ಮಾ.27 ಕ್ಕೆ ನೀರು (ಕಾಲುವೆ ನೀರು) ನಿರ್ಬಂಧ ಸರ್ಕಾರದ ಏಕಾಏಕಿ ನಿರ್ಣಯ ಖಂಡಿಸಿ – ಜಿಲ್ಲಾಧಿಕಾರಿಗಳ ಕಛೆರಿ ಮುಂದುಗಡೆ ರೈತ ಸಂಘಟನೆಗಳಿಂದ ಧರಣಿ ಸತ್ಯಗ್ರಹ.
ಯಾದಗಿರಿ ಮಾ.27

ನಾರಾಯಣಪುರ ಎಡ, ಮತ್ತು ಬಲ ದಂಡೆ ನಾಲೆಗಳಿಗೆ ಇದೇ ತಿಂಗಳು, ಮಾ. 25 ಕ್ಕೆ ನೀರು ಬಂದ್ ಮಾಡುವ ನಿರ್ಣಯ ಕೈಗೊಂಡಿರುವ ಸರ್ಕರದ ಕ್ರಮ ಖಂಡಿಸಿ ಮಾ.27 ರಂದು ಬೆಳಗ್ಗೆ 10-30ಕ್ಕೆ ಯಾದಗಿರಿ ಜಿಲ್ಲಾಧಿಕಾರಿಗಳ ಕಛೆರಿ ಮುಂದೆ ಬೃಹದಾಕಾರದ ಸತ್ಯಗ್ರಹ ನಡೆಸಲು ತಿರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ.ಎ.ಪಾಟೀಲ್ ಮದ್ದರಕಿ ತಿಳಿಸಿದ್ದಾರೆ. ಈ ಕುರಿತು ತುರ್ತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಂಗಳೂರಿನ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು ಸಹ ಅಧಿಕಾರಿಗಳು ಯಾವುದೇ ರೀತಿಯಿಂದ ನಮಗೆ ಸ್ಪಂದಿಸುವುದಿರಲಿ ಐಸಿಸಿ ನಿರ್ಣಯವಾಗಿದ್ದ ಏಪ್ರಿಲ್ 1 ನೇ. ತಾರಿಖೀನಿಂದ 6 ವರೆಗೆ ನೀರು ಹರಿಸುವ ತೀರ್ಮಾನವನ್ನು ಸಹ ಕೈಬಿಟ್ಟು ಈದೀಗ ಮಾ. 25 ಕ್ಕೆ ನೀರು ಹರಿಸುವುದನ್ನು ಬಂದ್ ಮಾಡಲು ಸರ್ಕಾರ ಪ್ರಕಟಿಸಿದ್ದು ಇದರಿಂದ ರೈತರು ನಾಟಿ ಮಾಡಿದ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗುತ್ತದೆ.ಏಪ್ರಿಲ್ 22 ರಂದು ನೀರು ಬಂದ್ ಮಾಡದೇ ಏಪ್ರಿಲ್ 10 ರ ವರಗೆ ಸತತವಾಗಿ ನೀರು ಹರಿಸಿದರೆ ಕೊನೆಯ ಭಾಗದ ರೈತರಿಗೆ ನೀರು ತಲುಪಿ ಅನುಕೂಲವಾಗುತ್ತಿತ್ತು. ಆದರೆ ಸರ್ಕಾರದ ಏಕಾಏಕಿ ನಿರ್ಣಯ ದಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ನಾರಾಯಣಪೂರ ಎಡದಂಡೆ ಬಲದಂಡೆ ಕಾಲುವೆಯಲ್ಲಿ ಸುಮಾರು 2 ಲಕ್ಷಕ್ಕಿಂತ ಹೆಚ್ಚಿನ ಹೆಕ್ಟೇರ್ ಪ್ರದೇಶವಿದ್ದು, ಶೇಂಗಾ ಮತ್ತು ವಿವಿಧ ಬೆಳೆ ಇದ್ದು, ಏಪ್ರಿಲ್ -1 ನೇ. ತಾರೀಖೀನಿಂದ 6 ನೇ. ತಾರೀಖಿವರೆಗೆ ನೀರು ಹರಿಸಿದರೂ ರೈತರ ಬೆಳೆಗಳು ನಷ್ಟವಾಗುವ ಪರಿಸ್ಥಿತಿ ಇರುವಾಗ ಏಕಾಏಕಿ ನೀರು ಹರಿಸುವ ದಿನಗಳನ್ನು ಕಡಿತ ಗೊಳಿಸಿ ಈ ಸರ್ಕಾರ ರೈತರಿಗೆ ಅನ್ಯಾಯ ಮಾಡಿ ರೈತರ ಬೆಳೆಗೆ ಮಣ್ಣು ಹಾಕುವ ಕಾರ್ಯದಲ್ಲಿ ಮುಂದಾಗಿದೆ. ಈ ನಿರ್ಣಯ ಖಂಡಿಸಿ ಸಾವಿರಾರು ರೈತರು ಯಾದಗಿರಿ ಜಿಲ್ಲಾಧಿಕಾರಿಗಳ ಕಛೆರಿ ಮುಂದುಗಡೆ ಬೃಹದಾಕಾರದ ಧರಣಿ ಸತ್ಯಗ್ರಹ ಹಮ್ಮಿಕೋಳಲಾಗಿದೆ. ಎಲ್ಲಾ ಜಿಲ್ಲೆ, ತಾಲೂಕುಗಳ ಪದಾಧಿಕಾರಿಗಳು ಈ ಧರಣಿಯಲ್ಲಿ ಭಾಗಿಯಾಗುತ್ತಾರೆ ಹಾಗೂ ಸಾವಿರಾರೂ ರೈತರು ಸಹ ಭಾಗವಹಿಸುತ್ತಿದ್ದಾರೆ ಎಂದು ಕಲಬುರಗಿ ಜಿಲ್ಲಾ ಕಾರ್ಯಾಧ್ಯಕ್ಷರು ಸಂತೋಷಗೌಡ.ಜಿ ಮಾಲಿಪಾಟೀಲ ಸಮಸ್ತ ಎಲ್ಲಾ ಪದಾಧಿಕಾರಿಗಳಿ ಮತ್ತು ರೈತ ಬಾಂಧವರು ಈ ಧರಣೀ ಸತ್ಯಾಗ್ರಹದಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕೆಂದು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಚಾನಲ್ ದ ಮೂಲಕ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್. ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ್.ಎನ್.ನೀಲಕೋಡ್.ಇಜೇರಿ