ಬಾಗಲಕೋಟೆ ನಗರದಲ್ಲಿ ಪ್ರಪ್ರಥಮ ಬಾರಿಗೆ ಫೆಬ್ರುವರಿ 8, 2026 ರವಿವಾರ ರಂದು ನಾಗರಬೆಟ್ಟ ಆಕ್ಸ್‌ಫರ್ಡ್ – ಪಾಟೀಲ ಸಂಸ್ಥೆಯ ಪ್ರಾರಂಭಿಸಲಾಗುವುದು.

ಮುದ್ದೇಬಿಹಾಳ ಫೆ.07

ತಾಲ್ಲೂಕಿನ ನಾಗರಬೆಟ್ಟ ಗ್ರಾಮದ ಗುಡ್ಡದ ಹತ್ತಿರ ಇರುವ ಆಕ್ಸ್‌ಫರ್ಡ್ ಸಂಸ್ಥೆಯು ಪ್ರತಿ ವರ್ಷ 10 ನೇ. ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಟ್ಯಾಲೆಂಟ್‌ ಅರ್ವಾಡ್, ಮಾಸ್ಟರ್ ಮೈಂಡ್ ಅವಾರ್ಡ್, ಮತ್ತು ಟ್ಯಾಲೆಂಟ್‌ ಪರೀಕ್ಷೆ ಅಂತಹ ಪರೀಕ್ಷೆಯನ್ನು ಇಟ್ಟು ಆಕರ್ಷಕ ಬಹುಮಾನವನ್ನು ಹಮ್ಮಿ ಕೋಳ್ಳುತ್ತಿದ್ದಾರೆ. ಆದರೆ ಈ 2026-27 ನೇ. ಸಾಲಿನ ಟ್ಯಾಲೆಂಟ್‌ ಸರ್ಚ್‌ ಪರೀಕ್ಷೆಯನ್ನು ಸ್ಟೇಟ್ ಬೋರ್ಡ್, ICSE ಮತ್ತು CBSE ವಿದ್ಯಾರ್ಥಿಗಳು 10 ನೇ. ತರಗತಿಯಲ್ಲಿ ಓದುತ್ತಿರುವ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬಾಗಲಕೋಟ ನಗರದ ನವನಗರ ದಲ್ಲಿರುವ ಕಾಳಿದಾಸ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಎಸ್.ಬಿ ಪಾಟೀಲ ಕಂಪೋಜಿಟ್ ಪಿ.ಯು ಕಾಲೇಜು ಮತ್ತು ಹೈಸ್ಕೂಲ್ ನಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಬಾಗಲಕೋಟ ನಗರದಲ್ಲಿ ಪ್ರಥಮ ಬಾರಿಗೆ ಇದೇ ಫೆಬ್ರುವರಿ 08 ರವಿವಾರ ದಂದು ಕ್ಯಾಶ್ ಪ್ರೈಸ್ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ. ಒಂದನೇ ಬಹುಮಾನ 75000, ಎರಡನೇ ಬಹುಮಾನ 50000, ಮೂರನೇ ಬಹುಮಾನ 30000, ನಾಲ್ಕನೇ ಬಹುಮಾನ 15000, ಐದನೇ ಬಹುಮಾನ 10000, ಆರನೇ ಬಹುಮಾನ 5000 ರೂಪಾಯಿ ನೀಡಲಾಗುವುದು. ಹಾಗೂ ಅತಿ ಹೆಚ್ಚು ಅಂಕ ಗಳಿಸಿದ ಮೊದಲ 10 ವಿದ್ಯಾರ್ಥಿಗಳಿಗೆ 1000 ನಗದು ಬಹುಮಾನ ನೀಡಲಾಗುವುದು. ಪರೀಕ್ಷೆಗೆ ನೊಂದಾಯಿಸುವ ವಿದ್ಯಾರ್ಥಿಗಳು ತಮ್ಮ ಹೆಸರು, ತರಗತಿ, ಶಾಲೆಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ 9380095756 ಈ ನಂಬರ್ ಗೆ ಮೆಸೇಜ್ ಮತ್ತು ವ್ಯಾಟ್ಸಪ್ ಕೂಡಾ ಕಳಿಸಿಬಹುದು. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಶಾಲೆಯ ಗುರುತಿನ ಚೀಟಿ ಮತ್ತು ಆಧಾರ ಕಾರ್ಡ್ ಕಡ್ಡಾಯವಾಗಿ ತರಬೇಕು. ಮತ್ತು ಪರೀಕ್ಷೆಯ ಕೆಲವು ನಿಯಮಾವಳಿಗಳನ್ನು ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 7483147040, 8310035858 ಈ ನಂಬರ್ ಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು ಎಂದು ನಾಗರಬೆಟ್ಟ ಆಕ್ಸ್‌ಫರ್ಡ್ ಪಾಟೀಲ್ಸ್ ಕಾಲೇಜ್ ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆಯಲ್ಲಿ ಬಾಗಲಕೋಟ ನಗರದಲ್ಲಿ ಆಕ್ಸ್‌ಫರ್ಡ್ ಪಾಟೀಲ್ಸ್ ಪ.ಪೂ ವಿಜ್ಞಾನ ಮಹಾವಿದ್ಯಾಲದ ನೂತನ ಶಾಖೆಯನ್ನು ಇದೆ 2026 ರಲ್ಲಿ ಪ್ರಾರಂಭಿಸಲಾಗುವುದು ಎಂದು ಬಾಗಲಕೋಟ ಜನರಿಗೆ ಸಿಹಿ ಸುದ್ದಿಯನ್ನು ನೀಡಿದರು.

ವರದಿ:ಜಿ.ಎನ್ ಬೀರಗೊಂಡ (ಮುತ್ತು)

ಮುದ್ದೇಬಿಹಾಳ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button