ಸಂತೆಯಲ್ಲಿ ಹೆಚ್.ಐ.ವಿ ಮತ್ತು ಏಡ್ಸ್ ಕುರಿತು ಜನ ಜಾಗೃತಿ ಅಭಿಯಾನ ಕಾರ್ಯಕ್ರಮ.
ಕಲಕೇರಿ ಫೆ.14

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವಿಜಯಪುರ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂದಗಿ ಸಮುದಾಯ ಆರೋಗ್ಯ ಕೇಂದ್ರ ಕಲಕೇರಿ ಗ್ರಾಮ ಪಂಚಾಯತಿ ಕಲಕೇರಿ ಇವರುಗಳ ಸಂಯುಕ್ತ ಆಶ್ರಯದ ಸಂತೆಯಲ್ಲಿ ಮತ್ತು ಜನನಿಬಿಡ ಪ್ರದೇಶದಲ್ಲಿ ಹೆಚ್.ಐ.ವಿ ಮತ್ತು ಏಡ್ಸ್ ಜಾಗೃತಿ ಅಭಿಯಾನವನ್ನು ಹಮ್ಮಿ ಕೊಳ್ಳಲಾಯಿತು ಈ ಕಾರ್ಯಕ್ರಮದ ಚಾಲನೆಯನ್ನು ಸಮುದಾಯ ಅರೋಗ್ಯ ಕೇಂದ್ರದ ವೈದ್ಯಧಿಕಾರಿಗಳದ ಡಾ, ನವೀನ್ ಶಂಕರ ನೀಡಿದರು.

ಕಾರ್ಯಕ್ರಮವನ್ನು ಆಟೋ ಪ್ರಚಾರದ ಮೂಲಕ ಸಂತೆಯಲ್ಲಿ ನೆರೆದಿದ್ದ ಜನರಿಗೆ ಹೆಚ್.ಐ.ವಿ ಮತ್ತು ಏಡ್ಸ್ ಜಾಗೃತಿಯನ್ನು ಮೂಡಿಸ ಲಾಯಿತು ಜೊತೆಗೆ ಸಂತೆ ಮತ್ತು ಬಸ್ ಸ್ಟಾಂಡ್ ಹತ್ತಿರ ನೆರೆದಿದ್ದ ಜನರಿಗೆ ಕರಪತ್ರ ಸಹ ಹಂಚಲಾಯಿತು ಈ ಕಾರ್ಯಕ್ರಮದಲ್ಲಿ ಐ.ಸಿ.ಟಿ.ಸಿ ಆಪ್ತಸ ಮಾಲೋಚಕರಾದ ಡಾ, ಸಂತೋಷ ಟೆಂಗಳಿ ಪ್ರಯೋಗ ಶಾಲಾ ತಂತ್ರಜ್ಞರಾದ ಶ್ರೀ ಎಸ್ ಬಿ ಜೇವೂರ ಸಿ. ಎಚ್ ಓರಾದ ಅನಿತಾ ದೊಡ್ಡಮನಿ ಆಸೀಫ್ ನದಾಫ್ (ನರ್ಸಿಂಗ್ ಆಫಿಸರ್) ಹಾಗೂ ಆಶಾ ಕಾರ್ಯಕರ್ತೆಯರಾದ ನಿರ್ಮಲಾ ಬೆನೂರ ಮೀನಾಕ್ಷಿ ಬೇನಾಳ ಗೀತಾ ಜಿಂಗಾಣಿ ಭಾಗ್ಯಶ್ರೀ ಪಟ್ಟಣಶೆಟ್ಟಿ ಶಶಿಕಲಾ ಮೊಪಗಾರ ಸುನಂದಾ ಮೊಪಗಾರ ವಿಜಯಲಕ್ಷ್ಮಿ ಇಳಕಲ್ ಮಾಬುಬಿ ಸಾಸಬಾಳ ಕವಿತಾ ಬಡಿಗೇರ್ ಉಪಸ್ಥಿತರಿದ್ದರು.
ತಾಲೂಕ ವರದಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ