ಐತಿಹಾಸಿಕ ಮಹಾ ಪುರುಷ “ಶ್ರೀ ಮಹಾ ಮಲ್ಲಪ್ಪ ಮುತ್ಯಾ” ದೇಸಾಯಿ (ಅಂಗಡಿ ಪೂಜಾರಿ)…..

ವಿಶ್ವದಲ್ಲಿ ಮಾನವ ಜನಿಸಿದಾಗಿನಿಂದ ಇಲ್ಲಿಯವರೆಗೆ ತಮ್ಮ ಕಾಯಕದ ಜೋತೆ ಸಾಮಾಜಿಕ ಸೇವೆ ಸಂಸ್ಕಾರ ಸಂಸ್ಕೃತಿ ಕಲಿತು ಮುಂದಿನ ಜನಾಂಗದ ಏಳ್ಗೇಗೆಗಾಗಿ ಇದ್ದರೆ ಹಿಂಗ ಇರಬೇಕು ಎನ್ನವಂತೆ ಆದರ್ಶತನದಿಂದ ಬಾಳಿ ಬದುಕಿ ದೇವ ಮಾನವ ಎನಿಸಿಕೊಂಡವರಲ್ಲಿ ಅನೇಕರು ದಶಶತಮಾನಗಳಿಂದ ಜನರಿಂದ ಜನರಿಗೆ ರಾಮಾಯಣ ಮಹಾಭಾರತ ಮಹಾಗ್ರಂಥಗಳ ಕಥೆಯಂತೆ ಉಳಿದಿರುವವರಲ್ಲಿ ವಿಶ್ವದ ಏಶಿಯಾ ಖಂಡದ ಭಾರತಾಂಬೆಯ ಮಡಿಲಲ್ಲಿ ಕರ್ನಾಟಕ ಭುವನೇಶ್ವರಿಯ ಜಗತ ವಿಖ್ಯಾತ್ ಗುಮ್ಮಟ ನಗರಿ ವಿಜಯಪೂರ ಜಿಲ್ಲೆಯ (ಸಿಂದಗಿ ತಾಲೂಕ) ಪ್ರಸ್ತುತ ತಾಲೂಕಾ ಕೇಂದ್ರ ಪ್ರಮುಖ ವ್ಯಾಪಾರ ಕೇಂದ್ರ ದೇವನಾನುದೇವ ಜಗದ ರಕ್ಷಕ ಭಂಡಾರದ ಒಡೆಯ ಶ್ರೀರಾವುತರಾಯ ಮಲ್ಲಯ್ಯ ಸುಕ್ಷೇತ್ರ ದೇವರ ಹಿಪ್ಪರಗಿಯ ಹಾಗೂ ಜಗಜ್ಯೋತಿ ಬಸವಣ್ಣನ ಅನೇಕ ಶರಣರ ವಚನ ರಕ್ಷಕ ಶರಣಜ್ಯೋತಿ ಮಡಿವಾಳ ಮಾಚಿದೇವ ಜನ್ಮಭೂಮಿಯು ಮೂಲತಃ ಪೂಣ್ಯ ಪುರುಷರ ನಾಡು ಸುಮಾರು ದಶ ಶತಕ ವರ್ಷಗಳ ಹಿಂದಿನ ನಿಜ ಐತಿಹಾಸಿಕ ಕಥೆ ಹೇಳುವೇನು ಕೇಳಿ ನಾವೇಲ್ಲಾ ಪಾವನರೋಗೋಣ, ಭಕ್ತ ಸಮಾಜ ಸುಧಾರಕ ಒಳ್ಳೆಯ ಕಾರ್ಯ ಗ್ರಾಮ ದೇವ ಶ್ರೀರಾವುತರಾಯ ಮಲ್ಲಯ್ಯ ದೇವರ ಪೂಜೆಯ ಕಾಯಕ ಯೋಗಿಯ ತರಹ ನಿರ್ವಹಿಸಿ ಸಮಾಜಮುಖಿ ಕೆಲಸಗಳಿಂದ ಅಂದಿನಿಂದ ಪ್ರಸ್ತುತ ಜನಮಾನಸದಲ್ಲಿ ಅಜರಾಮರ ಆಗಿರುವ ಶ್ರೀಮಲ್ಲಯ್ಯ ದೇವ ಮಂದಿರದಲ್ಲಿ ಶಾಶ್ವತವಾಗಿ ಕರ್ತೃಗದ್ದಿಗೆ ರೂಪದಲ್ಲಿ ನೆಲೆನಿಂತ ಮಹಾಪುರುಷ ಶ್ರೀ ಮಹಾಮಲ್ಲಪ್ಪ ಮುತ್ಯಾ ದೇಸಾಯಿ (ಪೂಜಾರಿ ಅಂಗಡಿ) ಪುಣ್ಯ ಕಥೆ ವಂಶಸ್ಥರು ಗ್ರಾಮದ ಹಿರಿಯರಿಂದ ಕೇಳಿದ ಮಾಹಿತಿ ಕ್ರೂಡೀಕರಿಸಿ ತಮ್ಮ ಮುಂದೆ ಅಕ್ಷರ ರೂಪದಲ್ಲಿ ಹೇಳುವೇನು ಕೇಳಿ ನಾವೇಲ್ಲಾ ಪಾವನರಾಗಿ ಓಂ ಶ್ರೀ ರಾವುತರಾಯ ಮಲ್ಲಯ್ಯನ ಕೃಪೆಗೆ ಪಾತ್ರರಾಗೋಣ “ಏಳಕೋಟಿ ಏಳುಕೋಟಿ, ಏಳುಕೋಟಿ ಯುಗೇ ಯುಗೇ”ಸುಕ್ಷೇತ್ರ ದೇವರ ಹಿಪ್ಪರಗಿಯ ಮಹಾಮಹಿಮನ ಅವತಾರ ಚರಿತ್ರಾಮೃತ ಸೃಷ್ಠಿಯಲ್ಲಿ ದೇವಸ್ವರೂಪಿ ಮಹಾಮಲ್ಲಪ್ಪ(ದೇಸಾಯಿ) ಅಂಗಡಿ ಪೂಜಾರಿ ದೇವನ ಸೇವೆಗೆಂದೆ ಧರೆಗಿಳಿದು ಬಂದ ಭಕ್ತ ಸೇವಾ ಯೋಗಿಯು ಸ್ವರ್ಗ ಸಮಾನ ಕ್ಷೇತ್ರಕ್ಕೆ ಕ್ರಿಸ್ತಶಕ 1023ರಲ್ಲಿ ನಿಜಾಮರ ದಂಗೆಯಲ್ಲಿ ರಾಯಚೂರ ಜಿಲ್ಲೆಯ ಗೊಬ್ಬೂರ ತೋರೆದು ಅಶ್ವರೂಢನಾಗಿ ದೇವನಾನು ದೇವ ಮಾರ್ತಂಡ ಭೈರವ ಭಂಡಾರದ ಒಡೆಯ ಶ್ರೀರಾವತರಾಯನ ಸನ್ನಿಧಿಗೆ ಬಂದು ದೇವಸ್ಥಾನದಲ್ಲಿ ಆಶ್ರಯ ಪಡೆದು ಜಗದ ರಕ್ಷಕ ಶ್ರೀರಾವುತರಾಯನ ನಿತ್ಯ ನಿಷ್ಠೆ ಶ್ರದ್ಧಾಭಕ್ತಿಯಿಂದ ದೇವನ ಪೂಜಾ ಸೇವಾ ಕಾಯಕ ಪ್ರರಂಭಿಸಿದ.ಮಹಾಮಲ್ಲಪ್ಪ ಮುತ್ಯಾನ ನಿಷ್ಕಲ್ಮಶ ಪೂಜೆ ಸೇವಾ ಭಕ್ತಿಗೆ ಮಲ್ಲಯ್ಯನ ಅವತಾರಿ ಅಶ್ವರೂಢನಾಗಿ ಕನಸಿನಲ್ಲಿ ಪ್ರತ್ಯಕ್ಷನಾಗಿ ಇನ್ನೂ ಮುಂದೆ ನೀನೆ ನನ್ನ ಪೂಜೆ ಮಾಡಿ ಜನಸೇವೆ ಮಾಡು ಎಂದು ತಥಾಸ್ತು ಎಂದು ವರಪ್ರಸಾದ ದಯಪಾಲಿಸಿದ ಪ್ರಯುಕ್ತ ಗ್ರಾಮದ ಸರಪಂಚರು ಗ್ರಾಮದ ಪ್ರಮುಖರು ನಿರ್ಣಯಿಸಿ ದೇವನ ಪೂಜೆಯನ್ನು ನಿರ್ವಹಿಸಲು ಮಾರ್ತಂಡ ಭೈರವನ ಆಜ್ಞೆಗೆ ಶಿರಬಾಗಿ ಶ್ರೀಮಹಾಮಲ್ಲಪ್ಪ ಮುತ್ಯಾಗೆ ಮಹಾಮಹಿಮ ಶ್ರೀರಾವುತರಾಯ ಮಲ್ಲಯ್ಯನ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡುವುದರ ಜೋತೆಗೆ ಸಮಾಜದ ಒಳುತ ಶುಭ ಕಾರ್ಯಗಳಲ್ಲಿ ಭಾಗಿಯಾಗಿ ದೇವರ ಪೂಜಾ ಕೈಂಕರ್ಯ ಜೋತೆ ಜನಸೇವಯನ್ನು ಮಾಡಿ ಜನಮನ್ನಣೆಗೆ ಪಾತ್ರನಾದ ಶ್ರೀಮಹಾಮಲ್ಲಪ್ಪ ಮುತ್ಯಾ ನಡೆ ನುಡಿ ಒಂದಾಗಿಸಿ ಗ್ರಾಮದ ಸುತ್ತ ಮುತ್ತ ಜನರಿಗೆ ಉಪಯೋಗವಾಗುವ ಕೆಲಸ ಕಾರ್ಯ ಮಾಡಿ ಮಹಾ ಪುರುಷನಾದನು ಪ್ರಾಮಾಣಿಕ ನಿತ್ಯ ನಿಷ್ಠೆ ಸತ್ಯ ಶುದ್ಧ ಭಾವದಿಂದ ದೇವನಾನು ದೇವ ಶ್ರೀ ಮಲ್ಲಯ್ಯನ ಅವತಾರಿ ಜಗದೊಡೆಯ ಭಂಡಾರ ಪ್ರೀಯ ಅಶ್ವರೂಢ ಶ್ರೀರಾವುತರಾಯನ ಪೂಜೆಯ ಜೋತೆ ಕಾರುಣಿಕನುಡಿ ಸೇವೆ ಜನಮಾನಸದಲ್ಲಿ ಸತ್ಯನಿಜ ವಾಕ್ ಸಿದ್ಧಿಯಾಗಿ ಪವಾಡಗಳು ಜರುಗಿ ಜನಮನ್ನಣೆ ಪಡೆದು ದೇವನ ಸೇವೆಜೋತೆ ಸಾಮಾಜಿಕ ನೊಂದವರ ಅವಶ್ಯಕತೆ ನ್ಯಾಯಬದ್ಧವಾದ ಉತ್ತಮ ಕಾರ್ಯಗಳು ದೇವರ ಹಿಪ್ಪರಗಿ ಗ್ರಾಮದ ಸುತ್ತಮುತ್ತ ಜನರಿಗೆ ಬೆಳಕಾಗಿ ದಾರಿ ತೋರಿ ಶ್ರೀಮಹಾಮಲ್ಲಪ್ಪ ಮುತ್ಯಾನ ಬೆಳಕು ಬಡವರ ಅಜ್ಞಾನವನ್ನು ಹೋಗಲಾಡಿಸಿ ಸರ್ವಕುಲ ಜನರ ಏಳ್ಗೇಗಾಗಿ ಶ್ರಮಿಸಿದ ಮಹಾಪುರುಷ ದೇವರ ವರ ಕೃಪೆಗೆ ಪಾತ್ರನಾದನು ಜ್ಞಾನವಂತ ಗುಣವಂತ ಬೆದಭಾವ ಅರಿಯದವನಾಗಿ ಬಾಳಿ ಬದುಕಿದ ಮಹಾಮಹಿಮನ ಲಂಗೈಖ್ಯನಾದ ಮೇಲೆ ಗ್ರಾಮದ ಸರಪಂಚರು ಗಣ್ಯಮಾನ್ಯರು ಮಹಾಮಹಿಮ ದೇವನ ವರದಾತನ ದೇವನ ಸಮಾನವೆಂದು ನಿರ್ಣಯಿಸಿ ಶ್ರೀಮಲ್ಲಯ್ಯನ ದೇವಾಲಯದ ಗರ್ಭಗುಡಿ ಹಿಭಾಗದಲ್ಲಿ ಗದ್ದುಗೆಗೆ ಅವಕಾಶ ನೀಡಿ ನಿರ್ಮಿಸಿದರು.ಲಿಂಗೈಖ್ಯರಾದ ಮಹಾಮಹಿಮನ ದರುಶನಕ್ಕೆ ಸುಕ್ಷೇತ್ರ ದೇವರ ಹಿಪ್ಪರಗಿ ಹಾಗೂ ಸುತ್ತಮುತ್ತ ಗ್ರಾಮದ ಅಪಾರ ಜನರು ದರುಶನ ಭಾಗ್ಯ ಪಡೆದು ಪುನೀತರಾದರು.ಆಗಿನಿಂದ ಈಗಿನವರಿಗೂ 1001ವರುಷದಿಂದ ಮಹಾಮಹಿಮ ಶ್ರೀಮಹಾಮಲ್ಲಪ್ಪ ಮುತ್ಯಾನ ವಂಶಾಳಿಯವರು ಭಂಡಾರದ ಒಡೆಯ ಏಳುಕೋಟಿ ಏಳುಕೋಟಿ ಯುಗೇ ಯುಗೇ ಯುಗಗಳು ಕಳೆದರೂ ವಂಶಸ್ಥರು ದೇವರಮನಿ ಪೂಜಾರಿ ಮನೆತನದಲ್ಲಿ ಅನೇಕ ಕಾರುಣಿಕರು ಶ್ರೀರಾವುತರಾಯ ಮಲ್ಲಯ್ಯನ ಪೂಜಾ ಸೇವಾ ಕಾರ್ಯ ಮಾಡುತಲಿದ್ದು ಜೋತೆಗೆ ಮಹಾಪುರುಷ ಮಹಾಮಲ್ಲಪ್ಪನ ಕರ್ತೃಗದ್ದುಗೆಗೆ ಪೂಜೆ ಸಲ್ಲಿಸಿ ಪಲ್ಲಕ್ಕಿ ಉತ್ಸವ ಪ್ರತಿವರುಷ ನೇರವೇರಿಸುವರು ದಿನನಿತ್ಯ ಶ್ರೀರಾವುತರಾಯ ಮಲ್ಲಯ್ಯನ ಪೂಜೆ ಜೋತೆ ಮಹಾಮಹಿಮ ಮಹಾಮಲ್ಲಪ್ಪ ಮುತ್ಯಾನ ಕರ್ತೃ ಗದ್ದುಗೆ ಪೂಜೆ ಸಲ್ಲಿಸುವರು. ಸುಕ್ಷೇತ್ರ ದೇವರ ಹಿಪ್ಪರಗಿ ಸುತ್ತ ಮುತ್ತ ಗ್ರಾಮಗಳ ಜನರು ಶ್ರೀರಾವುತರಾಯ ಮಲ್ಲಯ್ಯನ ದರ್ಶನ ಜೋತೆ ಮಹಾಮಲ್ಲಪ್ಪ ಮುತ್ಯಾನ ಗದ್ದೆಗೆಗೆ ನಮಸಿ ಭಕ್ತಿಭಾವ ಸಲ್ಲಿಸಿ ಪುನೀತರಾಗುತ್ತಿದ್ದಾರೆ ಸುಕ್ಷೇತ್ರ ದೇವರ ಹಿಪ್ಪರಗಿ ಭಂಡಾರದ ಒಡೆಯ ಶ್ರೀರಾವುತರಾಯ ಮಲ್ಲಯ್ಯ ಅನವರತ ಪೂಜಿಸುವ ವರಪಡೆಯುವದರ ಜೋತೆ ಮಹಾ ಪುರುಷ ಮಹಾಮಲ್ಲಪ್ಪ ಮುತ್ಯಾ ದೇಸಾಯಿ (ಅಂಗಡಿ ಪೂಜಾರಿ) ಅಜರಾಮರನಾಗಿ ನಿಂತು ಭಕ್ತ ಸಮೂಹದಜನ ಮಾನಸದಲಿ ಸ್ಮರಣೀಯನಾದ ಮಹಾ ಪುರುಷ ಶ್ರೀ ಮಹಾಮಲ್ಲಪ್ಪ ಮುತ್ಯಾ ದೇಸಾಯಿ (ಅಂಗಡಿ ಪೂಜಾರಿ) ಬನ್ನಿ ಸುಕ್ಷೇತ್ರ ಶ್ರೀ ರಾವುತರಾಯ ಮಲ್ಲಯ್ಯ ದರ್ಶನ ಪಡೆದು ಕೃಪೆಗೆ ಪಾತ್ರರಾಗೋಣ.

-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ..