“ರಾಷ್ಟ್ರೀಯ ಮಹಿಳಾ ದಿನಾಚರಣೆ”…..

ದೇಶದ ಸರ್ವಮಹಿಳಾ ರತ್ನಗಳ ದಿನ ಶುಭ
ದಿನಅನದಿನವು ಸೇವಾ ಶಕ್ತಿ ಮಾತೆಯರು
ತಾಯಿ ಅಕ್ಕ ತಂಗಿ ಪುತ್ರಿ ಪತ್ನಿ ಮುಖ್ಯ
ಭೂಮಿಕೆಯಲಿ ಕುಟುಂಬದ ಕಣ್ಣು
ಸಮಾಜದ ಆದರ್ಶತನದ
ದೇಶದ ನಾಡಿನ ಸಂರಕ್ಷಣೆಯ ಶಕ್ತಿ ಯುಕ್ತಿ
ಬಾಳಿನ ಬಂಡಿಯ ನೋಗದ ಗಟ್ಟಿಗಿತ್ತಿಯರು
ವಂಶಾಭಿವೃದ್ಧಿಯ ಸಂತಾನದ ಪ್ರೀತಿ
ಸಹನೆಯ ಪೋಷಣೆ ರಕ್ಷಣೆಯ
ಶ್ರೇಯಸ್ಸಿನ ರೂವಾರಿಳು
ಕುಟುಂಬ ಸಮಾಜದ ಬೆಳಕು
ಸಮಾನತೆಯ ಸಹಾಯ ಭಾವದವರು
ಸಹನೆ ಸಹಕಾರದ ಮೂರ್ತಿಗಳು
ಸಕಲರ ಜೀವನ ಹುರಿದುಂಭಿಸುವ ಸಬಲರು
ವಿಶ್ವದ ನಿಜ ನಾಯಕಿಯರು
“ಭಾರತದ ಕೋಗಿಲೆ ಸರೋಜನಿ ನಾಯ್ಡು”
ಜನಸಿದ ದಿನ ದ್ಯೋತಕ
ಸರ್ವ ಮಹಿಳಾ ದಿನಾಚರಣೆ
ಮಹಿಳಾ ಶಕ್ತಿಯೇ ಜಗವ
ಉತ್ತಮಗೊಳಿಸುವ ಧೈರ್ಯಶಾಲಿಗಳು
ಹಿಂದಿನ ಇಂದಿನ ಮುಂದಿನ ಪ್ರೇರಣೆ
ಆಶಾದಾಯಕರು
ಹಿಗ್ಗಿಗೆ ಅಹಂ ಪಡದ ಕುಗ್ಗಿಗೆ ದೃತಿಗೆಡದ
ಬಲಿಷ್ಠ ಮಹಿಳೆಯರು
ಸಕಲ ಶುಭ ಕಾರ್ಯಕ್ಕೆ ಸಬಲರು
ಸರ್ವ ಸ್ತ್ರೀಕುಲಜರು ಭೂಮಾತೆಯ
ಸಮಾನರು ಮಹಿಳಾ ರತ್ನಗಳಿಗೆ
ರಾಷ್ಟ್ರೀಯ ಮಹಿಳಾ ದಿನಾಚರಣೆಯ
ಶುಭಾಶಯಗಳೊಂದಿಗೆ ಶತಕೋಟಿ
ನಮನಗಳು
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ.