ಮಹಿಳೆಯರು ಎಲ್ಲಾ ರಂಗಗಳಲ್ಲೂ ದಿಟ್ಟತನ ದಿಂದ ಮುಂದಿದ್ದಾರೆ ವಿದ್ಯಾರ್ಥಿನಿಯರು ಅವರ ಆದರ್ಶಗಳನ್ನು ಇಟ್ಟು ಕೊಂಡು ಸಮಾಜದ ಮುನ್ನಡೆಗೆ ಕಾರಣೀಭೂತ ರಾಗಬೇಕು – ನಿರ್ಮಲಾ ಶಿವನಗುತ್ತಿ.
ಗುಡೇಕೋಟೆ ಫೆ.08

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣ ಗುಡೇಕೋಟೆ ರಸ್ತೆಯಲ್ಲಿ ಬರುವ ಹಿರೇಮಠ ಪದವಿ ಪೂರ್ವ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ನಿರ್ಮಲ ಶಿವನಗುತ್ತಿ ನೆರವೇರಿಸಿ, ಕಾರ್ಯಕ್ರಮ ಕುರಿತು ಮಾತನಾಡುತ್ತ ಈ ದಿನ ಮಾನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಮೊಬೈಲ್ ನ್ನು ಅತೀ ಹೆಚ್ಚಾಗಿ ಬಳಸುತ್ತಿದ್ದು ಅವ್ಯಕತೆ ಇದ್ದರೆ ಮಾತ್ರ ಬಳಸಿ ಓದುವಂತ ವಯಸ್ಸಿನಲ್ಲಿ ಚೆನ್ನಾಗಿ ಪುಸ್ತಕಗಳನ್ನು ಓದುವುದರೊಂದಿಗೆ ವಿದ್ಯಾಭ್ಯಾಸದ ಕಡೆ ಹೆಚ್ಚಾಗಿ ಗಮನ ಹರಿಸಿ ತಮ್ಮ ತಮ್ಮ ವಿದ್ಯಾರ್ಥಿಯ ಜೀವನದ ಭವಿಷ್ಯವನ್ನು ರೂಪಿಸಿ ಕೊಳ್ಳುವ ಜವಾಬ್ದಾರಿ ನಿಮ್ಮದಾಗಿದೆ ಹಾಗೆ ಅನೇಕ ಮಹಿಳೆಯರು ಎಲ್ಲಾ ರಂಗಗಳಲ್ಲೂ ದಿಟ್ಟತನ ದಿಂದ ಮುಂದಿದ್ದಾರೆ ವಿದ್ಯಾರ್ಥಿನಿಯರು ಅವರ ಆದರ್ಶವಾಗಿಟ್ಟು ಕೊಂಡು ಸಮಾಜದ ಮುನ್ನಡೆಗೆ ಕಾರಣೀಭೂತ ರಾಗಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ದಯಾನಂದ್ ಕಿನ್ನಾಳವರು ಮಾತನಾಡುತ್ತ ವಿದ್ಯಾರ್ಥಿಗಳು ಪಾಠಗಳಿಗಿಂತ ತಂತ್ರಜ್ಞಾನದಲ್ಲಿ ಮುಂದಿದ್ದಾರೆ ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಹಾಗೂ ಮೊಬೈಲ್ ನಂತಹ ಸಾಧನೆಗಳು ಅತ್ಯಗತ್ಯವಾದ ತಂತ್ರಜ್ಞಾನದ ರೂಪಗಳಾಗಿವೆ. ವಿದ್ಯಾರ್ಥಿಗಳು ಅವುಗಳಲ್ಲಿ ಪರಿಣಿತ ರಾಗಿದ್ದಾರೆ ಅದನ್ನು ಸಹ ಸದುಪಯೋಗ ಪಡಿಸಿ ಕೊಳ್ಳುವುದರ ಜೊತೆಗೆ ಪಾಠ ಪ್ರವಚನ ಕಡೆಗೂ ಆಸಕ್ತಿ ವಹಿಸಬೇಕು ಎಂದರು. ಹಾಗೆ ಈ ಕಾರ್ಯಕ್ರಮಕ್ಕೆ ಹಿರೇಮಠ ಕಾಲೇಜಿನಲ್ಲಿ ಅಭ್ಯಾಸ ಮಾಡಿ ಸ್ವತಂತ್ರವಾಗಿ ಹೊಸ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ ಹಳೆಯ ವಿದ್ಯಾರ್ಥಿನಿಯಾದ ಎಂ.ಕರಿಬಸಮ್ಮ ಅಂಬಿಕಾ.ಸತ್ಯ ಮೂರ್ತಿ ಇವರನ್ನು ಗೌರವ ಪೂರಕವಾಗಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಶ್ರೀ ಸಿದ್ದರಾಮ ಹಿರೇಮಠ್ ವಹಿಸಿದ್ದರು ಪ್ರಾಸ್ತಾವಿಕವಾಗಿ ಶ್ರೀ ಟಿ.ದೇವಪ್ಪ ಉಪನ್ಯಾಸಕರು ಮಾತನಾಡಿದರು ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಪ್ರಶಾಂತ ಸಾಗರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ