ಭಾಗಶಃ ಕಾಮಗಾರಿಯನ್ನು ಸಂಪೂರ್ಣ ಮಾಡಲು – ಸಾರ್ವಜನಿಕರ ಒತ್ತಾಯ.
ರೋಣ ಮಾ.15

ಪುರಸಭೆ ಆವರಣದಲ್ಲಿ ಇಂಟರ್ ಲಾಕ್ ಕಲ್ಲನ್ನು ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿ ಹಾಗೂ ಕಂದಾಯ ನಿರೀಕ್ಷಕರ ಕಚೇರಿಯ ವರೆಗೆ ಇಂಟರಲಾಕ್ ಕಲ್ಲನ್ನು ಹಾಕದಿರುವ ಅಧಿಕಾರಿಗಳು ಅರ್ಧಕ್ಕೆ ಹಾಕಿದ್ದಾರೆ ಎಂದು ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರ ಕಚೇರಿಗೆ ಬರುವ ಜನರು ಮಾತನಾಡುತ್ತಿದ್ದಾರೆ. ಪುರಸಭೆ ಕಚೇರಿಗಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಜನರು ಕಂದಾಯ ನಿರೀಕ್ಷಕರ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗೆ ಸೇವೆ ಒದಗಿಸಿ ಕೊಳ್ಳಲು ಬರುತ್ತಾರೆ ಮಳೆಗಾಲದಲ್ಲಿ ಆ ಎರಡು ಕಚೇರಿಗಳ ಮುಂದೆ ಕೆಸರು ತುಂಬಿರುತ್ತದೆ.ಜನರಿಗೆ ಆ ಎರಡು ಕಚೇರಿಯ ಒಳಗೆ ಹೋಗಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಹಾಗಾಗಿ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿ ಕಂದಾಯ ನಿರೀಕ್ಷಕರ ಕಚೇರಿಯ ವರಿಗೆ ಭಾಗಶಃ ಕಾಮಗಾರಿಯನ್ನು ಆ ಎರಡು ಕಚೇರಿಯ ತನಕ ಸಂಪೂರ್ಣವಾಗಿ ಇಂಟರ್ ಲಾಕ್ ಕಲ್ಲನ್ನು ಜೋಡಣೆ ಮಾಡಿ ಕೊಡಲು ಸಾರ್ವಜನಿಕರು ಆಗ್ರಹಿಸುತ್ತಿದ್ದು, ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಮಳೆಗಾಲದಲ್ಲಿ ಕಚೇರಿಗೆ ಬರುವ ರೈತರಿಗೆ ತೊಂದರೆ ಯಾಗದಂತೆ ಮುಂಜಾಗ್ರತ ಕ್ರಮವಾಗಿ ಈಗ ನಡೆದಿರುವ ಕಾಮಗಾರಿಯನ್ನು ಸಂಪೂರ್ಣ ಗೊಳಿಸ ಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ