ಆದರ್ಶ ಕನ್ನಡ ಆಂಗ್ಲ ಉರ್ದು ಮಾಧ್ಯಮ ಪ್ರೌಢ ಶಾಲೆಯ ಕಲಕೇರಿ ವಾರ್ಷಿಕ ಸ್ನೇಹ ಸಮ್ಮೇಳನ – ಎರಡನೇ ದಿನದ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಕಲಕೇರಿ ಫೆ.16

ಆದರ್ಶ ಕಲಿಕಾ ಕೇಂದ್ರ KSOU ಮೈಸೂರು ಯು.ಜಿ & ಪಿ.ಜಿ ವಿದ್ಯಾರ್ಥಿಗಳ ಹಾಗೂ ಆದರ್ಶ ಕನ್ನಡ ಆಂಗ್ಲ ಉರ್ದು ಮಾಧ್ಯಮ ಪ್ರಥಮ ಪ್ರೌಢ ಶಾಲೆಯ ಕಲಕೇರಿ ವಾರ್ಷಿಕ ಸ್ನೇಹ ಸಮ್ಮೇಳನ 2024/25 ನೇ. ಸಾಲಿನ, 15.2.25. ಎರಡನೇ ದಿನದ ಅದ್ದೂರಿ ಸಮಾರಂಭ ನಡೆಯಿತು. ಶ್ರೀಮಹಶ್ವರಾನಂದ ಮಹಾಸ್ವಾಮಿಗಳು ತಿಳಗೋಳ.ಡಾ, ವ್ಟಿ. ಕ ಜಾಲಹಳ್ಳಿ ಮಠ ಇವರು ಈ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಮಕ್ಕಳು ಬಹಳ ಬುದ್ಧಿವಂತರು ಆಗಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಡಾ, ಪ್ರಭುಗೌಡ ಲಿಂಗದಳ್ಳಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಇವರು ಈ ಸಂದರ್ಭದಲ್ಲಿ ಆದರ್ಶ ಸಂಸ್ಥೆ ಬೆಳೆಸ ಬೇಕು ಎಂದು ಛಲಪಟ್ಟು ನಿಂತಂಥ ಜಹಾಂಗೀರ್ ಪಾಷಾ ಸಿರಸಗಿ ಹಾಗೂ ಮುನ್ನ ಸರ್ ಇವರು ಈ ಸಂಸ್ಥೆಯನ್ನು ತಾಯಿಯಂತೆ ನೋಡುತ್ತಾ ಈ ಜಗತ್ತಿನಲ್ಲಿ ದುಡ್ಡಿಗೆ ಬೆಲೆ ಇಲ್ಲ ವಿದ್ಯೆಗೆ ಬೆಲೆ ಇದೆ ಎಂದು ಪಾಲಕರಿಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ತಾಯಿ ತಂದೆ ಕೆಲಸ ಏನಪ್ಪಾ ಅಂದ್ರೆ ಶಾಲೆಯಿಂದ ಮಗು ಮನೆಗೆ ಬಂದರೆ ಇವತ್ತು ಪಾಠ ಶಾಲೆ ಏನಾಗಿದೆ ಏನು ಹೇಳಿದ್ರು ಅಂತಾ ಹೇಳಿ ನೀವು ಕೇಳಬೇಕು ಅದು ತಾಯಿ ಕರ್ತವ್ಯ ಆದರ್ಶ ಸಂಸ್ಥೆ ಕಲಿತ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಮೇಲಕ್ಕೆ ಬೆಳೆಯಬೇಕು ಎಂಬುದೇ ನಮ್ಮೆಲ್ಲರ ಆಸೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಎಸ್.ಎಸ್ ಕಲಶೆಟ್ಟಿ ಉಪನ್ಯಾಸಕರು ನಾನು ಮೊದಲು ಈ ಶಾಲೆ ಒಂದೇ ಬಿಲ್ಡಿಂಗ್ ಇತ್ತು ಇವತ್ತು ನಾನು ಆದರ್ಶ ಶಾಲೆಗಳ ನೋಡಿ ನನಗೆ ಇದು ಬೆಂಗಳೂರು ಧಾರವಾಡ ಎನ್ನಿಸಿತು ಆದರ್ಶ ಸಂಸ್ಥೆ ಈ ಮಟ್ಟಕ್ಕೆ ಬೆಳೆಯ ಬೇಕಪ್ಪ ಅಂದ್ರೆ ಅವರ ಐದು ಮಂದಿ ಅಣ್ಣ ತಮ್ಮಂದಿರ ಪ್ರಯತ್ನ ಊರಿನ ಪಾಲಕರ ಒಂದು ಆಶೀರ್ವಾದ ಅವರ ತಾಯಿ ತಂದೆಯ ಆಶೀರ್ವಾದ ದಿಂದ ಈ ಸಂಸ್ಥೆ ಬೆಳೆದಿದೆ ಈ ಸಂಸ್ಥೆಯಲ್ಲಿ ಕಲೆತಂತ ಮಕ್ಕಳು ಬಾಳ ಮೇಲೆತ್ತರಕ್ಕೆ ಬೆಳೆಯುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಡಾ, ಜಿಲಾನಿ ಅವಟಿ ವಿಜಯಪುರ ಇವರು ಈ ಸಂಸ್ಥೆ ಮೇಲೆ ಅಲ್ಲಾನ ಕೃಪೆ ಇದೆ ಮುನ್ನ ಸಿರಸಗಿ ಇವರ ಮನಸ್ಸಿನಲ್ಲಿ ಭೇದ ಭಾವ ಇಲ್ಲ ಜಾತಿ ಮತ ಎಂಬುದು ಗೊತ್ತಿಲ್ಲ ನಾವು ಎಲ್ಲರೂ ಒಂದೇ ತಾಯಿಯ ಮಕ್ಕಳು ಎಂದು ಈ ಸಂಸ್ಥೆಯನ್ನು ಇನ್ನು ಹೆಚ್ಚಿಗೆ ಬೆಳೆಯಲಿ ಎಂದು ಅಲ್ಲಾನಲ್ಲಿ ದುವಾ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮನೋಹರ್ ಪತ್ತಾರ್ ಆದರ್ಶ ಶಿಕ್ಷಣ ಸಂಸ್ಥೆ ಇದು ನನ್ನ ಕಣ್ಣಿಗೆ ವಿದ್ಯಾ ಮಂದಿರ ಇಲ್ಲಿ ಇದೆ ಎಂದು ಕಾಣಿಸುತ್ತದೆ ಯಾಕಂದ್ರೆ ನಮ್ಮ ಕಲಕೇರಿ ಗ್ರಾಮದಲ್ಲಿ ಇಂಥ ಒಂದು ಸಂಸ್ಥೆ ಇದೆ ಈ ಸಂಸ್ಥೆಯಲ್ಲಿ ಕಲಿತಂತ ವಿದ್ಯಾರ್ಥಿಗಳು ಯಾವ ಮಟ್ಟಕ್ಕೆ ಬೆಳಿತಾ ಇದೆ ಎಂದು ಕೇಳುಪಟ್ಟೆ ವಿದ್ಯಾರ್ಥಿಗಳು ನಮ್ಮ ಆದರ್ಶ ಸಂಸ್ಥೆಯಲ್ಲಿ ಮುನ್ನ ಸರ್ ಇರುವರೆಗೂ ನಮಗ ವಿದ್ಯಾಭ್ಯಾಸಕ್ಕೆ ಯಾವ ಕೊರತೆ ಇಲ್ಲ ಎಂದು ವಿದ್ಯಾರ್ಥಿಗಳು ಮಾತನಾಡುವುದು ನಾವು ಸ್ವಲ್ಪ ಮಟ್ಟಿಗೆ ಕೇಳದೆ ಆದರ್ಶ ಶಿಕ್ಷಣ ಇಂತಹ ಒಂದು ದೊಡ್ಡ ಸಂಸ್ಥೆ ಕಲಕೇರಿ ಗ್ರಾಮದಲ್ಲಿ ಸುಂದರ ಒಂದು ವಿದ್ಯಾಮಂದಿರ ಎಂದು ಈ ಸಂದರ್ಭದಲ್ಲಿ ಪಾಲಕರಿಗೆ ಈ ಒಂದು ವಿಷಯ ತಿಳಿಸಿದರು.

ನಿಮ್ಮ ಮಕ್ಕಳನ್ನ ಚೆನ್ನಾಗಿ ಓದಿಸಿ ಮಕ್ಕಳು ಬೆಳೆಯೋದನ್ನ ತಾಯಿ-ತಂದೆ ನೋಡಿ ಸಂತೋಷ ಪಡಬೇಕು ಎಂದು ತಿಳಿಸಿದರು. ನಬಿಲಾಲ್ ಸಿರಸಗಿ ಸಂಸ್ಥೆಯ ಅಧ್ಯಕ್ಷರು. ಡಾ, ಸೖಯದ್ ಯುನಿಸ್ ಖಾದ್ರಿ. ಗ್ರಾಮ ಪಂಚಾಯತಿ ಅಧ್ಯಕ್ಷರು ರಾಜ್ ಅಹ್ಮದ್ ಸಿರಸಗಿ. ಬಸೀರ್ ಸೇಠ್ ಬೇಪಾರಿ. ಕೆ.ಪಿ.ಸಿ.ಸಿ. ತಾಲೂಕ ಅಧ್ಯಕ್ಷರು ದೇವರು ಹಿಪ್ಪರಗಿ. ಡಾ, ಬಿ. ಎಮ್ ಹುರುಕಡ್ಲಿ.ಆಯ್. ಎ ಸಿಪಾಯಿ. ಡಾ, ಈರಣ್ಣ ಪಟ್ಟಣಶೆಟ್ಟಿ ಸಿಂದಗಿ. ಪ್ರಕಾಶ್ ಪವ್ಹಾರ ಬೆಂಗಳೂರು. ಡಾ, ಕರಪ್ಪ ಪೂಜಾರಿ.ಅಲ್ಲಾಭಕ್ಷ ಬಿಸನಾಳ. ದತ್ತಾತ್ರೇಯ ಮೋಪಗಾರ. ಶಂಕರಗೌಡ ಬಿರಾದಾರ್. ಡಾ, ಹಸನ್ ನಾಗಾವಿ. ಹನುಮಂತ್ ವಡ್ಡರ್. ಅನಿಲ್ ಬಡಿಗೇರ್. ನಬಿಲಾಲ್ ನಾಯ್ಕೋಡಿ. ಪಿಂಟು ಮುಜವಾರ್. ಮೊಮ್ಮದ್ ರಫಿ ವಲ್ಲಿಭಾವಿ. ಮುಸ್ತಫ ಸಿಪಾಯಿ. ಇನ್ನೂ ಅನೇಕ ಹಿರಿಯರು ಗ್ರಾಮಸ್ಥರು ರಾಜಕೀಯ ಧುರೀಣರು ಹಾಗೂ ನಿರೂಪಣೆಗಾರರು ಶಿವು ಸಜ್ಜನ್ ಶಿಕ್ಷಕರು. ಈರಣ್ಣ ಝಳಕಿ ಶಿಕ್ಷಕರು ಆದರ್ಶ ಸಂಸ್ಥೆಯ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಪಾಲಕರು ಸೇರಿದಂತೆ ಎರಡನೇ ದಿನದ ಕಾರ್ಯಕ್ರಮ ಅದ್ದೂರಿಯಾಗಿ ಮುದ್ದು ಮಕ್ಕಳಿಂದ ಅನೇಕ ಕಾರ್ಯಕ್ರಮಗಳು ಜರುಗಿದವು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ