🚨 **BREAKING NEWS** 🚨ಕೊಲ್ಲೂರು ಪೊಲೀಸರ ಚಾಣಾಕ್ಷತನ – ಕಳೆದು ಹೋದ ಚಿನ್ನದ ಸರ, ನಗದು ಕೇವಲ 2 ಗಂಟೆಗಳಲ್ಲಿ ಪತ್ತೆ..!
ಕೊಲ್ಲೂರು ಮೇ.07

ಇಲ್ಲಿನ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಕೇರಳ ಮೂಲದ ಭಕ್ತರೊಬ್ಬರು ಕಳೆದು ಕೊಂಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ಕೊಲ್ಲೂರು ಪೊಲೀಸರು ಕೇವಲ ಎರಡೇ ಗಂಟೆಗಳಲ್ಲಿ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಘಟನೆಯ ವಿವರ:-
ಕೇರಳ ರಾಜ್ಯದಿಂದ ಶ್ರೀ ಮೂಕಾಂಬಿಕಾ ದೇವಿಯ ದರ್ಶನಕ್ಕೆ ಬಂದಿದ್ದ ಭಕ್ತರೊಬ್ಬರು ದೇವಸ್ಥಾನದ ಆವರಣದಲ್ಲಿ ತಮ್ಮ ಪರ್ಸ್ ಅನ್ನು ಅಜಾಗರೂಕತೆ ಯಿಂದ ಕಳೆದು ಕೊಂಡಿದ್ದರು. ಈ ಪರ್ಸ್‌ನಲ್ಲಿ “02 ಚಿನ್ನದ ಸರಗಳು” ಮತ್ತು “ನಗದು ಹಣ” ಇತ್ತು. ಪರ್ಸ್ ಕಾಣೆಯಾದ ಕೂಡಲೇ ಆತಂಕಕ್ಕೊಳಗಾದ ಭಕ್ತರು ಕೂಡಲೇ ಕೊಲ್ಲೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಕಾರ್ಯಾಚರಣೆ ನಡೆದ ಹಾದಿ:-
ದೂರು ಸ್ವೀಕರಿಸಿದ ತಕ್ಷಣ ಕಾರ್ಯ ಪ್ರವೃತ್ತರಾದ ಕೊಲ್ಲೂರು ಪೊಲೀಸರು.
ದೇವಸ್ಥಾನದ ಸುತ್ತ ಮುತ್ತಲಿನ:-
“CCTV ಕ್ಯಾಮೆರಾಗಳನ್ನು” ತೀವ್ರ ತಪಾಸಣೆ ನಡೆಸಿದರು.”ತಾಂತ್ರಿಕ ವಿಶ್ಲೇಷಣೆ ಮತ್ತು ಸ್ಥಳೀಯ ಮಾಹಿತಿಗಳನ್ನು ಬಳಸಿ ಕೊಂಡು ಕೇವಲ “02 ಗಂಟೆಗಳ ಅಲ್ಪಾವಧಿಯಲ್ಲಿ” ಪರ್ಸ್ ಪತ್ತೆ ಹಚ್ಚುವಲ್ಲಿ ಯಶಸ್ವಿ ಯಾದರು.ಯಾವುದೇ ಅನಾಹುತವಾಗದಂತೆ ಪರ್ಸ್‌ನಲ್ಲಿದ್ದ ಎಲ್ಲಾ ಚಿನ್ನಾಭರಣ ಮತ್ತು ಹಣವನ್ನು ಸುರಕ್ಷಿತವಾಗಿ ವಶಪಡಿಸಿ ಕೊಂಡರು.
ವಾರಸುದಾರರಿಗೆ ಹಸ್ತಾಂತರ:-
ಪತ್ತೆಯಾದ ಚಿನ್ನದ ಸರಗಳು ಹಾಗೂ ನಗದನ್ನು ಪೊಲೀಸರು ವಾರಸುದಾರರನ್ನು ಕರೆಸಿ ಅವರ ಸಮ್ಮುಖದಲ್ಲೇ ಹಸ್ತಾಂತರಿಸಿದರು. ಕಳೆದು ಹೋದ ವಸ್ತುಗಳನ್ನು ಅತಿ ಶೀಘ್ರವಾಗಿ ಮರಳಿ ಪಡೆದ ಕೇರಳದ ಭಕ್ತರು ಕೊಲ್ಲೂರು ಪೊಲೀಸರ ಕಾರ್ಯ ಕ್ಷಮತೆ ಮತ್ತು ಪ್ರಾಮಾಣಿಕತೆಯನ್ನು ಕಂಡು ಕಣ್ಣೀರಿಡುತ್ತಾ ಧನ್ಯವಾದ ಅರ್ಪಿಸಿದರು.
“ಸಾರ್ವಜನಿಕರ ಆಸ್ತಿ ರಕ್ಷಣೆ ನಮ್ಮ ಆದ್ಯತೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಯಾಗದಂತೆ ನೋಡಿ ಕೊಳ್ಳಲು ನಮ್ಮ ತಂಡ ಸದಾ ಸನ್ನದ್ಧವಾಗಿರುತ್ತದೆ.” ಅನ್ನೋದನ್ನ “ಕೊಲ್ಲೂರು ಪೊಲೀಸ್ ಇಲಾಖೆ” ಯವರು ತಿಳಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ.

