಳ ಮೇಲೆ ಬಸವನ ಬಾಗೇವಾಡಿ ಪೋಲಿಸರು ದೂರು ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಈ ಮೂಲಕ ಆಗ್ರಹಿಸುತ್ತೇವೆ.ಇಂತಹ ಘಟನೆಗಳು ಜಿಲ್ಲೆಯಲ್ಲಿ ಪದೆ ಪದೆ ಮರುಕಳಿಸುತ್ತಿದ್ದು ಯಾವುದೇ ಮುಲಾಜಿಗೆ ಒಳಗಾಗದೇ ಯಾವ ಒತ್ತಡಕ್ಕೆ ಮಣಿಯದೇ ಪೋಲಿಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೖಬೂಬಬಾಷ.ಮನಗೂಳಿ.ತಾಳಿಕೋಟೆ