ಮಗುವಿನ ಸಂತಸದ ಕಲಿಕೆಗೆ ಪ್ರೋತ್ಸಾಹಿಸಿ – ಸಂತೋಷ ಚವ್ಹಾಣ.
ಇಂಡಿ ಫೆ.14

ಫಂಡಾಮೆಂಟಲ್ ಲಿಟರಸಿ ಅಂಡ್ ನ್ಯೂಮರಸಿ (ಎಫ್.ಎಲ್.ಎನ್) ಎಂಬುದು ಮಗುವಿನ ಕನಿಷ್ಠ ಕಲಿಕೆಯ ಮಾನದಂಡಗಳಾದ ಸ್ಪಷ್ಟ ಓದು ಶುದ್ಧ ಬರಹ ಸರಳ ಲೆಕ್ಕಾಚಾರ ಸಾಮರ್ಥ್ಯವಾಗಿದ್ದು, ಮಕ್ಕಳಿಗೆ ವಿಶೇಷ ಸ್ಪರ್ಧೆ ಏರ್ಪಡಿಸಿ ಪ್ರೋತ್ಸಾಹಿಸುವದೇ ಕಲಿಕಾ ಹಬ್ಬದ ಮುಖ್ಯ ಉದ್ದೇಶವಾಗಿದೆ ಎಂದು ಹಿರೇರೂಗಿ ಕನ್ನಡ ಕ್ಲಸ್ಟರ್ ಸಿ.ಆರ್.ಪಿ ಸಂತೋಷ ಚವ್ಹಾಣ ಹೇಳಿದರು. ಅವರು ತಾಲೂಕಿನ ಹಿರೇರೂಗಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎಚ್.ಪಿ.ಎಸ್ ಬಸವೇಶ್ವರ ವಸ್ತಿ ಶಾಲೆಯಲ್ಲಿ ಹಿರೇರೂಗಿ ಕನ್ನಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಗು ತನ್ನ ಬಾಲ್ಯವನ್ನು ಸಂಭ್ರಮಿಸ ಬೇಕೆಂದರೆ ಕಲಿಕೆಯು ಹಬ್ಬವಾಗಬೇಕು. ತನ್ನ ಕಲಿಕೆಯ ದಾರಿಯನ್ನು ತಾನೇ ಕಂಡುಕೊಂಡು ಸಂಭ್ರಮಿಸ ಬೇಕು ಎಂದು ಹೇಳಿದರು. ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಕಲಿಕಾ ಹಬ್ಬದಿಂದ ಮಕ್ಕಳಲ್ಲಿ ಶೈಕ್ಷಣಿಕ ಬಲವರ್ಧನೆ ಹಾಗೂ ಮೂಲಭೂತ ಸಾಕ್ಷರತೆ, ಸಂಖ್ಯಾ ಜ್ಞಾನ ಹೆಚ್ಚುತ್ತದೆ. ಮಕ್ಕಳು, ಶಿಕ್ಷಕರು, ಪಾಲಕರು ಈ ಕಲಿಕಾ ಹಬ್ಬದ ಭಾಗಿದಾರರಾಗಿದ್ದು, ಮಕ್ಕಳಿಗೆ ಪ್ರಶ್ನೆ ಮಾಡುವ ಹಾಗೂ ಶೈಕ್ಷಣಿಕ ಮನೋಭಾವ ಬೆಳೆಸುವ ಜತೆಗೆ ಮಕ್ಕಳಲ್ಲಿ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಹೇಳಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಶರಣಪ್ಪ ಝಳಕಿ, ಉಪಾಧ್ಯಕ್ಷ ಸೋಮನಾಥ ಝಳಕಿ, ಗ್ರಾಮ ಪಂಚಾಯತ್ ಸದಸ್ಯ ಜಟ್ಟೆಪ್ಪ ಝಳಕಿ, ಮುಖ್ಯ ಶಿಕ್ಷಕರಾದ ಎಸ್ ಎಲ್ ಪವಾರ, ಅನಿಲ ಪತಂಗಿ, ಮಲ್ಲಪ್ಪ ಬಡದಾಳ ಹಾಗೂ ಶಿಕ್ಷಕರಾದ ಶರಣು ಚಾಳೇಕರ, ಡಿ ಎಸ್ ಸುಲಾಖೆ, ಬಿ ಎಸ್ ಹವಳಗಿ ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಶಿಕ್ಷಕ ಶಿಕ್ಷಕಿಯರು ಹಾಗೂ ಮಕ್ಕಳು ಭಾಗವಹಿಸಿದ್ದರು. ಕಲಿಕಾ ಹಬ್ಬದ ಚಟುವಟಿಕೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ವರದಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಬಿ.ಹರಿಜನ.ಇಂಡಿ.ವಿಜಯಪುರ