“ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣಕ್ಕೆ ಹಕ್ಕೊತ್ತಾಯ”…..

ಪ್ರಸ್ತುತ ಸನ್ನಿವೇಶದಲ್ಲಿ ಆತಂಕಕಾರಿ ಬೆಳವಣಿಗೆ ಎಂದರೆ ಒಳ ಮೀಸಲಾತಿ ಜಾರಿ ಆಗುವವರೆಗೂ ಯಾವುದೇ ಹೊಸ ನೇಮಕಾತಿ ಮಾಡ ಬಾರದೆಂದು ಸರ್ಕಾರ ಆದೇಶ ಮಾಡಿದ್ದರೂ ಒಳ ಮೀಸಲಾತಿ ವಿರೋಧಿಗಳು ಒಳಸಂಚು ಮಾಡಿ, ಪಿತೂರಿ ಮಾಡಿ ಬ್ಯಾಕ್ಲಾಗ್ ಹುದ್ದೆಗಳಿಗೆ ಈ ಆದೇಶ ದಿಂದ ಹೊರತು ಪಡಿಸುವಂತೆ ಆದೇಶ ಹೊರಡಿಸಲು ನೋಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೆ ಇಂದು ಮಾನ್ಯ ಮುಖ್ಯ ಮಂತ್ರಿಗಳ ಸಲಹೆಗೂ ಹೋಗುತಿದ್ದು ಒತ್ತಡದ ಡಿ.ಪಿ.ಆರ್ ನಿಂದ ಅಂತಿಮ ಆದೇಶ ಬರಬಹುದು, ಯಾವುದೇ ನೇಮಕಾತಿ ನಡೆದಲ್ಲಿ 100 ಹುದ್ದೆಗಳಲ್ಲಿ 17 ಹುದ್ದೆಗಳನ್ನು SC ಗಳಿಗೆ ಬರುತ್ತವೆ. ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿ ನಡೆದಾಗ ಅಷ್ಟು ಹುದ್ದೆಗಳು ಪರಿಶಿಷ್ಟ ಜಾತಿಗೇನೆ ಸಿಗುತ್ತದೆ. ಅಂದಾಜು 3500 ಕ್ಕಿಂತ ಹೆಚ್ಚು ಬ್ಯಾಕ್ಲಾಗ್ ಹುದ್ದೆಗಳಿಗೆ ನೇಮಕಾತಿ ಮಾಡುವ ಸಂಭವವಿದ್ದು. ಇದರಲ್ಲಿ 1300 ಕ್ಕಿಂತ ಹೆಚ್ಚಿನ ಹುದ್ದೆಗಳ ಮಾದಿಗ ಸಮುದಾಯಕ್ಕೆ ಸಿಗಬೇಕು ಈಗಲೇ ಮಾದಿಗ ಸಮುದಾಯ ಎಚ್ಚೆತ್ತು ಕೊಳ್ಳದಿದ್ದಲ್ಲಿ ಸಮುದಾಯದ ವಿದ್ಯಾವಂತ ಯುವಕರು ಬೀದಿಗೆ ಬರ ಬೇಕಾಗುತ್ತದೆ. ಎಂದು ವಿಶೇಷ ವರದಿ ಇದಾಗಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟೆ