ಜೀವನ ವೆಂದರೆ ಸಕಾರಾತ್ಮಕ ಹೋರಾಟ – ಮಾತಾಜೀ ತ್ಯಾಗಮಯೀ ಅಭಿಪ್ರಾಯ.
ಚಳ್ಳಕೆರೆ ಮಾ.27

ಜೀವನ ವೆಂದರೆ ಸಕಾರಾತ್ಮಕ ಹೋರಾಟ ವಾಗಿರುತ್ತದೆ ಎಂದು ನಗರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅಭಿಪ್ರಾಯ ಪಟ್ಟರು. ನಗರದ ಶ್ರೀಶಾರದಾಶ್ರಮದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಗಳಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಜೀವನ ಎಂದರೇನು? ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

‘ಜೀವನ ವೆಂದರೆ ಜನನ-ಮರಣದ ನಡುವಿನ ಅವಧಿಯಾಗಿದ್ದು ಈ ಸಮಯದಲ್ಲಿ ನಾವು ಹೇಗೆ ಆದರ್ಶವನ್ನು ಇಟ್ಟುಕೊಂಡು ಬದುಕುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ.

ಸ್ವಾಮಿ ವಿವೇಕಾನಂದರು ಹೇಳುವಂತೆ ಜೀವನದ ಕಷ್ಟಗಳಿಗೆ ಅಂಜಿ ಓಡಿ ಹೋಗದೆ ಅವುಗಳನ್ನು ಧೈರ್ಯದಿಂದ ಎದುರಿಸ ಬೇಕು.ಆಗ ಮಾತ್ರ ನಾವು ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು. ನಮ್ಮ ಬದುಕಿಗೊಂದು ನಿರ್ದಿಷ್ಟ ಸತ್ಸಂಕಲ್ಪ ಇರಬೇಕು. ನಿರ್ಭಯತೆ, ಪರೋಪಕಾರ, ಸೇವೆ ಮತ್ತು ತ್ಯಾಗದಂತಹ ಸದ್ಗುಣಗಳನ್ನು ಬೆಳೆಸಿ ಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಕಾರ್ಯಕ್ರಮದ ಆರಂಭದಲ್ಲಿ ಭಜನೆಯನ್ನು ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್.ಎಂ ಸಿದ್ದಾಪುರ ನಡೆಸಿ ಕೊಟ್ಟರು. ಈ ಸತ್ಸಂಗದಲ್ಲಿ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮಂಜುಳ ಉಮೇಶ್, ಡಾ, ಭೂಮಿಕ, ಸಂತೋಷ್, ಮಾನ್ಯ, ಚೇತನ್, ಯಶೋಧಾ ಪ್ರಕಾಶ್, ಅಂಬಣ್ಣ,ದೀಪ ರಾಘವೇಂದ್ರ, ಮನೀಷ್,ಚಂದನ್ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.