ಕ್ರಿಮಿನಲ್ ಮೊಕದ್ದಮೆ ಹಿನ್ನೆಲೆ ಹೊಂದಿದಂತ ಗುನ್ನೇಶ್ವರರಾವ್ ರವರ – ಟೆಂಡರ್ ರದ್ದು ಪಡಿಸಲಿಕ್ಕೆ ಒತ್ತಾಯ.
ಬಳ್ಳಾರಿ ಫೆ.03

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿಯ ಗುತ್ತೇದಾರರಾದ ಗುಕ್ರಂ ಗುನ್ನೇಶ್ವರರಾವ್ ಇವರು ಕ್ರಿಮಿನಲ್ ಹಿನ್ನೆಲೆಯ ಹೊಂದಿರುವುದರಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವ್ಯಾಪ್ತಿಗೆ ಒಳ ಪಡುವ ಯಾವುದೇ ಆಹಾರ ಧಾನ್ಯದ ಸರಬರಾಜು ಟೆಂಡರ್ ಗಳನ್ನು ಇವರಿಗೆ ಗುತ್ತಿಗೆ ನೀಡಬಾರದು ಎಂದು ವಿನಮ್ರವಾಗಿ ಕೇಳಿ ಕೊಳ್ಳುತ್ತೇವೆ. ಈಗಾಗಲೇ ಬಳ್ಳಾರಿ ಜಿಲ್ಲೆ ಸಿರಗುಪ್ಪ ಪಟ್ಟಣದಲ್ಲಿ ಇವರ ವಿರುದ್ಧ ಸಿರಗುಪ್ಪ ಪಟ್ಟಣದ ಪೊಲೀಸ ಠಾಣೆಯಲ್ಲಿ 10-11-2022 ರಂದು (ಅಪರಾಧ ಸಂಖ್ಯೆ: 0283/2022) ESSENTIAL COMMODITIES ACT 1955 (U/s 7, 3, 6(A)): KARNATAKA ESSENTIAL COMMODITIES (STORAGE ACCOUNTS MAINTAINING VALUE NOTIFICATION) ORDER 1981 (U/s-4,8,3(2)(1), 6; KARNATAKA ESSENTIAL COMMODITIES (PUBLIC DISTRIBUTION SYSTEM) PUBLIC CONTROL ORDER 2016(U/s 3,4,12,18,19) ໑໖໘ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಗುನ್ನೀಶ್ವರರಾವ್ ಇವರು ಎರಡನೇ ಆರೋಪಿಯಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಸರಕಾರ ದಿಂದ ಬಡ ಜನರಿಗೆ ವಿತರಿಸುವ ಅನ್ನಭಾಗ್ಯ ಅಕ್ಕಿಯನ್ನು ಸಿರಗುಪ್ಪ ಪಟ್ಟಣದ ಎಪಿಎಂಸಿ ಅವರಣದಲ್ಲಿರುವ ಸಗಟು ಗೋದಾಮು ಸಗಟು ಮಳಿಗೆಯಲ್ಲಿ ಲಾರಿ ಮಾಲೀಕ ಗುನ್ನೇಶ್ವರರಾವ್ ಇವರು ಅಕ್ಕಿಯನ್ನು ಲಾರಿಯಲ್ಲಿ ಲೋಡ್ ಮಾಡಿಸಿ. ಟಿ.ರಾಂಪುರ ಹಳ್ಳಿಗೆ ಹೋಗುವಂತೆ ಚಾಲಕನಿಗೆ ಹೇಳಿರುತ್ತಾರೆ. ನಂತರ ದೂರವಾಣಿ ಕರೆ ಮಾಡಿ 26 ಚೀಲ ಅಕ್ಕಿಯನ್ನು ನಂಬರ್ ಪ್ಲೇಟ್ ಇಲ್ಲದ ಬೊಲೆರೋ ವಾಹನದಲ್ಲಿ ಹಾಕಿ ಕಳಿಸುವಂತೆ ಹೇಳಿದ್ದು, ಈ ವೇಳೆ ಆಹಾರ ಇಲಾಖೆ ನಿರೀಕ್ಷಕ ಮಹಾರುದ್ರಗೌಡ ಇವರು ದಾಳಿ ನಡೆಸಿ, ಪ್ರಕರಣ ದಾಖಲಿಸಿರುತ್ತಾರೆ.

ಈ ಕುರಿತು ವಿಚಾರಣೆ ನಡೆದಿರುತ್ತದೆ.ಮಾನ್ವಿ ಪಟ್ಟಣದಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗುದ್ರಂ ಗುನ್ನೇಶ್ವರರಾವ್ ಇವರ ವಿರುದ್ದ ಉಮಾದೇವಿ ಇವರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣಿ ನಡೆದಿರುತ್ತದೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಗುತ್ತೇದಾರ ಗುದ್ರಂ ಗುನ್ನೀಶ್ವರರಾವ್ ಇವರು ಸರಕಾರದ ಆಹಾರ ಧಾನ್ಯವನ್ನು ನಿಯಮಾನುಸಾರ ಸರಬರಾಜು ಮಾಡುವುದಿಲ್ಲ ಎಂಬ ಅಪಾದನೆಗಳು ಇವೆ. ಇವರ ಮೇಲೆ ಸಿಂಧನೂರು ಪೊಲೀಸ್ ಠಾಣೆಗಳಲ್ಲೂ ಈ ಹಿಂದೆ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಟೆಂಡರ್ ನಿಯಮಾನುಸಾರ ಗುತ್ತೇದಾರ ಗುನ್ನೇಶ್ವರರಾವ್ ಅವರಿಗೆ ಟೆಂಡರ್ ಪ್ರಕ್ರಿಯೆಯಿಂದ ಕೈಬಿಡುವುದು ಮತ್ತು ಯಾವುದೇ ರೀತಿಯ ಟೆಂಡರ್ ಪಡೆಯಲು ಅವಕಾಶ ಅಧಿಕಾರಿಗಳು ನೀಡ ಬಾರದಾಗಿತ್ತು. ಸದರಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಟೆಂಡರ್ ನಿಯಮದಲ್ಲಿರುವಂತೆ, ಟೆಂಡರ್ ಷರತ್ತು 3) ಬಿಡ್ಡರ್ ಅಥವಾ ಕುಟುಂಬದ ಸದಸ್ಯರಿಂದ ಬಾಡಿಗೆಗೆ ಪಡೆದ ಮತ್ತು ಮಾಲೀಕತ್ವದ ಲಾರಿಗಳು ಕ್ರಿಮಿನಲ್ ಪ್ರಕರಣಗಳನ್ನು ಟೆಂಡರದಾರನ ಮೇಲೆ ಇರಬಾರದು ಆದರೆ ಈ ಟೆಂಡರ್ದಾರ ಗುದ್ದಂ ಗುಣೇಶ್ವರರಾವ್ ಇವರ ಮೇಲೆ ಕ್ರಿಮಿನಲ್ ಪ್ರಕರಣಗಳು ಇದ್ದರೂ ಅವರಿಗೆ ಟೆಂಡರ್‌ನಲ್ಲಿ ಭಾಗವಹಿಸಲು ಇಂತವರಿಗೆ ಯಾವುದೇ ಅವಕಾಶ ಇರುವುದಿಲ್ಲ ಅಧಿಕಾರಿಗಳು ಆದೇಶ ನಿಮಾವಳಿಗಳನ್ನು ಗೊತ್ತಿದ್ದರೂ ಸಹ ಅವಕಾಶ ನೀಡುವ ಜೊತೆಯಲ್ಲಿ ಸಿರಗುಪ್ಪ ತಾಲೂಕಿನ ಚಿಲ್ಲರೆ ಮಳಿಗೆಗಳಿಗೆ ಆಹಾರ ದಾಸ್ತಾಮ ಸಾಗಾಣಿಕೆಯ ಟೆಂಡರ್ ನೀಡಲಾಗಿದೆ. ಸರಕಾರದ ನಿಯಮಾವಳಿ ಪ್ರಕಾರ ಗುದ್ರಂ ಗುನ್ನೇಶ್ವರರಾವ್ ಇವರಿಗೆ ಟೆಂಡರ್ ನೀಡಲು ಅವಕಾಶವಿಲ್ಲದೆ ಇರುವಂತ ಇವರಿಗೆ, ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಲ್ಲದೆ ಟೆಂಡರನ್ನು ಅವರಿಗೆ ನೀಡಿರುವುದು ಬಹಳ ದುರಂತ ಸಿರುಗುಪ್ಪ ತಾಲೂಕಿನಲ್ಲಿ ಈಗಾಗಲೇ ಮೂರು ನಾಲ್ಕು ದಿನಕ್ಕೊಮ್ಮೆ ಅಕ್ರಮ ಧಾನ್ಯಗಳನ್ನು ಸಾಗಾಣಿಕೆ ಮಾಡುತ್ತಿರುವುದು ದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ ಅದರೂ ಸಹ ರಾಜಾ ರೋಷವಾಗಿ ನಡೆಯುತ್ತಿವೆ.

ಈಗಾಗಲೇ ಹಲವು ಪ್ರಕರಣಗಳು ಇವರ ಮೇಲೆ ಇದ್ದು, ಇದರ ಬಗ್ಗೆ ಕೂಲಂಕುಶವಾಗಿ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡದೆ ನಿರ್ಲಕ್ಷ್ಯ ಮಾಡಿ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಗುತ್ತಿಗೆದಾರ ಗುದ್ರಂ ಗುನ್ನೇಶ್ವರರಾವ್ ಇವರಿಗೆ ಟೆಂಡರ್ ನೀಡಿದಂತ ಉಪ ನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳ ಮೇಲು ಶಿಸ್ತು ಕ್ರಮ ಜರುಗಿಸಬೇಕು ಮತ್ತು ಸಿರುಗುಪ್ಪ ತಾಲೂಕಿನ ಚಿಲ್ಲರೆ ಮಳಿಗೆಗಳಿಗೆ ಆಹಾರ ದಾಸ್ತಾನಿಗೆ ನೀಡಿರುವ ಟೆಂಡರನ್ನು ಕೂಡಲೇ ರದ್ದು ಪಡಿಸಬೇಕು ಎಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ತಮ್ಮಲ್ಲಿ ಮನವಿ ಮಾಡಿ ಕೊಳ್ಳಲಾಗುತ್ತದೆ. ಒಂದು ವೇಳೆ ಈ ಟೆಂಡರನ್ನು ರದ್ದು ಪಡಿಸಲಾರದೆ ಹೋದ ಪಕ್ಷದಲ್ಲಿ ಉನ್ನತ ಅಧಿಕಾರಿಗಳಿಗೆ ದೂರು ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾರದೆ ಹೋದ ಪಕ್ಷದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿ ಕೊಳ್ಳಬೇಕಾಗುತ್ತದೆ ಎಂದು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮೂಲಕ ಎಚ್ಚರಿಕೆ ನೀಡುತ್ತೀರುವ ಕೆ.ಶಂಕರ್. ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ.