ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ – ವಿದ್ಯಾರ್ಥಿ ಶಿಬಿರ.
ಚಳ್ಳಕೆರೆ ಮೇ .19

ನಗರದ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ವಿಶೇಷ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೆ ಭಜನೆ, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು, ಸ್ವಾಮಿ ವಿವೇಕಾನಂದರ ಚೈತನ್ಯ ದಾಯಕ ನುಡಿ ಮುತ್ತುಗಳ ಪಠಣ ಹಾಗೂ ರಸಪ್ರಶ್ನಾ ಕಾರ್ಯಕ್ರಮವನ್ನು ನಡೆಸಲಾಯಿತು.

ಶಿಬಿರದ ದಿವ್ಯ ಸಾನಿಧ್ಯವನ್ನು ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸ್ವಯಂ ಸೇವಕರಾದ ಸಂತೋಷಕುಮಾರ್ ಅಗಸ್ತ್ಯ, ಡಾ, ಭೂಮಿಕ, ಯತೀಶ್.ಎಂ ಸಿದ್ದಾಪುರ, ಜಿ.ಯಶೋಧಾ ಪ್ರಕಾಶ್, ಬಸವರಾಜ್. ವಿದ್ಯಾರ್ಥಿಗಳಾದ ಹರ್ಷಿತಾ, ಪ್ರತೀಕ್ಷಾ, ಲಕ್ಷ್ಮೀ, ಯಶಸ್ವಿ, ಧ್ರುವ ನಾರಾಯಣ, ನಿಖಿಲೇಶ್ ಯಾದವ್, ದೈವಿಕ್, ಯಶಸ್ಸ್, ದವನ್, ವಿವಿಕ್ತಾ ಸೇರಿದಂತೆ ಇತರರಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ,ಚಳ್ಳಕೆರೆ.